Posts

Showing posts from July, 2023

ಶಿವಮಾನಸ ಪೂಜಾ

ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ ನಾನಾರತ್ನವಿಭೂಷಿತಂ ಮೃಗಮದಾಮೋದಾಂಕಿತಂ ಚಂದನಂ . ಜಾತೀಚಂಪಕಬಿಲ್ವಪತ್ರರಚಿತಂ ಪುಷ್ಪಂ ಚ ಧೂಪಂ ತಥಾ ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಂ .. 1.. ರತ್ನಗಳಿಂದ ಅಲಂಕೃತವಾದ ಆಸನವನ್ನು ನಿನಗೆ ಅರ್ಪಿಸುವೆನು. ಸ್ನಾನಕ್ಕಾಗಿ ಹಿಮಾಲಯದ ಜಲವನ್ನು, ದಿವ್ಯ ಬಟ್ಟೆಯನ್ನು, ನಾನಾ ರತ್ನಗಳಿಂದ ಅಲಂಕರಿಸಲ್ಪಟ್ಟ , (ದಿವ್ಯ ಬಟ್ಟೆಯನ್ನು ಅರ್ಪಿಸುವೆನು), ಕಸ್ತೂರಿಯನ್ನು ಮತ್ತು ಚಂದನವನ್ನು ಲೇಪಿಸುವೆನು ಮಲ್ಲಿಗೆ, ಸಂಪಿಗೆ, ಬಿಲ್ವ ಪತ್ರೆ ಇತ್ಯಾದಿ ಹೂವುಗಳನ್ನು ಅರ್ಪಿಸುವೆನು. ಧೂಪವನ್ನು ಹಚ್ಚುವೆನು. ದೀಪವನ್ನು ಹಚ್ಚುವೆನು. ಪಶುಪತಿಯೇ, ದಯಾನಿಧಿಯೇ, ನನ್ನ ಹೃದಯದಿಂದ ಕಲ್ಪಿತವಾದ ಇವೆಲ್ಲವುಗಳನ್ನು ದಯವಿಟ್ಟು ಸ್ವೀಕರಿಸು. ಸೌವರ್ಣೇ ನವರತ್ನಖಂಡರಚಿತೇ ಪಾತ್ರೇ ಘೃತಂ ಪಾಯಸಂ ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಂ . ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ಜ್ವಲಂ ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು .. 2.. ಚಿನ್ನದ, ನವರತ್ನಗಳಿಂದ ಅಲಂಕರಿಸಲ್ಪಟ್ಟ ಪಾತ್ರೆಯಲ್ಲಿ ನಾನು ನಿನಗೆ ಘ್ರತವನ್ನು (ತುಪ್ಪವನ್ನು) ಮತ್ತು ಪಾಯಸವನ್ನು ಅರ್ಪಿಸುವೆನು. ಪಯ (ಹಾಲು), ಮೊಸರು ಬಾಳೆಹಣ್ಣನ್ನು ಒಳಗೊಂಡ ಪಂಚವಿಧವಾದ ಭಕ್ಷ್ಯವನ್ನು ಅರ್ಪಿಸುವೆನು. ಹಣ್ಣು ತರಕಾರಿಗಳನ್ನೊಳಗೊಂಡ ರುಚಿಕರವಾದ ಜಲ ಮತ್ತು ಪಾನಕವನ್ನು ನಿನಗ...