ತತ್ತ್ವಬೋಧ
ತತ್ವಬೋಧ ಒಂದು ಸಂಸ್ಕ್ರತ ಪ್ರಕರಣ ಗ್ರಂ ಥ. ( ಪ್ರಕರಣ ಗ್ರಂಥವೆಂದರೆ ಪರಿಚಯಿಸುವ, ಪ್ರಾರಂಭಿಕ ಗ್ರಂಥ). ಆದಿಶಂಕರಾಚಾರ್ಯರಿಂದ ರಚಿತವಾಗಿರಬಹುದಾದ ಇದು ಗದ್ಯ ರೂಪದಲ್ಲಿದೆ. ತತ್ವಬೋಧವು ವೇದಾಂತದ ತತ್ವಗಳನ್ನು ಅತಿ ಸಂಕ್ಷಿಪ್ತವಾಗಿ ಸಂಭಾಷಣೆಯ ರೂಪದಲ್ಲಿ ಹೇಳುತ್ತದೆ. ಅಧ್ಯಾತ್ಮದ ಮುಖ್ಯ ಪದಗಳ ಅರ್ಥ ವಿವರಿಸುತ್ತದೆ. ಇದು 38 ಮುಖ್ಯ ಭಾಗಗಳನ್ನು ಹೊಂದಿ, ಒಟ್ಟು 103 ಪಂಕ್ತಿಗಳನ್ನು ಹೊಂದಿದೆ. ಇವುಗಳನ್ನು ಐದು ವಿಭಾಗಗಳಲ್ಲಿ ಜೋಡಿಸಲಾಗಿದೆ: ಉಪೋದ್ಘಾತ (ಪರಿಚಯ) ಜೀವ ವಿಚಾರ ಆತ್ಮ ವಿಚಾರ ಸೃಷ್ಟಿ ವಿಚಾರ ಜೀವ ಈಶ್ವರ ವಿಚಾರ ಜ್ಞಾನಫಲ ಪ್ರಥಮ ಹಾಗೂ ಅಂತಿಮ ವಾಕ್ಯಗಳು ಮಾತ್ರ ಶ್ಲೋಕ ರೂಪದಲ್ಲಿವೆ. ಉಳಿದೆಲ್ಲ ಸಾಲುಗಳ ಗದ್ಯ ರೂಪದಲ್ಲಿವೆ. ಶ್ರೀಶಂಕರಭಗವತ್ಪಾದಾಚಾರ್ಯಪ್ರಣೀತಃ ಮಂಗಲಾಚರಣ ವಾಸುದೇವೇಂದ್ರಯೋಗೀಂದ್ರಂ ನತ್ವಾ ಜ್ಞಾನಪ್ರದಂ ಗುರುಂ . ಮುಮುಕ್ಷೂಣಾಂ ಹಿತಾರ್ಥಾಯ ತತ್ತ್ವಬೋಧೋಭಿಧೀಯತೇ .. ಯೋಗಿಯರಲ್ಲಿ ಶ್ರೇಷ್ಠನಾದ, ಜ್ಞಾನವನ್ನು ನೀಡುವ ಆಧ್ಯಾತ್ಮಿಕ ಗುರು, ಭಗವಾನ್ ವಾಸುದೇವನಿಗೆ ನಾನು ನಮಸ್ಕರಿಸುತ್ತೇನೆ. ಮುಮುಕ್ಷುಗಳ (ಮುಕ್ತಿ ಬಯಸುವವರ) ಹಿತಾರ್ಥಕ್ಕಾಗಿ, ತತ್ವಬೋಧವನ್ನು ವಿವರಿಸಲಾಗುತ್ತಿದೆ. ಯಾವುದೇ ಶುಭ ಕಾರ್ಯವನ್ನು ನಾವು ಪ್ರಾರ್ಥನೆಯಿಂದ ಆರಂಭಿಸುತ್ತೇವಲ್ಲ. ಈ ಪ್ರಾರ್ಥನೆಯೊಂದಿಗೆ ಲೇಖಕ ಹೇಳುತ್ತಿರುವದು ಏನೆಂದರೆ "ಇದರ ಜ್ಞಾನದಿಂದ ನನಗೆ ಬಹಳ ಪ್ರಯೋಜನವಾಗಿದೆ. ಅದಕ್ಕಾಗಿ ನಾ...