Posts

Showing posts from August, 2025

ಕೇನ ಉಪನಿಷತ್ತು

ಕೇನ ಉಪನಿಷತ್ತು ಮುಖ್ ಯ ಉಪನಿಷತ್ತುಗಳಲ್ಲಿ ಒಂದಾಗಿದೆ. ಸಾಮವೇದದ ತಲವಕಾರ ಬ್ರಾಹ್ಮಣದಲ್ಲಿ ಸೇರಿದ ಈ ಉಪನಿಷತ್ತನ್ನು ತಲವಕಾರ ಉಪನಿಷತ್ತು ಎಂದೂ ಹೇಳುತ್ತಾರೆ.   ಈ ಉಪನಿಷತ್ತು ಕ್ರಿ.ಪೂ. ೬ನೇ ಶತಮಾನದ ಪೂರ್ವದಲ್ಲಿ ರಚಿತವಾದ ಈಶಾವಾಸ್ಯ, ತೈತ್ತರೀಯ, ಬ್ರಹದಾರಣ್ಯಕ ಉಪನಿಷತ್ತುಗಳ ನಂತರ ರಚಿತವಾಗಿರಬೇಕು.   ಕೆಲ ವಿದ್ವಾಂಸರ ಪ್ರಕಾರ ಗದ್ಯ ಉಪನಿಷತ್ತುಗಳು ಹಾಗೂ ಪದ್ಯ ಉಪನಿಷತ್ತುಗಳ ನಡುವಿನ ಕೊಂಡಿ ಇದಾಗಿದೆ.   ಹೆಸರು:  ಈ ಉಪನಿಷತ್ತಿನ ಮೊದಲ ಶ್ಲೋಕ ಕೇನ ಎಂಬ ಪದದಿಂದ ಆರಂಭವಾಗುವದರಿಂದ, ಇದಕ್ಕೆ  ಕೇನ ಉಪನಿಷತ್ತು  ಎಂಬ  ಹೆಸರು ಬಂದಿದೆ. ಕೇನ ಎಂದರೆ "ಯಾರಿಂದ" ಅಥವಾ "ಯಾವುದರಿಂದ" ಎಂಬ ಅರ್ಥ ಬರುತ್ತದೆ. ಯಾರಿಂದ ಈ ಮನಸ್ಸು ವಿಚಾರಗಳನ್ನು ಮಾಡುತ್ತದೆ. ಯಾರು ಈ ಜಗತ್ತನ್ನು ಸೂತ್ರಧಾರನಾಗಿ ಆಟವಾಡಿಸುತ್ತಾರೆ ಎಂಬ ಪ್ರಶ್ನೆಗಳನ್ನು ಉಪನಿಷತ್ತು ಉತ್ತರಿಸುತ್ತದೆ.  ಭಾಗಗಳು  ಈ ಉಪನಿಷತ್ತನ್ನು ನಾಲ್ಕು ಖಂಡಗಳಾಗಿ ವಿಭಜಿಸಲಾಗಿದೆ. ಮೊದಲ ಖಂಡದಲ್ಲಿ ಎಂಟು ಶ್ಲೋಕಗಳಿವೆ. ಎರಡನೆಯ ಖಂಡದಲ್ಲಿ ಐದು ಶ್ಲೋಕಗಳಿವೆ. ಮೂರು ಮತ್ತು ನಾಲ್ಕನೆಯ ಖಂಡಗಳು ಗದ್ಯ ರೂಪದಲ್ಲಿದ್ದು, ಮೂರನೆಯ ಖಂಡದಲ್ಲಿ ೧೨ ಮತ್ತು ನಾಲ್ಕನೆಯ ಖಂಡದಲ್ಲಿ ೯ ಪ್ಯಾರಾಗಳಿವೆ.    ಮೂರನೇ ಖಂಡ ಒಂದು ಕತೆಯನ್ನು ಹೇಳುತ್ತದೆ - ಆದರೆ ಈ ಕತೆಯಲ್ಲಿ ಹಲವು ನಿಗೂಢ ಅರ್ಥಗಳು ಸೇರಿವೆ - ...