ಆತ್ಮ ಬೋಧ
ಆತ್ಮಬೋಧ ಎಂಬುದು ಅದ್ವೈತ ವೇದಾಂತದ ಒಂದು ಸಣ್ಣ ಸಂಸ್ಕೃತ ಪಠ್ಯವಾಗಿದೆ. ಅರವತ್ತೆಂಟು ಶ್ಲೋಕಗಳಲ್ಲಿರುವ ಈ ಪಠ್ಯವು ಆತ್ಮ ಜ್ಞಾನದ ಮಾರ್ಗ ಅಥವಾ ಆತ್ಮದ ಅರಿವನ್ನು ವಿವರಿಸುತ್ತದೆ. ಈ ಪಠ್ಯವನ್ನು ಶಂಕರರು ತಮ್ಮ ಶಿಷ್ಯ ಸನಂದನ, ಪದ್ಮಪಾದ ಎಂಬವವರಿಗಾಗಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆ. ಆತ್ಮ-ಬೋಧವು ಒಂದು ಪ್ರಕರಣ ಗ್ರಂಥ. ಪ್ರಕರಣ ಗ್ರಂಥ ಅಂದರೆ ಯಾವುದೇ ಮೂಲ ತತ್ವವನ್ನು ನೀಡುವ ಕೃತಿ ಅಲ್ಲ ಆದರೆ ಧರ್ಮಶಾಸ್ತ್ರಗಳಲ್ಲಿ ಬಳಸಲಾಗುವ ಪದಗಳು ಮತ್ತು ಪರಿಭಾಷೆಗಳನ್ನು ವಿವರಿಸುವ ಸಾಹಿತ್ಯ . ..ಆತ್ಮಬೋಧಃ.. ತಪೋಭಿಃ ಕ್ಷೀಣಪಾಪಾನಾಂ ಶಾಂತಾನಾಂ ವೀತರಾಗಿಣಾಂ. ಮುಮುಕ್ಷೂಣಾಮಪೇಕ್ಷ್ಯೋಽಯಮಾತ್ಮಬೋಧೋ ವಿಧೀಯತೇ..1.. ಶಬ್ದಾರ್ಥ: ತಪೋಭಿಃ=ತಪಸ್ಸುಗಳಿಂದ; ಕ್ಷೀಣಪಾಪಾನಂ=ಪಾಪ ಕ್ಷೀಣವಾದವರಿಗೆ; ಶಾಂತಾನಾಂ=ಶಾಂತಮನಸ್ಸಿನವರಿಗೆ; ವೀತರಾಗಿಣಾಂ=ರಾಗಗಳು ಇಲ್ಲದವರಿಗೆ; ಮುಮುಕ್ಷುಣಾಂ=ಮುಕ್ತಿಯ ತೀವ್ರ ಆಸೆಯಿರುವವರಿಗೆ; ಅಪೇಕ್ಷ್ಯಃ=ನಿರೀಕ್ಷೆ; ಅಯಮ್=ಈ; ಆತ್ಮಬೋಧಃ=ಆತ್ಮಬೋಧವು; ವಿಧೀಯತೇ=ಮಾಡಲ್ಪಟ್ಟಿದೆ ಅನುವಾದ: ಈ ಮೊದಲನೆಯ ಶ್ಲೋಕದಲ್ಲಿ ಲೇಖಕರು ಈ ಕೃತಿಯು ಯಾರ ಕುರಿತಾಗಿ, ಯಾರಿಗಾಗಿ ರಚಿಸಲ್ಪಟ್ಟಿದೆ ಎಂದು ಹೇಳುತ್ತಾರೆ ತಪಸ್ಸನ್ನು ಮಾಡಿ ಯಾರ ಪಾಪವು ಕ್ಷೀಣಿಸಿದೆಯೋ, ಯಾರು ಶಾಂತಚಿತ್...