ಮನೀಷ ಪಂಚಕಂ
ಮನೀಷ ಪಂಚಕವನ್ನು ಬರೆದವರು ಜಗದ್ಗುರು ಆದಿ ಶಂಕರಾಚಾರ್ಯರು. ಶ್ರೀ ಶಂಕರರು ತಮ್ಮ ಬ್ರಹ್ಮ ಸೂತ್ರದ ವ್ಯಾಖ್ಯಾನ (ಭಾಷ್ಯ)ದಲ್ಲಿ ವೇದಗಳ ಪಠಣವನ್ನು ಮೇಲ್ಜಾತಿಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ಜಾತೀವಾದವನ್ನು ಪ್ರತಿಪಾದಿಸಿದ್ದಕ್ಕಾಗಿ ಪಾಶ್ಚಿಮಾತ್ಯ ವಿದ್ವಾಂಸರು ಅವರನ್ನು ಟೀಕಿಸುತ್ತಾದರೆ. ಆದಾರೂ ಭಾಷ್ಯ ಬರೆಯುವವರು, ಒಂದು ಪಠ್ಯಕ್ಕೆ ವ್ಯಾಖ್ಯಾನ ಬರೆಯುವಾಗ ಅದರ ಮೂಲ ಅರ್ಥಕ್ಕೆ ಸೀಮಿತರಾಗಿರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ಉಪದೇಶಸಹಸ್ರಿ ಮತ್ತು ಸಣ್ಣ ಕೃತಿಯಾದ ಈ ಮನೀಶ ಪಂಚಕದಂತಹ ಸ್ವತಂತ್ರ ರಚನೆಗಳಲ್ಲಿ ಅವರು ತಮ್ಮ ಅದ್ವೈತ ಸಿದ್ಧಾಂತವನ್ನು ಸಕಲ ವೈಭವದೊಂದಿಗೆ ವಿವರಿಸುತ್ತಾರೆ. ಅದ್ವೈತ ಸಿದ್ಧಾಂತವು ಜಾತಿ, ಮತ, ಧರ್ಮ, ಲಿಂಗಗಳ ವ್ಯತ್ಯಾಸಗಳನ್ನು ಗುರುತಿಸುವುದಿಲ್ಲ - ಏಕೆಂದರೆ ನಾವೆಲ್ಲರೂ ಒಬ್ಬನೇ ಬ್ರಹ್ಮನ ಬೇರೆ ಬೇರೆ ರೂಪಗಳು. ಈ ಕೃತಿಯ ಸನ್ನಿವೇಶವು ಭಾರತದ ಪವಿತ್ರ ಕ್ಷೇತ್ರವಾದ ವಾರಣಾಸಿಯಲ್ಲಿ ನಡೆದಿದೆ. ಅದ್ವೈತ ಶಾಸ್ತ್ರದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರು ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ದಾರಿಯಲ್ಲಿ ಒಬ್ಬ ಚಂಡಾಲನನ್ನು ನೋಡಿ, ಆ ದಿನಗಳಲ್ಲಿನ ಪದ್ಧತಿಯ ಪ್ರಕಾರ ದೂರವನ್ನು ಕಾಯ್ದುಕೊಳ್ಳಲು ಸನ್ನೆ ಮಾಡಿದರು. ಆ ಚಂಡಾಲ ಭಗವಾನ್ ಶಂಕರ(ಶಿವ)ನೇ ಹೊರತು ಬೇರಾರೂ ಅಲ್ಲ! ಹಾಗೆ ಸನ್ನೆ ಮಾಡಿದಾಗ, ಶಿವನು ತನ್ನ ಭಕ್ತ ಶಂಕಾರಾಚ...