Posts

Showing posts from July, 2025

ಆತ್ಮ ಬೋಧ

ಆತ್ಮಬೋಧ ಎಂಬುದು ಅದ್ವೈತ ವೇದಾಂತದ ಒಂದು ಸಣ್ಣ ಸಂಸ್ಕೃತ ಪಠ್ಯವಾಗಿದೆ. ಅರವತ್ತೆಂಟು ಶ್ಲೋಕಗಳಲ್ಲಿರುವ ಈ ಪಠ್ಯವು ಆತ್ಮ ಜ್ಞಾನದ ಮಾರ್ಗ ಅಥವಾ ಆತ್ಮದ ಅರಿವನ್ನು ವಿವರಿಸುತ್ತದೆ.   ಈ ಪಠ್ಯವನ್ನು ಶಂಕರರು ತಮ್ಮ ಶಿಷ್ಯ ಸನಂದನ, ಪದ್ಮಪಾದ ಎಂಬವವರಿಗಾಗಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆ.   ಆತ್ಮ-ಬೋಧವು ಒಂದು ಪ್ರಕರಣ ಗ್ರಂಥ.  ಪ್ರಕರಣ ಗ್ರಂಥ ಅಂದರೆ  ಯಾವುದೇ ಮೂಲ ತತ್ವವನ್ನು ನೀಡುವ ಕೃತಿ ಅಲ್ಲ ಆದರೆ  ಧರ್ಮಶಾಸ್ತ್ರಗಳಲ್ಲಿ ಬಳಸಲಾಗುವ ಪದಗಳು ಮತ್ತು ಪರಿಭಾಷೆಗಳನ್ನು ವಿವರಿಸುವ ಸಾಹಿತ್ಯ .     ..ಆತ್ಮಬೋಧಃ.. ತಪೋಭಿಃ ಕ್ಷೀಣಪಾಪಾನಾಂ ಶಾಂತಾನಾಂ ವೀತರಾಗಿಣಾಂ. ಮುಮುಕ್ಷೂಣಾಮಪೇಕ್ಷ್ಯೋಽಯಮಾತ್ಮಬೋಧೋ ವಿಧೀಯತೇ..1.. ಈ ಮೊದಲನೆಯ ಶ್ಲೋಕದಲ್ಲಿ ಲೇಖಕರು ಈ ಕೃತಿಯು ಯಾರ ಕುರಿತಾಗಿ, ಯಾರಿಗಾಗಿ ರಚಿಸಲ್ಪಟ್ಟಿದೆ ಎಂದು ಹೇಳುತ್ತಾರೆ  ತಪಸ್ಸನ್ನು ಮಾಡಿ ಯಾರ ಪಾಪವು ಕ್ಷೀಣಿಸಿದೆಯೋ, ಯಾರು ಶಾಂತಚಿತ್ತರೋ, ಯಾರು ರಾಗ-ದ್ವೇಷಗಳಿಂದ ಮುಕ್ತರೋ, ಯಾರು ಮುಮುಕ್ಷವೋ ( ಮೋಕ್ಷವನ್ನು ಪಡೆಯಲು ತೀವ್ರ ಆಸೆ ಹೊಂದಿದ್ದಾರೋ), ಅವರಿಗಾಗಿ ನಾನು ಆತ್ಮಬೋಧವನ್ನು ರಚಿಸುತ್ತಿದ್ದೇನೆ.  (ವೇದಾಂತದ ಪ್ರಕಾರ ವೇದ-ಶಾಸ್ತ್ರಗಳನ್ನು ಓದುವ ವ್ಯಕ್ತಿಗೆ ಆತ್ಮಸಾಕ್ಷಾತ್ಕಾರವಾಗುವದು ಅವನಿಗೆ ವಿವೇಕ,ವೈರಾಗ್ಯ, ಶಮಾದಿ ಷಟ್ ಸಂಪತ್ತಿಗಳು ಹಾಗೂ ಮುಮುಕ್ಷತ್ವ ಇವು ಇದ್ದರೆ ಮಾತ್ರ)  ಬೋಧೋಽನ...