ನಾರಾಯಣೀ ಸ್ತುತಿಃ
ನಾರಾಯಣೀ ಸ್ತುತಿ ಅಥವಾ ದುರ್ಗಾದೇವಿ ಸ್ತುತಿಯು ತಾಯಿ ದುರ್ಗೆಯನ್ನು ಪೂಜಿಸುವ ಶ್ಲೋಕ. ಇದನ್ನು ದೇವೀ ಮಹಾತ್ಮೆಯ ೧೧ನೇ ಅಧ್ಯಾಯದಿಂದ ತೆಗೆದುಕೊಳ್ಳಲಾಗಿದೆ. ಈ ಶ್ಲೋಕವನ್ನು ದುರ್ಗಾಸಪ್ತಶತಿ ಅಥವಾ ಚಂಡೀಪಾಠ ಎಂದೂ ಹೇಳುತ್ತಾರೆ.
ದುರ್ಗೆಯು ನಾರಾಯಣನ ಸಹೋದರಿಯಾದದ್ದರಿಂದ ಅವಳನ್ನು ನಾರಾಯಣೀ ಎಂದು ಕರೆಯುತ್ತಾರೆ.
ದೇವೀ ಮಾಹಾತ್ಮ್ಯೇ ಏಕಾದಶೋಽಧ್ಯಾಯಃ ..
ಓಂ ಋಷಿರುವಾಚ .. ೧..
ದೇವ್ಯಾ ಹತೇ ತತ್ರ ಮಹಾಸುರೇಂದ್ರೇ
ಸೇಂದ್ರಾಃ ಸುರಾ ವಹ್ನಿಪುರೋಗಮಾಸ್ತಾಂ .
ಕಾತ್ಯಾಯನೀಂ ತುಷ್ಟುವುರಿಷ್ಟಲಾಭಾದ್
ವಿಕಾಶಿವಕ್ತ್ರಾಬ್ಜವಿಕಾಶಿತಾಶಾಃ .. ೨..
ದೇವಿಯಿಂದ ಅಸುರರ ರಾಜನು ಹತನಾದ ನಂತರ, ಇಂದ್ರ ಮತ್ತು ಅಗ್ನಿಯ ಮತ್ತು ಇತರ ದೇವತೆಗಳು, ತಮ್ಮ ಇಷ್ಟಾರ್ಥಗಳನ್ನು ಪೂರೈಸಿದ್ದಕ್ಕಾಗಿ ಕಾತ್ಯಾಯನಿಯನ್ನು ಸ್ತುತಿಸಿದರು. ಭರವಸೆಗಳು ಈಡೇರಿದ್ದರಿಂದ, ಅವರ ಮುಖಗಳು ಪ್ರಕಾಶಮಾನವಾಗಿ ಅರಳಿದವು.
ದೇವಿ ಪ್ರಪನ್ನಾರ್ತಿಹರೇ ಪ್ರಸೀದ
ಪ್ರಸೀದ ಮಾತರ್ಜಗತೋಽಖಿಲಸ್ಯ .
ಪ್ರಸೀದ ವಿಶ್ವೇಶ್ವರಿ ಪಾಹಿ ವಿಶ್ವಂ
ತ್ವಮೀಶ್ವರೀ ದೇವಿ ಚರಾಚರಸ್ಯ .. ೩..
ಓ ದೇವಿ, ನಿನ್ನನ್ನು ಆಶ್ರಯಿಸುವವರ ದುಃಖಗಳನ್ನು ನಿವಾರಿಸುವವಳೇ, ದಯೆ ತೋರು. ಅಖಿಲ ಜಗದ ತಾಯೇ, ದಯೆ ತೋರು. ಎಲ್ಲರ ಅಧಿಪತಿಯೇ, ದಯೆ ತೋರು. ಸಕಲ ಚರಾಚರಗಳ ಅಧಿಪತಿಯೇ, ಬ್ರಹ್ಮಾಂಡವನ್ನು ರಕ್ಷಿಸು.
ಆಧಾರಭೂತಾ ಜಗತಸ್ತ್ವಮೇಕಾ
ಮಹೀಸ್ವರೂಪೇಣ ಯತಃ ಸ್ಥಿತಾಸಿ .
ಅಪಾಂ ಸ್ವರೂಪಸ್ಥಿತಯಾ ತ್ವಯೈತ-
ದಾಪ್ಯಾಯತೇ ಕೃತ್ಸ್ನಮಲಂಘ್ಯವೀರ್ಯೇ .. ೪..
ನೀನೊಬ್ಬಳೇ ಈ ಜಗತ್ತಿಗೇ ಆಧಾರವಾಗಿರುವ ಶಕ್ತಿ, ಏಕೆಂದರೆ ನೀನು ಭೂಮಿಯ ಸ್ವರೂಪದಲ್ಲಿರುವೆ. ನಿನ್ನ ನೀರಿನ ಸ್ವರೂಪದಿಂದ ಈ ಇಡೀ ವಿಶ್ವವು ಸಮೃದ್ಧಿಯಾಗುತ್ತದೆ, ಓ ಅಪ್ರತಿಮ ಶಕ್ತಿಯ ದೇವಿಯೇ.
ತ್ವಂ ವೈಷ್ಣವೀಶಕ್ತಿರನಂತವೀರ್ಯಾ
ವಿಶ್ವಸ್ಯ ಬೀಜಂ ಪರಮಾಸಿ ಮಾಯಾ .
ಸಮ್ಮೋಹಿತಂ ದೇವಿ ಸಮಸ್ತಮೇತತ್
ತ್ವಂ ವೈ ಪ್ರಸನ್ನಾ ಭುವಿ ಮುಕ್ತಿಹೇತುಃ .. ೫..
ಅಪರಿಮಿತ ಶಕ್ತಿಯುಳ್ಳ ದೇವೀ, ನೀನು ವಿಷ್ಣುವಿನ ಶಕ್ತಿ, ಜಗದ ಎಲ್ಲದರ ಮೂಲ, ಪರಮ ಮಾಯೆಯಾಗಿರುವೆ. ಓ ದೇವಿ, ಈ ಇಡೀ ವಿಶ್ವವೇ ಭ್ರಮೆಯಲ್ಲಿದೆ . ಈ ಜಗತ್ತಿನಲ್ಲಿ, ನೀನು , ಸಂತೋಷಗೊಂಡಾಗ ಮಾತ್ರ ಮುಕ್ತಿ ದೊರಕುತ್ತದೆ.
ವಿದ್ಯಾಃ ಸಮಸ್ತಾಸ್ತವ ದೇವಿ ಭೇದಾಃ
ಸ್ತ್ರಿಯಃ ಸಮಸ್ತಾಃ ಸಕಲಾ ಜಗತ್ಸು .
ತ್ವಯೈಕಯಾ ಪೂರಿತಮಂಬಯೈತತ್
ಕಾ ತೇ ಸ್ತುತಿಃ ಸ್ತವ್ಯಪರಾಪರೋಕ್ತಿಃ .. ೬..
ಓ ದೇವಿ, ಎಲ್ಲಾ ರೀತಿಯ ಜ್ಞಾನವೂ ನಿನ್ನದೇ ಅಂಶಗಳು. ಜಗತ್ತಿನ ಎಲ್ಲಾ ಮಹಿಳೆಯರು ನಿನ್ನ ಅಂಶಗಳು. ತಾಯಿಯಾದ ನಿನ್ನಿಂದಲೇ ಈ ಜಗತ್ತು ತುಂಬಿದೆ. ಸ್ತುತಿಗೂ ಮೀರಿದ ನಿನ್ನನ್ನು ಯಾವ ರೀತಿಯಲ್ಲಿ ಸ್ತುತಿಸಲು ಸಾಧ್ಯ?
ಸರ್ವಭೂತಾ ಯದಾ ದೇವೀ ಭುಕ್ತಿಮುಕ್ತಿಪ್ರದಾಯಿನೀ .
ತ್ವಂ ಸ್ತುತಾ ಸ್ತುತಯೇ ಕಾ ವಾ ಭವಂತು ಪರಮೋಕ್ತಯಃ .. ೭..
ಓ ದೇವಿ, ನೀನು ಸರ್ವಭೂತಗಳಲ್ಲೂ ಇರುವವಳು, ಆನಂದ ಮತ್ತು ಮುಕ್ತಿಯನ್ನು ನೀಡುವವಳು - ನಿನ್ನ ಮಹಿಮೆ ಹೇಳುವ (ಅಂದರೆ ನಿನ್ನನ್ನು ಸ್ತುತಿಸುವ) ಮತ್ತು ನೇರ ಮತ್ತು ಪರೋಕ್ಷ ಅಭಿವ್ಯಕ್ತಿಗಳಿಂದ ವ್ಯಕ್ತಪಡಿಸಬಹುದಾದ ಸ್ತುತಿ ಯಾವುದು?
ಸರ್ವಸ್ಯ ಬುದ್ಧಿರೂಪೇಣ ಜನಸ್ಯ ಹೃದಿ ಸಂಸ್ಥಿತೇ .
ಸ್ವರ್ಗಾಪವರ್ಗದೇ ದೇವಿ ನಾರಾಯಣಿ ನಮೋಽಸ್ತು ತೇ .. ೮..
ಎಲ್ಲರ ಹೃದಯದಲ್ಲಿ ಬುದ್ಧಿಸ್ವರೂಪಳಾಗಿ ಸ್ಥಾಪಿತಳಾದ, ಸ್ವರ್ಗ-ಮುಕ್ತಿಗಳೆರಡನ್ನು ದಯಪಾಲಿಸುವ ನಾರಾಯಣೀ, ನಿನಗೆ ನಮಸ್ಕಾರಗಳು.
ಕಲಾಕಾಷ್ಠಾದಿರೂಪೇಣ ಪರಿಣಾಮಪ್ರದಾಯಿನಿ .
ವಿಶ್ವಸ್ಯೋಪರತೌ ಶಕ್ತೇ ನಾರಾಯಣಿ ನಮೋಽಸ್ತು ತೇ .. ೯..
ಕಲಾ, ಕಾಷ್ಠ ಇತ್ಯಾದಿ ಕಾಲ ವಿಭಜನೆಗಳ ರೂಪದಲ್ಲಿ ಈ ವಿಶ್ವದಲ್ಲಿ ಕ್ಷಣ ಕ್ಷಣಕ್ಕೂ ಪರಿವರ್ತನೆ ತರುವವಳು, ಮತ್ತು ಇಡೀ ವಿಶ್ವವನ್ನೇ ಹಿಂತೆಗೆದುಕೊಳ್ಳುಲು ಶಕ್ತಳು, ಆದ ಓ ನಾರಾಯಣೀ, ನಿನಗೆ ನಮಸ್ಕಾರಗಳು.
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ .
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಽಸ್ತು ತೇ .. ೧೦..
ಎಲ್ಲಾ ಶುಭಗಳಲ್ಲಿಯೂ ಶುಭಸ್ವರೂಪಿಯೂ, ಶುಭಳೂ, ಎಲ್ಲಾ ಶುಭ ಗುಣಗಳಿಂದ ಕೂಡಿದವಳೂ, ಮತ್ತು ಭಕ್ತರ ಎಲ್ಲಾ ಪುರುಷಾರ್ಥಗಳನ್ನು ಪೂರೈಸುವವಳೂ, ಆಶ್ರಯದಾಯಿಯೂ, ಮೂರು ಕಣ್ಣುಗಳು ಮತ್ತು ಹೊಳೆಯುವ ಮುಖವನ್ನು ಹೊಂದಿರುವಳೂ ಆದ ಓ ನಾರಾಯಣೀ, ನಿನಗೆ ನಮಸ್ಕಾರಗಳು.
ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಿಭೂತೇ ಸನಾತನಿ .
ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋಽಸ್ತು ತೇ .. ೧೧..
ಸೃಷ್ಟಿ, ಸ್ಥಿತಿ, ವಿನಾಶ ಈ ಮೂರನ್ನೂ ತರಲು ಶಕ್ತಳೇ, ಗುಣಗಳ ಆಶ್ರಯದಾತೇ, ಗುಣಮಯಳೇ, ನಾರಯಣೀ, ನಿನಗೆ ನಮಸ್ಕಾರಗಳು.
ಶರಣಾಗತದೀನಾರ್ತಪರಿತ್ರಾಣಪರಾಯಣೇ .
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಽಸ್ತು ತೇ .. ೧೨..
ಶರಣಾಗತರಾದ ದೀನರನ್ನು ರಕ್ಷಿಸುವದರಲ್ಲಿ ನಿರತಳೇ, ಸಕಲ ದುಃಖ-ಸಂಕಟಗಳ ನಿವಾರಕಳೇ, ದೇವೀ, ನಾರಾಯಣಿ, ನಿನಗೆ ನಮಸ್ಕಾರಗಳು.
ಹಂಸಯುಕ್ತವಿಮಾನಸ್ಥೇ ಬ್ರಹ್ಮಾಣೀರೂಪಧಾರಿಣಿ .
ಕೌಶಾಂಭಃಕ್ಷರಿಕೇ ದೇವಿ ನಾರಾಯಣಿ ನಮೋಽಸ್ತು ತೇ .. ೧೩..
ಹಂಸದೊಂದಿಗೆ ದಿವ್ಯ ರಥದಲ್ಲಿ ವಿಹರಿಸುವವಳೇ, ಬ್ರಹ್ಮಾಣಿ ರೂಪಧಾರಿಯೇ, ಕೌಶಾಂಭವನ್ನು ಸಿಂಪಡಿಸುವವಳೇ, ನಾರಾಯಣೀ, ನಿನಗೆ ನಮಸ್ಕಾರಗಳು.
ತ್ರಿಶೂಲಚಂದ್ರಾಹಿಧರೇ ಮಹಾವೃಷಭವಾಹಿನಿ .
ಮಾಹೇಶ್ವರೀಸ್ವರೂಪೇಣ ನಾರಾಯಣಿ ನಮೋಽಸ್ತುತೇ .. ೧೪..
ತ್ರಿಶೂಲ, ಚಂದ್ರ ಮತ್ತು ಸರ್ಪವನ್ನು ಹಿಡಿದಿರುವವಳೇ, ಮಹಾವೃಷಭ ವಾಹಿನವಾದವಳೇ, ಮಾಹೇಶ್ವರಿ ಸ್ವರೂಪೀ, ನಿನಗೆ ನಮಸ್ಕಾರಗಳು.
ಮಯೂರಕುಕ್ಕುಟವೃತೇ ಮಹಾಶಕ್ತಿಧರೇಽನಘೇ .
ಕೌಮಾರೀರೂಪಸಂಸ್ಥಾನೇ ನಾರಾಯಣಿ ನಮೋಽಸ್ತು ತೇ .. ೧೫..
ನವಿಲು-ಕುಕ್ಕುಟಗಳಿಂದ ಆವರಿಸಿಕೊಂಡವಳೇ, ಮಹಾ ಈಟಿಯನ್ನು ಹಿಡಿದವಳೇ, ಅನಘೇ(ಶುದ್ಧ), ದೇವಿ ಕುಮಾರಿ ರೂಪ ಧರಿಸಿದವಳೇ, ನಿನಗೆ ನಮಸ್ಕಾರಗಳು.
ಶಂಖಚಕ್ರಗದಾಶಾರ್ಙ್ಗಗೃಹೀತಪರಮಾಯುಧೇ .
ಪ್ರಸೀದ ವೈಷ್ಣವೀರೂಪೇ ನಾರಾಯಣಿ ನಮೋಽಸ್ತು ತೇ .. ೧೬..
ಶಂಖ, ಚಕ್ರ, ಗದೆ, ವಿಷ್ಣುವಿನ ಬಿಲ್ಲು ಈ ಎಲ್ಲ ಆಯುಧಗಳನ್ನು ಹಿಡಿದವಳೇ, ದಯೇ ತೋರು, ವೈಷ್ಣವೀ ರೂಪಿಯೇ, ನಾರಾಯಣೀ, ನಿನಗೆ ನಮಸ್ಕಾರಗಳು.
ಗೃಹೀತೋಗ್ರಮಹಾಚಕ್ರೇ ದಂಷ್ಟ್ರೋದ್ಧೃತವಸುಂಧರೇ .
ವರಾಹರೂಪಿಣಿ ಶಿವೇ ನಾರಾಯಣಿ ನಮೋಽಸ್ತು ತೇ .. ೧೭..
ಮಹಾ ಚಕ್ರವನ್ನು ಹಿಡಿದುಕೊಂಡು ಉಗ್ರ ರೂಪವನ್ನು ಧರಿಸಿ, ತನ್ನ ದಂತದಿಂದ ಭೂಮಿ ತಾಯಿಯನ್ನು ರಕ್ಷಿಸಿದವಳೇ... ಮಂಗಳಕರವಾದ ದೇವೀ, ವಾರಾಹಿಯ ರೂಪಿಯೇ, ಓ ನಾರಾಯಣೀ, ನಿನಗೆ ನಮಸ್ಕಾರಗಳು.
ನೃಸಿಂಹರೂಪೇಣೋಗ್ರೇಣ ಹಂತುಂ ದೈತ್ಯಾನ್ ಕೃತೋದ್ಯಮೇ .
ತ್ರೈಲೋಕ್ಯತ್ರಾಣಸಹಿತೇ ನಾರಾಯಣಿ ನಮೋಽಸ್ತು ತೇ .. ೧೮..
ನೃಸಿಂಘಿ (ಮಹಿಳೆ-ಸಿಂಹ) ರೂಪದಲ್ಲಿ, ಉಗ್ರ ಕ್ರೋಧದಲ್ಲಿ, ರಾಕ್ಷಸರನ್ನು ಕೊಲ್ಲಲು ಮುಂದಾದ,
ಮೂರು ಲೋಕಗಳನ್ನು ರಕ್ಷಿಸುವ ಕಾರ್ಯವನ್ನು ಹೊರುವವಳೇ; ಓ ನಾರಾಯಣೀ, ನಿನಗೆ ನಮಸ್ಕಾರಗಳು.
ಕಿರೀಟಿನಿ ಮಹಾವಜ್ರೇ ಸಹಸ್ರನಯನೋಜ್ಜ್ವಲೇ .
ವೃತ್ರಪ್ರಾಣಹರೇ ಚೈಂದ್ರಿ ನಾರಾಯಣಿ ನಮೋಽಸ್ತು ತೇ .. ೧೯..
ಕಿರೀಟದಿಂದ ಅಲಂಕರಿಸಲ್ಪಟ್ಟ ಮತ್ತು ಮಹಾ ಸಿಡಿಲನ್ನು ಹಿಡಿದಿರುವ, ಸಾವಿರ ಕಣ್ಣುಗಳ ತೇಜಸ್ಸಿನಿಂದ ಬೆಳಗುತ್ತಿರುವ
ಮತ್ತು ದೇವಿ ಐಂದ್ರಿಯ ರೂಪದಲ್ಲಿ ರಾಕ್ಷಸ ವೃತ್ರನ ಪ್ರಾಣವನ್ನು ಕೊಂದವಳೇ, ಓ ನಾರಾಯಣೀ, ನಿನಗೆ ನಮಸ್ಕಾರಗಳು.
ಶಿವದೂತೀಸ್ವರೂಪೇಣ ಹತದೈತ್ಯಮಹಾಬಲೇ .
ಘೋರರೂಪೇ ಮಹಾರಾವೇ ನಾರಾಯಣಿ ನಮೋಽಸ್ತು ತೇ .. ೨೦..
ಶಿವದೂತಿ ಸ್ವರೂಪದಿಂದ ದೈತ್ಯರ ಸಂಹರಿಸಿದ ಮಹಾಬಲೇ, ಘೋರರೂಪೇ, ಮಹಾ ಗರ್ಜನ ಹೊಂದಿದವಳೇ, ನಾರಾಯಣಿ, ನಿನಗೆ ನಮಸ್ಕಾರಗಳು.
ದಂಷ್ಟ್ರಾಕರಾಲವದನೇ ಶಿರೋಮಾಲಾವಿಭೂಷಣೇ .
ಚಾಮುಂಡೇ ಮುಂಡಮಥನೇ ನಾರಾಯಣಿ ನಮೋಽಸ್ತು ತೇ .. ೨೧..
ಕೋರೆಹಲ್ಲುಗಳಿಂದ ಕೂಡಿದ ಭಯಾನಕ ಮುಖವನ್ನು ಹೊಂದಿರುವ ಮತ್ತು ರುಂಡಗಳ ಹಾರದಿಂದ ಅಲಂಕರಿಸಲ್ಪಟ್ಟ, ಚಾಮುಂಡೀ ರೂಪದಲ್ಲಿ ಮುಂಡ ರಾಕ್ಷಸನ ಕೊಂದವಳೇ, ನಾರಾಯಣಿ, ನಿನಗೆ ನಮಸ್ಕಾರಗಳು.
ಲಕ್ಷ್ಮಿ ಲಜ್ಜೇ ಮಹಾವಿದ್ಯೇ ಶ್ರದ್ಧೇ ಪುಷ್ಟಿ ಸ್ವಧೇ ಧ್ರುವೇ .
ಮಹಾರಾತ್ರಿ ಮಹಾಮಾಯೇ ನಾರಾಯಣಿ ನಮೋಽಸ್ತು ತೇ .. ೨೨..
ವಿನಯಶೀಲತೆ, ಮಹಾಜ್ಞಾನ ಮತ್ತು ಶ್ರದ್ಧೆಯಲ್ಲಿ ದೇವಿ ಲಕ್ಷ್ಮಿಯ ರೂಪದವಳೇ; ಯಜ್ಞಗಳ ಸಾರ ಮತ್ತು ಶಾಶ್ವತ ಜೀವನದ ಸಾರಳೇ,ಮಹಾ ಮಾಯೇ,ಮಹಾ ರಾತ್ರಿಯೇ, ಓ ನಾರಾಯಣೀ, ನಿನಗೆ ನಮಸ್ಕಾರಗಳು.
ಮೇಧೇ ಸರಸ್ವತಿ ವರೇ ಭೂತಿ ಬಾಭ್ರವಿ ತಾಮಸಿ .
ನಿಯತೇ ತ್ವಂ ಪ್ರಸೀದೇಶೇ ನಾರಾಯಣಿ ನಮೋಽಸ್ತುತೇ .. ೨೩..
ಯಾರು ಜ್ಞಾನದಲ್ಲಿ ಸರಸ್ವತಿ ದೇವಿ, ವರದಾನದಲ್ಲಿ ಲಕ್ಷ್ಮಿ (ಸಮೃದ್ಧಿ) ಮತ್ತು ದುಷ್ಟ ಶಕ್ತಿಗಳನ್ನು ನಿಗ್ರಹಿಸುವಲ್ಲಿ ಯಾರು ಕಾಳಿ (ಕಪ್ಪು ರೂಪದಲ್ಲಿ ದುರ್ಗಾ ದೇವಿ)ಯೋ ..., ಓ ದೇವಿ, ದಯವಿಟ್ಟು ದಯೆ ತೋರು; ನಾರಾಯಣೀ, ನಿನಗೆ ನಮಸ್ಕಾರಗಳು.
ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ .
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಽಸ್ತು ತೇ .. ೨೪..
ನೀನು ಎಲ್ಲಾ ದೇವತೆಗಳ ಎಲ್ಲಾ ರೂಪಗಳಲ್ಲಿರುವೆ ಮತ್ತು ಎಲ್ಲಾ ಶಕ್ತಿಗಳಿಂದ ಕೂಡಿರುವೆ, ನಮ್ಮನ್ನು ಭಯದಿಂದ ರಕ್ಷಿಸು. ನಾರಾಯಣೀ, ನಿನಗೆ ನಮಸ್ಕಾರಗಳು.
ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಂ .
ಪಾತು ನಃ ಸರ್ವಭೂತೇಭ್ಯಃ ಕಾತ್ಯಾಯನಿ ನಮೋಽಸ್ತು ತೇ .. ೨೫..
ಮೂರು ಕಣ್ಣುಗಳಿಂದ ಅಲಂಕರಿಸಲ್ಪಟ್ಟ ನಿನ್ನ ಈ ಸೌಮ್ಯ ಮುಖ ನಮ್ಮನ್ನು ಎಲ್ಲಾ ದುಷ್ಟಶಕ್ತಿಯಿಂದ ಹಾಗೂ ದುಷ್ಟತನದಿಂದ ರಕ್ಷಿಸಲಿ; ಓ ದೇವಿ ಕಾತ್ಯಾಯನೀ ನಿನಗೆ ನಮಸ್ಕಾರಗಳು.
ಜ್ವಾಲಾಕರಾಲಮತ್ಯುಗ್ರಮಶೇಷಾಸುರಸೂದನಂ .
ತ್ರಿಶೂಲಂ ಪಾತು ನೋ ಭೀತೇರ್ಭದ್ರಕಾಲಿ ನಮೋಽಸ್ತು ತೇ .. ೨೬..
ಉರಿಯುವ, ಭಯಾನಕ, ಅತ್ಯಂತ ತೀಕ್ಷ್ಣ,, ರಾಕ್ಷಸರನ್ನು ನಾಶಮಾಡುವವ ನಿನ್ನ ಆ ತ್ರಿಶೂಲವು ನಮ್ಮನ್ನು ಅಪಾಯದಿಂದ ರಕ್ಷಿಸಲಿ; ಓ ದೇವಿ ಭದ್ರಕಾಳಿ ನಿನಗೆ ನಮಸ್ಕಾರಗಳು.
Comments
Post a Comment