Posts

Showing posts from August, 2020

ಈಶೋಪನಿಷತ್

ಉಪನಿಷತ್ತಗಳು ವೇದ ಸಾಹಿತ್ಯವನ್ನು ಮೂರು ವಿಭಾಗಗಳಾಗಿ ವಿಭಜಿಸಬಹುದು   ಸಂಹಿತೆಗಳು - ದೇವರುಗಳನ್ನು ಸ್ತುತಿಸಿ, ಪೂಜಿಸಿ ಆರಾಧಿಸುವ ಮಂತ್ರಗಳನ್ನು ಒಳಗೊಂಡ ಸಂಹಿತೆಗಳು ವೇದದ ಅತಿ ಹಳೆಯ ಭಾಗದಲ್ಲಿ ಕಂಡುಬರುತ್ತವೆ. ಬ್ರಾಹ್ಮಣಗಳು - ಪೂಜೆ, ಪುನಸ್ಕಾರ, ಯಜ್ಞ-ಯಾಗಾದಿಗಳ ವಿಧಿ ವಿಧಾನವನ್ನು ಇವು ವಿವರಿಸುತ್ತವೆ.  ಉಪನಿಷತ್ತುಗಳು - ಇವು ಆಚರಣೆ, ಪೂಜೆ, ಪುನಸ್ಕಾರಗಳ ಬದಲು ತತ್ವ ಜ್ಞಾನ ಹಾಗೂ ಅಧ್ಯಾತ್ಮದ ವಿವರಣೆಯನ್ನು ಹೊಂದಿವೆ. ಆತ್ಮ ಹಾಗೂ ಪರಮಾತ್ಮನ ಭೇದ ಹಾಗೂ ಐಕ್ಯವನ್ನು ಸಾರುವ ಗ್ರಂಥಗಳು ಇವು. ವೇದಗಳು ಕರ್ಮಕಾಂಡವನ್ನು ವಿವರಿಸಿದರೆ ಉಪನಿಷತ್ತುಗಳು ಜ್ಞಾನಕಾಂಡವನ್ನು,  ತತ್ವಜ್ಞಾನವನ್ನು ಒಳಗೊಂಡು ಬಹಳವೇ ಪ್ರಸಿದ್ಧವಾಗಿವೆ. ವೇದಗಳು ಪೂಜೆ, ಆಚರಣೆ, ಯಜ್ಞ ಇತ್ಯಾದಿಗಳಿಗೆ ಪ್ರಾಮುಖ್ಯತೆ ಕೊಟ್ಟರೆ, ಉಪನಿಷತ್ತುಗಳು   ಆತ್ಮಜ್ಞಾನ, ಧ್ಯಾನ ಇತ್ಯಾದಿ ಆಧ್ಯಾತ್ಮವನ್ನು  ವಿವರಿಸುತ್ತವೆ.   ಒಟ್ಟು 108 ಉಪನಿಷತ್ತುಗಳಿವೆ ಎಂದು ಹೇಳಲಾಗುವದು-  ಅವುಗಳಲ್ಲಿ  ಪ್ರಮುಖ ವೆಂದರೆ - ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ, ತೈತ್ತರೀಯ, ಐತ್ತರೀಯ, ಚಾಂಡೋಗ್ಯ ಹಾಗೂ ಬ್ರಹದಾರಣ್ಯಕ.  ಈಶ ಉಪನಿಷತ್ ಈಶೋಪನಿಷತ್ ಶುಕ್ಲ ಯಜುರ್ವೇದದ ಭಾಗವಾಗಿದೆ. ಇದು ವಾಜಸನೇಯ ಸಂಹಿತೆಗೆ ಸೇರಿದುದರಿಂದ ಇದಕ್ಕೆ 'ವಾಜಸನೇಯ ಸಂಹಿತೋಪನಿಷತ್'ಎಂದೂ ಹೆಸರಿದೆ.  ಇದರ ...