Posts

Showing posts from March, 2025

ರಾಮರಕ್ಷಾ ಸ್ತೋತ್ರ

  ಶ್ರೀ ರಾಮ ರಕ್ಷಾ ಸ್ತೋತ್ರಂ ಓಂ ಅಸ್ಯ ಶ್ರೀ ರಾಮರಕ್ಷಾ ಸ್ತೋತ್ರಮಂತ್ರಸ್ಯ ಬುಧಕೌಶಿಕ ಋಷಿಃ ಶ್ರೀ ಸೀತಾರಾಮ ಚಂದ್ರೋದೇವತಾ ಅನುಷ್ಟುಪ್ ಛಂದಃ ಸೀತಾ ಶಕ್ತಿಃ ಶ್ರೀಮದ್ ಹನುಮಾನ್ ಕೀಲಕಂ ಶ್ರೀರಾಮಚಂದ್ರ ಪ್ರೀತ್ಯರ್ಥೇ ರಾಮರಕ್ಷಾ ಸ್ತೋತ್ರಜಪೇ ವಿನಿಯೋಗಃ ॥ ಈ ರಾಮರಕ್ಷಾ ಸ್ತೋತ್ರದ ಕರ್ತೃ ಬುದ್ಧ ಕೌಶಿಕ. ದೇವತೆ ಸೀತಾ ರಾಮಚಂದ್ರ. ಛಂದಸ್ಸು ಅನುಷ್ಟುಪ್. ಶಕ್ತಿ ಸೀತೆ, ಕೇಂದ್ರ ಕೀಲಕ ಹನುಮಂತ. ರಾಮಚಂದ್ರನ ಪ್ರೀತ್ಯರ್ಥವಾಗಿ ರಾಮರಕ್ಷಾ ಸ್ತೋತ್ರ ಜಪ ವಿನಿಯೋಗ ಮಾಡಲಾಗುತ್ತಿದೆ.. ಧ್ಯಾನಂ ಧ್ಯಾಯೇದಾಜಾನುಬಾಹುಂ ಧೃತಶರ ಧನುಷಂ ಬದ್ಧ ಪದ್ಮಾಸನಸ್ಥಂ ಪೀತಂ ವಾಸೋವಸಾನಂ ನವಕಮಲ ದಳಸ್ಪರ್ಥಿ ನೇತ್ರಂ ಪ್ರಸನ್ನಮ್ । ವಾಮಾಂಕಾರೂಢ ಸೀತಾಮುಖ ಕಮಲಮಿಲಲ್ಲೋಚನಂ ನೀರದಾಭಂ ನಾನಾಲಂಕಾರ ದೀಪ್ತಂ ದಧತಮುರು ಜಟಾಮಂಡಲಂ ರಾಮಚಂದ್ರಮ್ ॥ ಬಿಲ್ಲು ಬಾಣ ಹಿಡಿದು, ಕಮಲದ ಭಂಗಿಯಲ್ಲಿ ಕುಳಿತು, ಹಳದಿ ಬಟ್ಟೆಗಳನ್ನು ಧರಿಸಿ, ಕಮಲದ ದಳಗಳಿಗಿಂತ ಸುಂದರವಾಗಿ ಕಣ್ಣುಗಳನ್ನು ಹೊಂದಿರುವ, ಸಂತೋಷವಾಗಿರುವ, ಎಡಭಾಗದಲ್ಲಿ ಅಂದರೆ ಮಡಿಲಲ್ಲಿ ಕುಳಿತಿರುವ ಸೀತೆಯ ಕಮಲದ ಮುಖವನ್ನು ಸ್ಪರ್ಶಿಸುವ ಮತ್ತು ಮೋಡಗಳಂತೆ ಕಪ್ಪಾಗಿರುವ, ಉದ್ದನೆಯ ತೋಳುಗಳನ್ನು ಹೊಂದಿರುವ, ಜಡೆ ಕೂದಲುಳ್ಳ, ವಿವಿಧ ಆಭರಣಗಳಿಂದ ಅಲಂಕರಿಸಲ್ಪಟ್ಟ ಶ್ರೀ ರಾಮನನ್ನು ನಾನು ಧ್ಯಾನಿಸುತ್ತೇನೆ.   ಸ್ತೋತ್ರಂ ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್ । ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾ...

ನಾರಾಯಣೀ ಸ್ತುತಿಃ

ನಾರಾಯಣೀ ಸ್ತುತಿ ಅಥವಾ ದುರ್ಗಾದೇವಿ ಸ್ತುತಿಯು ತಾಯಿ ದುರ್ಗೆಯನ್ನು ಪೂಜಿಸುವ ಶ್ಲೋಕ. ಇದನ್ನು ದೇವೀ ಮಹಾತ್ಮೆಯ ೧೧ನೇ ಅಧ್ಯಾಯದಿಂದ ತೆಗೆದುಕೊಳ್ಳಲಾಗಿದೆ. ಈ ಶ್ಲೋಕವನ್ನು ದುರ್ಗಾಸಪ್ತಶತಿ ಅಥವಾ ಚಂಡೀಪಾಠ ಎಂದೂ ಹೇಳುತ್ತಾರೆ. ದುರ್ಗೆಯು  ನಾರಾಯಣನ ಸಹೋದರಿಯಾದದ್ದರಿಂದ ಅವಳನ್ನು  ನಾರಾಯಣೀ ಎಂದು ಕರೆಯುತ್ತಾರೆ.  ದೇವೀ ಮಾಹಾತ್ಮ್ಯೇ ಏಕಾದಶೋಽಧ್ಯಾಯಃ .. ಓಂ ಋಷಿರುವಾಚ .. ೧.. ದೇವ್ಯಾ ಹತೇ ತತ್ರ ಮಹಾಸುರೇಂದ್ರೇ ಸೇಂದ್ರಾಃ ಸುರಾ ವಹ್ನಿಪುರೋಗಮಾಸ್ತಾಂ  . ಕಾತ್ಯಾಯನೀಂ ತುಷ್ಟುವುರಿಷ್ಟಲಾಭಾದ್ ವಿಕಾಶಿವಕ್ತ್ರಾಬ್ಜವಿಕಾಶಿತಾಶಾಃ .. ೨.. ದೇವಿಯಿಂದ ಅಸುರರ ರಾಜನು ಹತನಾದ ನಂತರ, ಇಂದ್ರ ಮತ್ತು ಅಗ್ನಿಯ ಮತ್ತು ಇತರ ದೇವತೆಗಳು, ತಮ್ಮ ಇಷ್ಟಾರ್ಥಗಳನ್ನು ಪೂರೈಸಿದ್ದಕ್ಕಾಗಿ ಕಾತ್ಯಾಯನಿಯನ್ನು ಸ್ತುತಿಸಿದರು. ಭರವಸೆಗಳು ಈಡೇರಿದ್ದರಿಂದ, ಅವರ ಮುಖಗಳು ಪ್ರಕಾಶಮಾನವಾಗಿ ಅರಳಿದವು. ದೇವಿ ಪ್ರಪನ್ನಾರ್ತಿಹರೇ ಪ್ರಸೀದ ಪ್ರಸೀದ ಮಾತರ್ಜಗತೋಽಖಿಲಸ್ಯ . ಪ್ರಸೀದ ವಿಶ್ವೇಶ್ವರಿ ಪಾಹಿ ವಿಶ್ವಂ ತ್ವಮೀಶ್ವರೀ ದೇವಿ ಚರಾಚರಸ್ಯ .. ೩.. ಓ ದೇವಿ, ನಿನ್ನನ್ನು ಆಶ್ರಯಿಸುವವರ ದುಃಖಗಳನ್ನು ನಿವಾರಿಸುವವಳೇ,  ದಯೆ ತೋರು . ಅಖಿಲ ಜಗದ ತಾಯೇ, ದಯೆ ತೋರು. ಎಲ್ಲರ ಅಧಿಪತಿಯೇ,  ದಯೆ ತೋರು . ಸಕಲ ಚರಾಚರಗಳ  ಅಧಿಪತಿಯೇ, ಬ್ರಹ್ಮಾಂಡವನ್ನು ರಕ್ಷಿಸು. ಆಧಾರಭೂತಾ ಜಗತಸ್ತ್ವಮೇಕಾ ಮಹೀಸ್ವರೂಪೇಣ ಯತಃ ಸ್ಥಿತಾಸಿ . ಅ...