Posts

ಭಕ್ತಿ ಯೋಗ - ಗೀತಾ ೧೨ನೇ ಅಧ್ಯಾಯ

  ಅಥ ದ್ವಾದಶೋಽಧ್ಯಾಯಃ . ಭಕ್ತಿಯೋಗಃ ಅರ್ಜುನ ಉವಾಚ . ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ . ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ .. ೧೨-೧..  ನಿನ್ನನ್ನು ಸತತವಾಗಿ ಭಕ್ತಿಯಿಂದ ಉಪಾಸನೆ ಮಾಡುವವರು ಹಾಗೂ ನಿರ್ಗುಣ ಬ್ರಹ್ಮನನ್ನು - ಅಕ್ಷರ ಬ್ರಹ್ಮನನ್ನು ಆರಾಧಿಸುವವರು ಇವರಿಬ್ಬರಲ್ಲಿ ಯಾರು ಯೋಗವತ್ತಮರು?  ಶ್ರೀಭಗವಾನುವಾಚ . ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ . ಶ್ರದ್ಧಯಾ ಪರಯೋಪೇತಾಃ ತೇ ಮೇ ಯುಕ್ತತಮಾ ಮತಾಃ .. ೧೨-೨.. ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ . ಸರ್ವತ್ರಗಮಚಿಂತ್ಯಂಚ ಕೂಟಸ್ಥಮಚಲಂಧ್ರುವಂ .. ೧೨-೩.. ಸನ್ನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ . ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ .. ೧೨-೪.. ಕ್ಲೇಶೋಽಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಂ . ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ .. ೧೨-೫.. ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ . ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ .. ೧೨-೬.. ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್ . ಭವಾಮಿ ನಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಂ .. ೧೨-೭.. ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ . ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ .. ೧೨-೮.. ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಂ . ಅಭ್ಯಾಸಯೋಗೇ...

ವಿಶ್ವರೂಪದರ್ಶನ ಯೋಗ - ಗೀತಾ ೧೧ನೇ ಅಧ್ಯಾಯ

 ಅಥೈಕಾದಶೋಽಧ್ಯಾಯಃ .   ವಿಶ್ವರೂಪದರ್ಶನಯೋಗಃ         ಅರ್ಜುನ ಉವಾಚ . ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಂ . ಯತ್ತ್ವಯೋಕ್ತಂ ವಚಸ್ತೇನ ಮೋಹೋಽಯಂ ವಿಗತೋ ಮಮ .. ೧೧-೧.. ಮತ್+ಅನುಗ್ರಹಾಯ = ನನ್ನ ಅನುಗ್ರಹಕ್ಕಾಗಿ   ಗುಹ್ಯಮ್=ರಹಸ್ಯಮಯವಾದ  ಅಧ್ಯಾತ್ಮ ಸಂಜ್ಞಿತಮ್=ಅಧ್ಯಾತ್ಮವೆಂಬ ಹೆಸರುಳ್ಳ ಯತ್=ಯಾವುದು ತ್ವಯಾ=ನಿನ್ನಿಂದ ಉಕ್ತಂ=ಹೇಳಿದ ವಚಃ=ಮಾತು ತೇನ=ಅದರಿಂದ ಮೋಹ+ಅಯಂ=ಈ ಮೋಹ ವಿಗತ=ಮಾಯವಾಯಿತು ಮಮ=ನನ್ನ ನನ್ನ ಮೇಲೆ ಅನುಗ್ರಹದಿಂದ ನೀನು ಯಾವ ಅಧ್ಯಾತ್ಮದ ಮಾತನ್ನು ಹೇಳಿದೆಯೋ ಅದರಿಂದ ನನ್ನ ಈ ಮೋಹವು ನಾಶವಾಯಿತು. ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ . ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಂ .. ೧೧-೨.. ಭವ=ಸೃಷ್ಟಿ ಅಪ್ಯಯ=ವಿನಾಶ ಹಿ=ನಿಜವಾಗಿ ಭೂತಾನಾಂ=ಜೀವಿಗಳ ಶ್ರುತೌ=ಕೇಳಲ್ಪಟ್ಟ  ವಿಸ್ತರಶೋ=ವಿಸ್ತಾರವಾಗಿ ಮಯಾ=ನನ್ನಿಂದ ತ್ವತ್ತಃ=ನಿನ್ನ ಕಮಲಪತ್ರಾಕ್ಷ=ಕಮಲದ ಎಲೆಯಂತಹ ಕಣ್ಣುಳ್ಳವನು - ಕೃಷ್ಣ ಮಾಹಾತ್ಮ್ಯಂ=ಮಹಾತ್ಮೆಯನ್ನು ಅಪಿ=ಸಹ ಚ=ಹಾಗೂ ಅವ್ಯಯಂ=ಅವ್ಯಯವಾದ  ಹೇ ಕಮಲಪತ್ರಾಕ್ಷನೇ, ಜೀವಿಗಳ ಉತ್ಪತ್ತಿ ಹಾಗೂ ಲಯಗಳ ಬಗ್ಗೆ ಹಾಗೂ ನಿನ್ನ ಮಹಾತ್ಮೆಯನ್ನು ಸಹ ವಿಸ್ತಾರವಾಗಿ ನಾನು ಕೇಳಿದೆನು.  ಏವಮೇತದ್ಯಥಾತ್ಥ  ತ್ವಮಾತ್ಮಾನಂ ಪರಮೇಶ್ವರ . ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ .. ೧೧-೩.. ...

ಭಗವದ್ಗೀತಾ ಆರತಿ

ನಮ್ಮ ಧರ್ಮದ ಯಾವುದಾದರೂ ಕೃತಿ ಅತಿ ಪ್ರಸಿದ್ಧವಾಗಿದೆ ಎಂದರೆ ಅದು ಭಗವದ್ಗೀತೆ. ಬಹಳ ಕ್ಲಿಷ್ಟವಲ್ಲದ ಭಾಷೆಯಲ್ಲಿ ಜನ-ಸಾಮಾನ್ಯರೂ ಅರಿಯಬಲ್ಲಾದ ತತ್ವಜ್ಞಾನವನ್ನು ತಿಳಿಸಿಹೇಳಿ ಮನುಜರ ಮನಸ್ಸನ್ನು ಪ್ರಶಾಂತಗೊಳಿಸುವ ಕೃತಿ ಇದು. ಆದರೆ ಒಂದು ಸಮಸ್ಯೆಯೆಂದರೆ ಭಗವದ್ಗೀತೆ ಇರುವದು ಸಂಸ್ಖೃತದಲ್ಲಿ - ಅದೂ ಪದ್ಯ ರೂಪದಲ್ಲಿ - ಸ್ವಲ್ಪ ಕಷ್ಟ. ನಮ್ಮ ತಾಯಿ ಅವರ ಸೋದರತ್ತೆಯಿಂದ ಕಲಿತ ಗೀತೆಯ ಕನ್ನಡಾನುವಾದ - ಸಂಕ್ಷಿಪ್ತ ಅನುವಾದ - ಅದೂ ಆರತಿಯ ಪದ್ಯ ರೂಪದಲ್ಲಿರುವ ಅನುವಾದ ಮೊನ್ನೆ ಕೇಳಿದೆ. ಬಹಳ ಇಷ್ಟವಾಯಿತು. ನಿಮಗೆ ಹೇಗೆನಿಸುತ್ತದೆ ನೋಡಿ. ---------------------------------------------------------------------  ಧನ್ಯನಾದೆನು ಕೇಳಿ ನಿನ್ನಿಂದ |  ಮನದೊಳಗೆ ನಿಂದ| ಮೋಹವಡಗಿತು ಹರಿಯೆ ಭರದಿಂದ|| ಜ್ಞಾನದಿಂ ಭೂತಗಳ ಸೃಷ್ಟಿ | ಪ್ರಳಯ ನಿನ್ನಿಂದೆಂಬುದರಿತೆನು| ವಿಶ್ವರೂಪವ ನಿನ್ನದನು| ತೋರೆಂದ ಪಾರ್ಥಗೆ ತೋರಿದಾತನಿ||  ಗಾರತಿಯ ನಾನೆತ್ತಿ ಬೇಡುವೆನು| ಶ್ರೀ ಹರಿಯೆ ವರವನು| ನೀಡು ನೀ ನಿನಗಿಷ್ಟವಾದುದನು||೧||   ನೋಡಲಾಗದು ನರನೆ ನಿನ್ನಿಂದ| ಈ ಕಣ್ಣಿನಿಂದ| ನನ್ನ ರೂಪವ ನಿನ್ನ ಮುನ್ನಿಂದ|| ದಿವ್ಯ ನೇತ್ರವ ಕೊಡುವೆ ನೀ| ನೋಡೆನ್ನನೆಂದವಗಿತ್ತು ತೋರುವ| ವಿಶ್ವರೂಪವ ಧರಿಸಿ ನಾನಾ ರೂಪದಿಂ ಮುನ್ನಿಂದ ಮಾಧವ|| ಗಾರತಿಯ ನಾನೆತ್ತಿ ಬೇಡುವೆನು||೨||   ನೋಡು ನೀನೆಂದೆನುತ ಗೋವಿಂದ | ಬಹುರೂಪದಿಂದ...

ಮುಂಡಕ ಉಪನಿಷತ್ತು

Image
  ಪರಿಚಯ  ಮುಖ್ಯ ಉಪನಿಷತ್ತುಗಳಲ್ಲಿ ಒಂದಾದ ಮುಂಡಕ ಉಪನಿಷತ್ತು ಅಥರ್ವವೇದದಲ್ಲಿ ಕಂಡುಬರುತ್ತದೆ. ಇದು ಪದ್ಯ ಉಪನಿಷತ್ತು - ಕಾವ್ಯ ರೂಪದಲ್ಲಿದೆ ಹಾಗೂ ಋಷಿ ಅಂಗೀರಸ ಹಾಗೂ ಗೃಹಸ್ಥನಾದ ಶೌನಕರ ನಡುವಿನ ಸಂವಾದದ ರೂಪದಲ್ಲಿದೆ.    ಮುಂಡಕ ಶಬ್ದದ ಅರ್ಥ ತಲೆಯ ಕೂದಲನ್ನು ಕ್ಷೌರ ಮಾಡಿ ತೆಗೆಯುವದು ಎಂಬ ಅರ್ಥ. ಬಹಶಃ ಉಪನಿಷತ್ತಿಗೆ ಈ ಹೆಸರು ಕೊಡಲು  ಕಾರಣ- ಇದು ನಮ್ಮ ಅಜ್ಞಾನವನ್ನು ಹಾಗೂ ಅವಿದ್ಯೆಯನ್ನು  ಮುಂಡನ ಮಾಡುತ್ತದೆ.    ಈ ಉಪನಿಷತ್ತಿನಲ್ಲಿ ಮೂರು ವಿಭಾಗಗಳಿವೆ - ಅವುಗಳನ್ನು ಮುಂಡಕ ಎಂದು ಕರೆಯಲಾಗಿದೆ.  ಮೊದಲನೆಯ ಮುಂಡಕ ಪರ ಹಾಗೂ ಅಪರ ವಿದ್ಯೆಗಳನ್ನು ವಿವರಿಸುತ್ತದೆ - ಹಾಗೂ ಅಪರ ವಿದ್ಯೆಯ ವ್ಯರ್ಥತೆಯನ್ನು ವಿವರಿಸುತ್ತದೆ.  ಎರಡನೆಯ ಮುಂಡಕವು ಆತ್ಮ ಹಾಗೂ ಬ್ರಹ್ಮ ನ ಸ್ವರೂಪವನ್ನು, ಬ್ರಹ್ಮ ಹಾಗೂ ಬಾಹ್ಯ ಪ್ರಪಂಚದ ಸಂಬಂಧವನ್ನು ಹಾಗೂ ಬ್ರಹ್ಮ ಜ್ಞಾನವನ್ನು ಪಡೆಯುವ ವಿಧಾನವನ್ನು ವಿವರಿಸುತ್ತದೆ.  ಮೂರನೆಯ ಮುಂಡಕ ಇದೇ ವಿವರಣೆಯನ್ನು ಮುಂದುವರಿಸುತ್ತದೆ. ಸತ್ಯಮೇವ ಜಯತೇ - ಸತ್ಯವೇ ಜಯಿಸುತ್ತದೆ - ನಾವೆಲ್ಲ ಬಹಳ ಕೇಳಿರುವ ಈ ನುಡಿ ಮುಂಡಕ ಉಪನಿಷತ್ತಿನ ಭಾಗವಾಗಿದೆ. ನಮ್ಮ ದೇಶದ ರಾಷ್ಟ್ರೀಯ ಲಾಂಛನವಾದ ಅಶೋಕ ಚಕ್ರದಲ್ಲಿಯೂ ಸಹ ಈ ನುಡಿಯು ಕಂಡು ಬರುತ್ತದೆ.    ಉಪನಿಷತ್ತಿನ ಲೇಖಕ  : ಬೇರೆ ಉಪನಿಷತ್ತುಗಳಂತೆಯೇ ಮುಂಡಕ ಉಪನಿಷತ್ತನ್ನು ರ...

ಮಾಂಡೂಕ್ಯ ಉಪನಿಷತ್ತು

Image
ಮಾಂಡೂಕ್ಯ ಉಪನಿಷತ್ ಅತಿ ಚಿಕ್ಕದಾದರೂ ಮುಖ್ಯ ಉಪನಿಷತ್ತುಗಳಲ್ಲಿ ಒಂದಾಗಿದೆ. ಇದು ಕೇವಲ ೧೨ ಶ್ಲೋಕಗಳನ್ನು ಹೊಂದಿದೆ. ಅಥರ್ವ ವೇದದ ಭಾಗವಾದ ಈ ಉಪನಿಷತ್ತಿನ ರಚನೆ ಕ್ರಿ. ಪೂ. ೫ನೇ ಮತ್ತು ೨ನೇ ಶತಮಾನಗಳ ಮಧ್ಯೆ ಆಗಿರಬಹುದು ಎಂದು ಹೇಳಲಾಗುತ್ತದೆ.  ಇದರ ಭಾಷ್ಯವನ್ನು ಶಂಕರಾಚರ್ಯರ ಗುರುವಿನ ಗುರುವಾದ ಗೌಡಪಾದರು ಮಾಂಡೂಕ್ಯ ಕಾರಿಕ ಎಂಬ ಕೃತಿಯ ಜೊತೆಗೆ ಬರೆದಿದ್ದಾರೆ. ಈ ಉಪನಿಷತ್ತು ನಮ್ಮ ಪ್ರಜ್ಞೆಯ ನಾಲ್ಕು ಅವಸ್ಥೆಗಳನ್ನು ವಿವರಿಸುತ್ತದೆ - ಅವು ಜಾಗೃತ, ಸ್ವಪ್ನ, ಸುಷುಪ್ತ ಹಾಗೂ ತುರೀಯ. ತುರೀಯ ಅವಸ್ಥೆ ಮೊದಲ ಮೂರೂ ಅವಸ್ಥೆಗಳ ಹೊರತಾಗಿದೆ, ಬ್ರಹ್ಮತ್ವದ ಅವಸ್ಥೆಯಾಗಿದೆ. ಓಂ ಎನ್ನುವ ಶಬ್ದ ಈ ನಾಲ್ಕೂ ಅವಸ್ಥೆಗಳನ್ನೂ ಆವರಿಸಿದೆ ಹಾಗೂ ಈ ಬ್ರಹ್ಮಾಂಡವನ್ನು ಆವರಿಸಿದೆ.  ಈ ಉಪನಿಷತ್ತಿನ ಮೇಲೆ ಬೌದ್ಧ ಧರ್ಮದ ಪ್ರಭಾವವಿದೆ ಎಂದೂ ಹೇಳಲಾಗುತ್ತದೆ.    ತುರೀಯ - ಚತುರ್ಥೀಯ ಅವಸ್ಥೆ ಓಂ ಈ ಶಬ್ದವು ಮೂರು ವರ್ಣಗಳ ಸಂಯುಕ್ತ ಅಕ್ಷರವಾಗಿದೆ - ಅ, ಉ ಹಾಗೂ ಮ್ . ಅದರಲ್ಲಿ ಅ ಅಕ್ಷರವು ಜಾಗೃತ ಅವಸ್ಥೆಯನ್ನು ಬಿಂಬಿಸುತ್ತದೆ.  ಜಾಗೃತದಲ್ಲಿ ಪ್ರಜ್ಞೆಯು ಬಾಹ್ಯ ಜಗತ್ತಿನ ಕಡೆಗೆ ತಿರುಗಿರುತ್ತದೆ. ಉ ಅಕ್ಷರವು ಸ್ವಪ್ನ ಅವಸ್ಥೆಯನ್ನು ಬಿಂಬಿಸುತ್ತದೆ. ಸ್ವಪ್ನ ಅವಸ್ಥೆಯಲ್ಲಿ ಪ್ರಜ್ಞೆಯು ಅಂತರ್ಮುಖಿ ಆಗಿರುತ್ತದೆ.  ಮ ಅಕ್ಷರವು ಬಿಂಬಿಸುವ ಮೂರನೆ ಅವಸ್ಥೆಯಾದ ಗಾಢ ನಿದ್ರೆ ಅಥವಾ ಸುಷುಪ್ತಿಯಲ್ಲಿ ಯಾವು...