Posts

Showing posts from November, 2025

ಭಗವದ್ಗೀತಾ ಆರತಿ

ನಮ್ಮ ಧರ್ಮದ ಯಾವುದಾದರೂ ಕೃತಿ ಅತಿ ಪ್ರಸಿದ್ಧವಾಗಿದೆ ಎಂದರೆ ಅದು ಭಗವದ್ಗೀತೆ. ಬಹಳ ಕ್ಲಿಷ್ಟವಲ್ಲದ ಭಾಷೆಯಲ್ಲಿ ಜನ-ಸಾಮಾನ್ಯರೂ ಅರಿಯಬಲ್ಲಾದ ತತ್ವಜ್ಞಾನವನ್ನು ತಿಳಿಸಿಹೇಳಿ ಮನುಜರ ಮನಸ್ಸನ್ನು ಪ್ರಶಾಂತಗೊಳಿಸುವ ಕೃತಿ ಇದು. ಆದರೆ ಒಂದು ಸಮಸ್ಯೆಯೆಂದರೆ ಭಗವದ್ಗೀತೆ ಇರುವದು ಸಂಸ್ಖೃತದಲ್ಲಿ - ಅದೂ ಪದ್ಯ ರೂಪದಲ್ಲಿ - ಸ್ವಲ್ಪ ಕಷ್ಟ. ನಮ್ಮ ತಾಯಿ ಅವರ ಸೋದರತ್ತೆಯಿಂದ ಕಲಿತ ಗೀತೆಯ ಕನ್ನಡಾನುವಾದ - ಸಂಕ್ಷಿಪ್ತ ಅನುವಾದ - ಅದೂ ಆರತಿಯ ಪದ್ಯ ರೂಪದಲ್ಲಿರುವ ಅನುವಾದ ಮೊನ್ನೆ ಕೇಳಿದೆ. ಬಹಳ ಇಷ್ಟವಾಯಿತು. ನಿಮಗೆ ಹೇಗೆನಿಸುತ್ತದೆ ನೋಡಿ. ---------------------------------------------------------------------  ಧನ್ಯನಾದೆನು ಕೇಳಿ ನಿನ್ನಿಂದ |  ಮನದೊಳಗೆ ನಿಂದ| ಮೋಹವಡಗಿತು ಹರಿಯೆ ಭರದಿಂದ|| ಜ್ಞಾನದಿಂ ಭೂತಗಳ ಸೃಷ್ಟಿ | ಪ್ರಳಯ ನಿನ್ನಿಂದೆಂಬುದರಿತೆನು| ವಿಶ್ವರೂಪವ ನಿನ್ನದನು| ತೋರೆಂದ ಪಾರ್ಥಗೆ ತೋರಿದಾತನಿ||  ಗಾರತಿಯ ನಾನೆತ್ತಿ ಬೇಡುವೆನು| ಶ್ರೀ ಹರಿಯೆ ವರವನು| ನೀಡು ನೀ ನಿನಗಿಷ್ಟವಾದುದನು||೧||   ನೋಡಲಾಗದು ನರನೆ ನಿನ್ನಿಂದ| ಈ ಕಣ್ಣಿನಿಂದ| ನನ್ನ ರೂಪವ ನಿನ್ನ ಮುನ್ನಿಂದ|| ದಿವ್ಯ ನೇತ್ರವ ಕೊಡುವೆ ನೀ| ನೋಡೆನ್ನನೆಂದವಗಿತ್ತು ತೋರುವ| ವಿಶ್ವರೂಪವ ಧರಿಸಿ ನಾನಾ ರೂಪದಿಂ ಮುನ್ನಿಂದ ಮಾಧವ|| ಗಾರತಿಯ ನಾನೆತ್ತಿ ಬೇಡುವೆನು||೨||   ನೋಡು ನೀನೆಂದೆನುತ ಗೋವಿಂದ | ಬಹುರೂಪದಿಂದ...

ಮುಂಡಕ ಉಪನಿಷತ್ತು

Image
  ಪರಿಚಯ  ಮುಖ್ಯ ಉಪನಿಷತ್ತುಗಳಲ್ಲಿ ಒಂದಾದ ಮುಂಡಕ ಉಪನಿಷತ್ತು ಅಥರ್ವವೇದದಲ್ಲಿ ಕಂಡುಬರುತ್ತದೆ. ಇದು ಪದ್ಯ ಉಪನಿಷತ್ತು - ಕಾವ್ಯ ರೂಪದಲ್ಲಿದೆ ಹಾಗೂ ಋಷಿ ಅಂಗೀರಸ ಹಾಗೂ ಗೃಹಸ್ಥನಾದ ಶೌನಕರ ನಡುವಿನ ಸಂವಾದದ ರೂಪದಲ್ಲಿದೆ.    ಮುಂಡಕ ಶಬ್ದದ ಅರ್ಥ ತಲೆಯ ಕೂದಲನ್ನು ಕ್ಷೌರ ಮಾಡಿ ತೆಗೆಯುವದು ಎಂಬ ಅರ್ಥ. ಬಹಶಃ ಉಪನಿಷತ್ತಿಗೆ ಈ ಹೆಸರು ಕೊಡಲು  ಕಾರಣ- ಇದು ನಮ್ಮ ಅಜ್ಞಾನವನ್ನು ಹಾಗೂ ಅವಿದ್ಯೆಯನ್ನು  ಮುಂಡನ ಮಾಡುತ್ತದೆ.    ಈ ಉಪನಿಷತ್ತಿನಲ್ಲಿ ಮೂರು ವಿಭಾಗಗಳಿವೆ - ಅವುಗಳನ್ನು ಮುಂಡಕ ಎಂದು ಕರೆಯಲಾಗಿದೆ.  ಮೊದಲನೆಯ ಮುಂಡಕ ಪರ ಹಾಗೂ ಅಪರ ವಿದ್ಯೆಗಳನ್ನು ವಿವರಿಸುತ್ತದೆ - ಹಾಗೂ ಅಪರ ವಿದ್ಯೆಯ ವ್ಯರ್ಥತೆಯನ್ನು ವಿವರಿಸುತ್ತದೆ.  ಎರಡನೆಯ ಮುಂಡಕವು ಆತ್ಮ ಹಾಗೂ ಬ್ರಹ್ಮ ನ ಸ್ವರೂಪವನ್ನು, ಬ್ರಹ್ಮ ಹಾಗೂ ಬಾಹ್ಯ ಪ್ರಪಂಚದ ಸಂಬಂಧವನ್ನು ಹಾಗೂ ಬ್ರಹ್ಮ ಜ್ಞಾನವನ್ನು ಪಡೆಯುವ ವಿಧಾನವನ್ನು ವಿವರಿಸುತ್ತದೆ.  ಮೂರನೆಯ ಮುಂಡಕ ಇದೇ ವಿವರಣೆಯನ್ನು ಮುಂದುವರಿಸುತ್ತದೆ. ಸತ್ಯಮೇವ ಜಯತೇ - ಸತ್ಯವೇ ಜಯಿಸುತ್ತದೆ - ನಾವೆಲ್ಲ ಬಹಳ ಕೇಳಿರುವ ಈ ನುಡಿ ಮುಂಡಕ ಉಪನಿಷತ್ತಿನ ಭಾಗವಾಗಿದೆ. ನಮ್ಮ ದೇಶದ ರಾಷ್ಟ್ರೀಯ ಲಾಂಛನವಾದ ಅಶೋಕ ಚಕ್ರದಲ್ಲಿಯೂ ಸಹ ಈ ನುಡಿಯು ಕಂಡು ಬರುತ್ತದೆ.    ಉಪನಿಷತ್ತಿನ ಲೇಖಕ  : ಬೇರೆ ಉಪನಿಷತ್ತುಗಳಂತೆಯೇ ಮುಂಡಕ ಉಪನಿಷತ್ತನ್ನು ರ...