ಶಿವಮಾನಸ ಪೂಜಾ
|
ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ ನಾನಾರತ್ನವಿಭೂಷಿತಂ ಮೃಗಮದಾಮೋದಾಂಕಿತಂ ಚಂದನಂ . ಜಾತೀಚಂಪಕಬಿಲ್ವಪತ್ರರಚಿತಂ ಪುಷ್ಪಂ ಚ ಧೂಪಂ ತಥಾ ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಂ .. 1.. |
ರತ್ನಗಳಿಂದ ಅಲಂಕೃತವಾದ ಆಸನವನ್ನು ನಿನಗೆ ಅರ್ಪಿಸುವೆನು. ಸ್ನಾನಕ್ಕಾಗಿ ಹಿಮಾಲಯದ ಜಲವನ್ನು, ದಿವ್ಯ ಬಟ್ಟೆಯನ್ನು, ನಾನಾ ರತ್ನಗಳಿಂದ ಅಲಂಕರಿಸಲ್ಪಟ್ಟ , (ದಿವ್ಯ ಬಟ್ಟೆಯನ್ನು ಅರ್ಪಿಸುವೆನು), ಕಸ್ತೂರಿಯನ್ನು ಮತ್ತು ಚಂದನವನ್ನು ಲೇಪಿಸುವೆನು
ಮಲ್ಲಿಗೆ, ಸಂಪಿಗೆ, ಬಿಲ್ವ ಪತ್ರೆ ಇತ್ಯಾದಿ ಹೂವುಗಳನ್ನು ಅರ್ಪಿಸುವೆನು. ಧೂಪವನ್ನು ಹಚ್ಚುವೆನು. ದೀಪವನ್ನು ಹಚ್ಚುವೆನು. ಪಶುಪತಿಯೇ, ದಯಾನಿಧಿಯೇ, ನನ್ನ ಹೃದಯದಿಂದ ಕಲ್ಪಿತವಾದ ಇವೆಲ್ಲವುಗಳನ್ನು ದಯವಿಟ್ಟು ಸ್ವೀಕರಿಸು.
|
| ಸೌವರ್ಣೇ ನವರತ್ನಖಂಡರಚಿತೇ ಪಾತ್ರೇ ಘೃತಂ ಪಾಯಸಂ ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಂ . ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ಜ್ವಲಂ ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು .. 2.. |
ಚಿನ್ನದ, ನವರತ್ನಗಳಿಂದ ಅಲಂಕರಿಸಲ್ಪಟ್ಟ ಪಾತ್ರೆಯಲ್ಲಿ ನಾನು ನಿನಗೆ ಘ್ರತವನ್ನು (ತುಪ್ಪವನ್ನು) ಮತ್ತು ಪಾಯಸವನ್ನು ಅರ್ಪಿಸುವೆನು. ಪಯ (ಹಾಲು), ಮೊಸರು ಬಾಳೆಹಣ್ಣನ್ನು ಒಳಗೊಂಡ ಪಂಚವಿಧವಾದ ಭಕ್ಷ್ಯವನ್ನು ಅರ್ಪಿಸುವೆನು. ಹಣ್ಣು ತರಕಾರಿಗಳನ್ನೊಳಗೊಂಡ ರುಚಿಕರವಾದ ಜಲ ಮತ್ತು ಪಾನಕವನ್ನು ನಿನಗೆ ನಾನು ಅರ್ಪಿಸುವೆನು. ನಂತರ ನಿನಗೆ ಕರ್ಪೂರದಾರತಿಯನ್ನು ಬೆಳಗುವೆನು. ಕೊನೆಯಲ್ಲಿ ತಾಂಬೂಲವನ್ನು ಅರ್ಪಿಸುವೆನು.ಈ ಭಕ್ತನ ಮನಸ್ಸಿನಿಂದ ವಿರಚಿತವಾದ ಇವೆಲ್ಲವನ್ನೂ - ಪ್ರಭುವೇ, ಸ್ವೀಕರಿಸು.
|
|
ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ ವೀಣಾಭೇರಿಮೃದಂಗಕಾಹಲಕಲಾ ಗೀತಂ ಚ ನೃತ್ಯಂ ತಥಾ . ಸಾಷ್ಟಾಂಗಂ ಪ್ರಣತಿಃ ಸ್ತುತಿರ್ಬಹುವಿಧಾ ಹ್ಯೇತತ್ಸಮಸ್ತಂ ಮಯಾ ಸಂಕಲ್ಪೇನ ಸಮರ್ಪಿತಂ ತವ ವಿಭೋ ಪೂಜಾಂ ಗೃಹಾಣ ಪ್ರಭೋ .. 3.. |
ನಿನಗೆ ನೆರಳಿಗಾಗಿ ಕೊಡೆಯನ್ನು ಅರ್ಪಿಸುವೆನು. ಚಾಮರದಿಂದ ನಿನಗೆ ಗಾಳಿ ಬೀಸುವೆನು. ನಿರ್ಮಲವಾದ ಕನ್ನಡಿಯನ್ನು ಅರ್ಪಿಸುವೆನು. ವೀಣೆ, ಭೇರಿ, ಮೃದಂಗ, ಕಾಹಲಗಳಿಂದ ರಚಿತವಾದ ಸಂಗೀತವನ್ನೂ ನ್ರತ್ಯವನ್ನೂ ನಿನಗೆ ಅರ್ಪಿಸುವೆನು. ಸಾಷ್ಟಾಂಗ ನಮಸ್ಕಾರ, ಪ್ರಣಾಮ, ಬಹುವಿಧ ಸ್ತುತಿ ಇವೆಲ್ಲವನ್ನೂ ಸಂಕಲ್ಪದಿಂದ ರಚಿಸಿ ನಿನಗೆ ಅರ್ಪಿಸುವೆನು. |
|
ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ . ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ .. 4.. |
ನೀನೇ ನನ್ನ ಆತ್ಮ. ತಾಯಿ ಗಿರಿಜೆ ನನ್ನ ಬುದ್ಧಿ. ಶಿವಗಣಗಳು ನನ್ನ ಪ್ರಾಣ. ನಿನ್ನ ಮನೆ ನನ್ನ ಶರೀರ. ನಾನು ಮಾಡುವ ಕೆಲಸ ಕಾರ್ಯಗಳು ನಿನ್ನ ಪೂಜೆ. ನಿದ್ರೆ ಸಮಾಧಿ. ಈ ಕಾಲೆರಡರಿಂದ ಮಾಡುವ ಸಂಚಾರವೆಲ್ಲ ನಿನ್ನ ಪ್ರದಕ್ಷಿಣೆ. ಆಡುವ ಮಾತೆಲ್ಲ ನಿನ್ನ ಸ್ತೋತ್ರ. ನಾನು ಯಾವ ಯಾವ ಕೆಲಸ ಮಾಡುತ್ತೇನೋ, ಅವೆಲ್ಲ ನಿನ್ನ ಆರಾಧನೆಯೇ, ಶಂಭೋ. |
|
ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ . ಶ್ರವಣನಯನಜಂ ವಾ ಮಾನಸಂ ವಾಪರಾಧಂ . ವಿಹಿತಮವಿಹಿತಂ ವಾ ಸರ್ವಮೇತತ್ಕ್ಷಮಸ್ವ . ಜಯ ಜಯ ಕರುಣಾಬ್ಧೇ ಶ್ರೀಮಹಾದೇವಶಂಭೋ .. 5.. |
ನನ್ನ ಕೈ ಕಾಲುಗಳಿಂದ, ಮಾತಿನಿಂದ, ಕರ್ಮಗಳಿಂದ, ಶ್ರವಣ, ಕಣ್ಣುಗಳಿಂದ ಅಥವಾ ಮನಸ್ಸಿನಿಂದ ಮಾಡಿದ, ವಿಹಿತ, ಅವಿಹಿತ ಅಪರಾಧಗಳನ್ನೆಲ್ಲ ಕ್ಷಮಿಸಿಬಿಡು. ಜಯ ಜಯ ಓ ಕರುಣಾಸಾಗರನೇ, ಮಹಾದೇವ ಶಂಭುವೇ. |
Comments
Post a Comment