ರಾಮರಕ್ಷಾ ಸ್ತೋತ್ರ
ಶ್ರೀ ರಾಮ ರಕ್ಷಾ ಸ್ತೋತ್ರಂ
ಓಂ ಅಸ್ಯ ಶ್ರೀ ರಾಮರಕ್ಷಾ ಸ್ತೋತ್ರಮಂತ್ರಸ್ಯ
ಬುಧಕೌಶಿಕ ಋಷಿಃ
ಶ್ರೀ ಸೀತಾರಾಮ ಚಂದ್ರೋದೇವತಾ
ಅನುಷ್ಟುಪ್ ಛಂದಃ
ಸೀತಾ ಶಕ್ತಿಃ
ಶ್ರೀಮದ್ ಹನುಮಾನ್ ಕೀಲಕಂ
ಶ್ರೀರಾಮಚಂದ್ರ ಪ್ರೀತ್ಯರ್ಥೇ ರಾಮರಕ್ಷಾ ಸ್ತೋತ್ರಜಪೇ ವಿನಿಯೋಗಃ ॥
ಈ ರಾಮರಕ್ಷಾ ಸ್ತೋತ್ರದ ಕರ್ತೃ ಬುದ್ಧ ಕೌಶಿಕ. ದೇವತೆ ಸೀತಾ ರಾಮಚಂದ್ರ. ಛಂದಸ್ಸು ಅನುಷ್ಟುಪ್. ಶಕ್ತಿ ಸೀತೆ, ಕೇಂದ್ರ ಕೀಲಕ ಹನುಮಂತ. ರಾಮಚಂದ್ರನ ಪ್ರೀತ್ಯರ್ಥವಾಗಿ ರಾಮರಕ್ಷಾ ಸ್ತೋತ್ರ ಜಪ ವಿನಿಯೋಗ ಮಾಡಲಾಗುತ್ತಿದೆ..
ಧ್ಯಾನಂ
ಧ್ಯಾಯೇದಾಜಾನುಬಾಹುಂ ಧೃತಶರ ಧನುಷಂ ಬದ್ಧ ಪದ್ಮಾಸನಸ್ಥಂ
ಪೀತಂ ವಾಸೋವಸಾನಂ ನವಕಮಲ ದಳಸ್ಪರ್ಥಿ ನೇತ್ರಂ ಪ್ರಸನ್ನಮ್ ।
ವಾಮಾಂಕಾರೂಢ ಸೀತಾಮುಖ ಕಮಲಮಿಲಲ್ಲೋಚನಂ ನೀರದಾಭಂ
ನಾನಾಲಂಕಾರ ದೀಪ್ತಂ ದಧತಮುರು ಜಟಾಮಂಡಲಂ ರಾಮಚಂದ್ರಮ್ ॥
ಬಿಲ್ಲು ಬಾಣ ಹಿಡಿದು, ಕಮಲದ ಭಂಗಿಯಲ್ಲಿ ಕುಳಿತು, ಹಳದಿ ಬಟ್ಟೆಗಳನ್ನು ಧರಿಸಿ, ಕಮಲದ ದಳಗಳಿಗಿಂತ ಸುಂದರವಾಗಿ ಕಣ್ಣುಗಳನ್ನು ಹೊಂದಿರುವ, ಸಂತೋಷವಾಗಿರುವ, ಎಡಭಾಗದಲ್ಲಿ ಅಂದರೆ ಮಡಿಲಲ್ಲಿ ಕುಳಿತಿರುವ ಸೀತೆಯ ಕಮಲದ ಮುಖವನ್ನು ಸ್ಪರ್ಶಿಸುವ ಮತ್ತು ಮೋಡಗಳಂತೆ ಕಪ್ಪಾಗಿರುವ, ಉದ್ದನೆಯ ತೋಳುಗಳನ್ನು ಹೊಂದಿರುವ, ಜಡೆ ಕೂದಲುಳ್ಳ, ವಿವಿಧ ಆಭರಣಗಳಿಂದ ಅಲಂಕರಿಸಲ್ಪಟ್ಟ ಶ್ರೀ ರಾಮನನ್ನು ನಾನು ಧ್ಯಾನಿಸುತ್ತೇನೆ.
ಸ್ತೋತ್ರಂ
ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್ ।
ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾಶನಮ್ ॥ 1 ॥
ರಘುನಾಥನ ಮಹಾಕಥೆ ಶತಕೋಟಿ (ಶಬ್ದಗಳಷ್ಟು) ವಿಸ್ತಾರವಾಗಿದೆ. ಇದರ ಪ್ರತಿಯೊಂದು ಅಕ್ಷರ (ಪಠಣೆ ಮಾಡುವದರಿಂದ) ಮನುಜರ ಮಹಾಪಾಪಗಳನ್ನು ನಾಶ ಪಡಿಸುತ್ತದೆ.
ಧ್ಯಾತ್ವಾ ನೀಲೋತ್ಪಲ ಶ್ಯಾಮಂ ರಾಮಂ ರಾಜೀವಲೋಚನಮ್ ।
ಜಾನಕೀ ಲಕ್ಷ್ಮಣೋಪೇತಂ ಜಟಾಮುಕುಟ ಮಂಡಿತಮ್ ॥ 2 ॥
ನಾವು ನೀಲವರ್ಣನಾದ, ರಾಜೀವ ಲೋಚನನಾದ ಜಾನಕಿ-ಲಕ್ಷ್ಮಣ ಸಹಿತನಾದ, ಜಟೆ-ಕಿರೀಟ ಧಾರಿಯಾದ ರಾಮನನ್ನು ಧ್ಯಾನಿಸೋಣ.
ಸಾಸಿತೂಣ ಧನುರ್ಬಾಣ ಪಾಣಿಂ ನಕ್ತಂ ಚರಾಂತಕಮ್ ।
ಸ್ವಲೀಲಯಾ ಜಗತ್ತ್ರಾತು ಮಾವಿರ್ಭೂತಮಜಂ ವಿಭುಮ್ ॥ 3 ॥
ಒರೆಯಲ್ಲಿ ಕತ್ತಿ, ಕೈಯಲ್ಲಿ ಬಿಲ್ಲು ಮತ್ತು ಬಾಣಗಳನ್ನು ಹೊಂದಿರುವವನು, ರಾಕ್ಷಸರನ್ನು ಸಂಹರಿಸಿದವನು, ಅಜಾತನು ಆದರೆ ಈ ಲೋಕವನ್ನು ರಕ್ಷಿಸಲು ತನ್ನ ಸ್ವ ಇಚ್ಛೆಯಿಂದ ಅವತರಿಸಿದವನು (ಅವನನ್ನು ನಾವು ಧ್ಯಾನಿಸೋಣ).
ರಾಮರಕ್ಷಾಂ ಪಠೇತ್ಪ್ರಾಜ್ಞಃ ಪಾಪಘ್ನೀಂ ಸರ್ವಕಾಮದಾಮ್ ।
ಶಿರೋ ಮೇ ರಾಘವಃ ಪಾತು ಫಾಲಂ (ಭಾಲಂ) ದಶರಥಾತ್ಮಜಃ ॥ 4 ॥
ಎಲ್ಲಾ ಪಾಪಗಳನ್ನು ನಾಶಮಾಡುವ ಮತ್ತು ಎಲ್ಲಾ ಆಸೆಗಳನ್ನು ಪೂರೈಸುವ ರಾಮರಕ್ಷಾ "ಸ್ತೋತ್ರ"ವನ್ನು ವಿದ್ವಾಂಸರು ಪಠಿಸಲಿ.
(ರಕ್ಷಿಸಬೇಕಾದ ದೇಹದ ವಿವರಗಳು)
ರಘುವಂಶದ ರಾಮನು ನನ್ನ ತಲೆಯನ್ನು ರಕ್ಷಿಸಲಿ. ದಶರಥನ ಮಗನಾದ ರಾಮನು ನನ್ನ ಹಣೆಯನ್ನು ರಕ್ಷಿಸಲಿ.
ಕೌಸಲ್ಯೇಯೋ ದೃಶೌಪಾತು ವಿಶ್ವಾಮಿತ್ರಪ್ರಿಯಃ ಶೃತೀ ।
ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ ॥ 5 ॥
ಕೌಸಲ್ಯಾತನಯ ರಾಮ ನನ್ನ ಕಣ್ಣುಗಳನ್ನು ರಕ್ಷಿಸಲಿ, ವಿಶ್ವಾಮಿತ್ರ ಪ್ರಿಯ ರಾಮನು ನನ್ನ ಕಿವಿಗಳನ್ನು ರಕ್ಷಿಸಲಿ, ಮೂಗನ್ನು ಯಜ್ಞರಕ್ಷಕನಾದ ರಾಮನು ರಕ್ಷಿಸಲಿ, ಸೌಮಿತ್ರಿಯ (ಲಕ್ಷ್ಮಣನ) ಪ್ರಿಯನು ಬಾಯನ್ನು ರಕ್ಷಿಸಲಿ.
ಜಿಹ್ವಾಂ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ ।
ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕಃ ॥ 6 ॥
ಜಿಹ್ವೆ(ನಾಲಿಗೆ)ಯನ್ನು ವಿದ್ಯಾನಿಧಿಯು ರಕ್ಷಿಸಲಿ, ಕುತ್ತಿಗೆಯನ್ನು ಭರತವಂದಿತನಾದ ರಾಮನು ರಕ್ಷಿಸಲಿ, ದಿವ್ಯ ಆಯುಧಧಾರಿಯಾದ ರಾಮನು ನನ್ನ ಭುಜಗಳನ್ನು ರಕ್ಷಿಸಲಿ, ತೋಳುಗಳನ್ನು ಶಿವಧನಸ್ಸನ್ನು ಮುರಿದವನಾದ ರಾಮನು ರಕ್ಷಿಸಲಿ.
ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್ ।
ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ ॥ 7 ॥
ಸೀತೆಯ ಪತಿಯಾದ ರಾಮನು ನನ್ನ ಎರಡು ಕರಗಳನ್ನು ರಕ್ಷಿಸಲಿ. ಪರಶುರಾಮನನ್ನು ಗೆದ್ದ ರಾಮನು ನನ್ನ ಹೃದಯವನ್ನು ರಕ್ಷಿಸಲಿ. ಖರನೆಂಬ ರಾಕ್ಷಸನನ್ನು ಕೊಂದ ರಾಮನು ನನ್ನ ಉದರವನ್ನು ರಕ್ಷಿಸಲಿ. ಜಾಂಬವಂತನಿಗೆ ಆಶ್ರಯ ನೀಡಿದ ರಾಮನು ನನ್ನ ನಾಭಿ(ಹೊಕ್ಕುಳನ್ನು)ಯನ್ನು ರಕ್ಷಿಸಲಿ.
ಸುಗ್ರೀವೇಶಃ ಕಟಿಂ ಪಾತು ಸಕ್ಥಿನೀ ಹನುಮತ್-ಪ್ರಭುಃ ।
ಊರೂ ರಘೂತ್ತಮಃ ಪಾತು ರಕ್ಷಃಕುಲ ವಿನಾಶಕೃತ್ ॥ 8 ॥
ಸುಗ್ರೀವನ ಒಡೆಯನು ನನ್ನ ಸೊಂಟವನ್ನು ರಕ್ಷಿಸಲಿ, ಹನುಮನ ಒಡೆಯನು ನನ್ನ ಸೊಂಟವನ್ನು ರಕ್ಷಿಸಲಿ.
ರಘುಗಳಲ್ಲಿ ಶ್ರೇಷ್ಠನೂ ರಾಕ್ಷಸ ವಂಶನಾಶಕನೂ ಆದವನು ನನ್ನ ತೊಡೆಗಳನ್ನು ರಕ್ಷಿಸಲಿ.
ಜಾನುನೀ ಸೇತುಕೃತ್-ಪಾತು ಜಂಘೇ ದಶಮುಖಾಂತಕಃ ।
ಪಾದೌ ವಿಭೀಷಣಶ್ರೀದಃ ಪಾತು ರಾಮೋಽಖಿಲಂ ವಪುಃ ॥ 9 ॥
ಸೇತುವೆಯನ್ನು ಸ್ಥಾಪಿಸಿದವನು (ರಾಮಸೇತು) ನನ್ನ ಮೊಣಕಾಲುಗಳನ್ನು ರಕ್ಷಿಸಲಿ, ದಶಮುಖನನ್ನು (ರಾವಣ) ಸಂಹಾರ ಮಾಡಿದವನು ನನ್ನ ಮೊಣಕಾಲುಗಳನ್ನು ರಕ್ಷಿಸಲಿ. ವಿಭೀಷಣನಿಗೆ ಸಂಪತ್ತನ್ನು ಅರ್ಪಿಸಿದವನು ನನ್ನ ಪಾದಗಳನ್ನು ರಕ್ಷಿಸಲಿ, ಶ್ರೀರಾಮನು ನನ್ನ ಇಡೀ ದೇಹವನ್ನು ರಕ್ಷಿಸಲಿ.
ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್ ।
ಸ ಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್ ॥ 10 ॥
ಯಾವ ಸಜ್ಜನನು ರಾಮನ ಎಲ್ಲಾ ಶಕ್ತಿಗೆ ಸಮಾನವಾದ ಈ ಸ್ತೋತ್ರವನ್ನು (ಸ್ತೋತ್ರ) ಓದುತ್ತಾನೋ ಅವನು ದೀರ್ಘಾಯುಷ್ಯ, ಪುತ್ರಲಾಭ, ವಿಜಯ ಮತ್ತು ವಿನಮ್ರತೆಯನ್ನು ಹೊಂದಲಿ.
ಪಾತಾಳ-ಭೂತಲ-ವ್ಯೋಮ-ಚಾರಿಣ-ಶ್ಚದ್ಮ-ಚಾರಿಣಃ ।
ನ ದ್ರಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ ॥ 11 ॥
ಈ ರಾಮನಾಮ ಪಠಣದಿಂದ ರಕ್ಷಿತರಾದವರನ್ನು ಪಾತಾಳ, ಭೂತಳಗಳಲ್ಲಿ ಮಾರುವೇಷದಲ್ಲಿ ಚಲಿಸುವ ಭೂತಪ್ರೇತಗಳು ನೋಡಲು ಶಕ್ಯವಾಗುವದಿಲ್ಲ.
ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್ ।
ನರೋ ನ ಲಿಪ್ಯತೇ ಪಾಪೈರ್ಭುಕ್ತಿಂ ಮುಕ್ತಿಂ ಚ ವಿಂದತಿ ॥ 12 ॥
ರಾಮನನ್ನು, ರಾಮಭದ್ರನನ್ನು, ರಾಮಚಂದ್ರನನ್ನು ಸ್ಮರಿಸುವವನಿಗೆ ಎಂದಿಗೂ ಪಾಪಗಳು ಅಂಟಿಕೊಳ್ಳುವುದಿಲ್ಲ, ಅವನು ಅಭಿವೃದ್ಧಿ ಹಾಗೂ ಮೋಕ್ಷವನ್ನು ಪಡೆಯುತ್ತಾನೆ.
ಜಗಜ್ಜೈತ್ರೈಕ ಮಂತ್ರೇಣ ರಾಮನಾಮ್ನಾಭಿ ರಕ್ಷಿತಮ್ ।
ಯಃ ಕಂಠೇ ಧಾರಯೇತ್ತಸ್ಯ ಕರಸ್ಥಾಃ ಸರ್ವಸಿದ್ಧಯಃ ॥ 13 ॥
ಮೂರು ಲೋಕಗಳಲ್ಲಿಯೂ, ರಾಮನಾಮದ ಸ್ತೋತ್ರವನ್ನು ಕೊರಳಲ್ಲಿ ರಕ್ಷಣೆಯಾಗಿ ಧರಿಸಿದವನು ಎಲ್ಲಾ ಶಕ್ತಿಗಳನ್ನು ಹೊಂದುತ್ತಾನೆ.
ವಜ್ರಪಂಜರ ನಾಮೇದಂ ಯೋ ರಾಮಕವಚಂ ಸ್ಮರೇತ್ ।
ಅವ್ಯಾಹತಾಜ್ಞಃ ಸರ್ವತ್ರ ಲಭತೇ ಜಯಮಂಗಳಮ್ ॥ 14 ॥
ವಜ್ರಪಂಜರ ಎಂದು ಕರೆಯಲ್ಪಡುವ ಈ ರಾಮನಾಮದ ಸ್ತೋತ್ರವನ್ನು ಪಠಿಸುವವನು ಯಾವುದೇ ರೀತಿಯಲ್ಲಿ ಬಾಧಿತನಾಗುವುದಿಲ್ಲ, ಹಾನಿಗೊಳಗಾಗುವುದಿಲ್ಲ ಮತ್ತು ತನ್ನ ಎಲ್ಲಾ ಪ್ರಯತ್ನಗಳಲ್ಲಿ ವಿಜಯವನ್ನು ಅನುಭವಿಸುತ್ತಾನೆ.
ಆದಿಷ್ಟವಾನ್-ಯಥಾ ಸ್ವಪ್ನೇ ರಾಮರಕ್ಷಾಮಿಮಾಂ ಹರಃ ।
ತಥಾ ಲಿಖಿತವಾನ್-ಪ್ರಾತಃ ಪ್ರಬುದ್ಧೌ ಬುಧಕೌಶಿಕಃ ॥ 15 ॥
ಈ ಸ್ತೋತ್ರವನ್ನು ರಚಿಸಿದ ಬುಧಕೌಶಿಕನಿಗೆ ಶಿವನು ಕನಸಿನಲ್ಲಿ ಈ ಸ್ತೋತ್ರವನ್ನು ರಚಿಸುವಂತೆ ಆಜ್ಞಾಪಿಸಿದನು ಮತ್ತು ಅವನು ಬೆಳಿಗ್ಗೆ ಎದ್ದ ತಕ್ಷಣ ಹಾಗೆ ಮಾಡಿದನು.
ಆರಾಮಃ ಕಲ್ಪವೃಕ್ಷಾಣಾಂ ವಿರಾಮಃ ಸಕಲಾಪದಾಮ್ ।
ಅಭಿರಾಮ-ಸ್ತ್ರಿಲೋಕಾನಾಂ ರಾಮಃ ಶ್ರೀಮಾನ್ ಸ ನಃ ಪ್ರಭುಃ ॥ 16 ॥
ಕಲ್ಪವೃಕ್ಷದಂತೆ ಎಲ್ಲಾ ಆಸೆಗಳನ್ನು ಈಡೇರಿಸುವ, ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಮತ್ತು ಮೂರು ಲೋಕಗಳಲ್ಲಿ ಸ್ತುತಿಸಲ್ಪಡುವ ರಾಮನು ನಿಜಕ್ಕೂ ನಮ್ಮ 'ಪ್ರಭು'.
ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ ।
ಪುಂಡರೀಕ ವಿಶಾಲಾಕ್ಷೌ ಚೀರಕೃಷ್ಣಾಜಿನಾಂಬರೌ ॥ 17 ॥
ಯುವಕರಾದ, ಸುಂದರರಾದ, ಕಮಲದ ಕಣ್ಣುಗಳನ್ನು ಹೊಂದಿರುವ ಮತ್ತು ತೊಗಟೆ ಮತ್ತು ಜಿಂಕೆಯ ಚರ್ಮವನ್ನು ಧರಿಸಿದ ಇಬ್ಬರು ಸಹೋದರರು (ರಾಮ-ಲಕ್ಷ್ಮಣರು) ನಮ್ಮನ್ನು ಎಂದೆಂದಿಗೂ ರಕ್ಷಿಸಲಿ.
ಫಲಮೂಲಾಶಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ ।
ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮಲಕ್ಷ್ಮಣೌ ॥ 18 ॥
ದಶರಥನ ಈ ಇಬ್ಬರು ಪುತ್ರರು, ಸಹೋದರರಾದ ರಾಮ ಮತ್ತು ಲಕ್ಷ್ಮಣರು, ಬೇರು ಮತ್ತು ಹಣ್ಣುಗಳನ್ನು ಸೇವಿಸಿ ಜೀವನ ಸಾಗಿಸುತ್ತಿರುವವರು ಮತ್ತು ತಪಸ್ಸು ಮತ್ತು ಬ್ರಹ್ಮಚರ್ಯವನ್ನು ಅಭ್ಯಾಸ ಮಾಡುವವರು.
ಶರಣ್ಯೌ ಸರ್ವಸತ್ತ್ವಾನಾಂ ಶ್ರೇಷ್ಠೌ ಸರ್ವಧನುಷ್ಮತಾಮ್ ।
ರಕ್ಷಃಕುಲ ನಿಹಂತಾರೌ ತ್ರಾಯೇತಾಂ ನೋ ರಘೂತ್ತಮೌ ॥ 19 ॥
ಈ ಇಬ್ಬರು ರಘುವಿನ ವಂಶಜರು- ಬಿಲ್ಲುಗಾರರಲ್ಲಿ ಅಗ್ರಗಣ್ಯರು, ರಾಕ್ಷಸರನ್ನು ನಾಶಮಾಡುವವರು ಮತ್ತು ಎಲ್ಲಾ ಜೀವಿಗಳ ಆಶ್ರಯದಾತರು, ನಮ್ಮನ್ನು ರಕ್ಷಿಸಲಿ.
ಆತ್ತ ಸಜ್ಯ ಧನುಷಾ ವಿಷುಸ್ಪೃಶಾ ವಕ್ಷಯಾಶುಗ ನಿಷಂಗ ಸಂಗಿನೌ ।
ರಕ್ಷಣಾಯ ಮಮ ರಾಮಲಕ್ಷಣಾವಗ್ರತಃ ಪಥಿ ಸದೈವ ಗಚ್ಛತಾಮ್ ॥ 20 ॥
ರಾಮ ಮತ್ತು ಲಕ್ಷ್ಮಣ ಇಬ್ಬರೂ, ಬಿಲ್ಲುಗಳನ್ನು ಎಳೆದು ಸಿದ್ಧರಾಗಿ, ಬಾಣಗಳ ಮೇಲೆ ಕೈಗಳನ್ನು ಇಟ್ಟು, ಸದಾ ತುಂಬಿದ ಬತ್ತಳಿಕೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು, ನನ್ನ ರಕ್ಷಣೆಗಾಗಿ ಯಾವಾಗಲೂ ನನ್ನನ್ನು ಸರಿದಾರಿಯಲ್ಲಿ ಕರೆದೊಯ್ಯಲಿ.
ಸನ್ನದ್ಧಃ ಕವಚೀ ಖಡ್ಗೀ ಚಾಪಬಾಣಧರೋ ಯುವಾ ।
ಗಚ್ಛನ್ ಮನೋರಥೋಽಸ್ಮಾಕಂ ರಾಮಃ ಪಾತು ಸ ಲಕ್ಷ್ಮಣಃ ॥ 21 ॥
ಕತ್ತಿ, ಗುರಾಣಿ, ಬಿಲ್ಲು ಮತ್ತು ಬಾಣಗಳಿಂದ ಸದಾ ಸಜ್ಜಾಗಿ, ಲಕ್ಷ್ಮಣನಿಂದ ಹಿಂಬಾಲಿಸಲ್ಪಡುವ ರಾಮನು ನಮ್ಮ ಮನೋರಥಗಳಿಗೆ ಜೀವ ತುಂಬುವಂತಿರುವ, ರಾಮನು ಲಕ್ಷ್ಮಣನೊಂದಿಗೆ ನಮ್ಮನ್ನು ರಕ್ಷಿಸಲಿ.
ರಾಮೋ ದಾಶರಥಿ ಶ್ಶೂರೋ ಲಕ್ಷ್ಮಣಾನುಚರೋ ಬಲೀ ।
ಕಾಕುತ್ಸಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ ॥ 22 ॥
ರಘುವಿನ ವಂಶಸ್ಥ ಮತ್ತು ದಶರಥ ಮತ್ತು ಕೌಸಲ್ಯೆಯ ಪುತ್ರನಾದ ರಾಮ, ಮತ್ತು ಯಾವಾಗಲೂ ಲಕ್ಷ್ಮಣನೊಂದಿಗಿರುವ, ಸರ್ವಶಕ್ತ ಮತ್ತು ಪರಿಪೂರ್ಣ ಪುರುಷ .
ವೇದಾಂತವೇದ್ಯೋ ಯಜ್ಞೇಶಃ ಪುರಾಣ ಪುರುಷೋತ್ತಮಃ ।
ಜಾನಕೀವಲ್ಲಭಃ ಶ್ರೀಮಾನಪ್ರಮೇಯ ಪರಾಕ್ರಮಃ ॥ 23 ॥
ವೇದಾಂತಗಳ ಮೂಲಕ ಗ್ರಹಿಸಲ್ಪಡಬಹುದಾದ , ಎಲ್ಲಾ ಯಜ್ಞಗಳ ಒಡೆಯನಾದ, ಪ್ರಾಚೀನನಾದ ಮತ್ತು ಶ್ರೇಷ್ಠನಾದ, ಸೀತೆಗೆ ಪ್ರಿಯನಾದ ಮತ್ತು ಹೋಲಿಸಲಾಗದಷ್ಟು ಪರಾಕ್ರಮಿಯಾದ ರಾಮನು...
ಇತ್ಯೇತಾನಿ ಜಪೇನ್ನಿತ್ಯಂ ಮದ್ಭಕ್ತಃ ಶ್ರದ್ಧಯಾನ್ವಿತಃ ।
ಅಶ್ವಮೇಧಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನ ಸಂಶಯಃ ॥ 24 ॥
(ಶಿವನು ಹೀಗೆ ಹೇಳಿದನು) ರಾಮನ ಈ ಮೇಲಿನ ಹೆಸರುಗಳನ್ನು ಶ್ರದ್ಧೆಯಿಂದ ಪಠಿಸುವ ನನ್ನ ಭಕ್ತನು ನಿಸ್ಸಂದೇಹವಾಗಿ ಅಶ್ವಮೇಧ ಯಜ್ಞ ಮಾಡುವುದಕ್ಕಿಂತ ಹೆಚ್ಚಿನ ಪುಣ್ಯವನ್ನು ಪಡೆಯುತ್ತಾನೆ.
ರಾಮಂ ದೂರ್ವಾದಳ ಶ್ಯಾಮಂ ಪದ್ಮಾಕ್ಷಂ ಪೀತವಾಸಸಮ್ ।
ಸ್ತುವಂತಿ ನಾಭಿ-ರ್ದಿವ್ಯೈ-ರ್ನತೇ ಸಂಸಾರಿಣೋ ನರಾಃ ॥ 25 ॥
ದೂರ್ವೆಯ ಎಲೆಯಂತೆ ಕಪ್ಪು ವರ್ಣನಾದ, ಕಮಲದ ಕಣ್ಣುಗಳಿರುವ, ಹಳದಿ ನಿಲುವಂಗಿಗಳನ್ನು ಧರಿಸಿರುವ ರಾಮನನ್ನು ಸ್ತುತಿಸುವವರು - ಈ ಸ್ತೋತ್ರದ ಮೂಲಕ ಅವನನ್ನು ಸ್ತುತಿಸುವವರು ಈ ಲೋಕದಲ್ಲಿ ಸಿಲುಕಿ ಒದ್ದಾಡುವದಿಲ್ಲ (ಅವರು ಸಂಸಾರದಿಂದ ಮುಕ್ತರಾಗುತ್ತಾರೆ).
ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ
ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಮ್ ।
ರಾಜೇಂದ್ರಂ ಸತ್ಯಸಂಧಂ ದಶರಥತನಯಂ ಶ್ಯಾಮಲಂ ಶಾಂತಮೂರ್ತಿಂ
ವಂದೇ ಲೋಕಾಭಿರಾಮಂ ರಘುಕುಲ ತಿಲಕಂ ರಾಘವಂ ರಾವಣಾರಿಮ್ ॥ 26 ॥
ಸುಂದರನಾದ, ಲಕ್ಷ್ಮಣನ ಅಣ್ಣನಾದ, ಸೀತೆಯ ಪತಿಯಾದ, ರಘು ಕುಲದ ವಂಶಸ್ಥರಲ್ಲಿ ಶ್ರೇಷ್ಠನಾದ, ಕರುಣಾ ಸಾಗರನಾದ, ಸದ್ಗುಣಗಳ ಭಂಡಾರವಾದ, ಬ್ರಾಹ್ಮಣರಿಗೆ ಪ್ರಿಯನಾದ, ಧರ್ಮರಕ್ಷಕನಾದ, ಸತ್ಯವನ್ನು ಪಾಲಿಸುವವನಾದ, ರಾಜರ ಚಕ್ರವರ್ತಿಯಾದ, ದಶರಥನ ಮಗನಾದ, ಕಪ್ಪು ವರ್ಣದವನಾದ, ಶಾಂತಿ ಮತ್ತು ನೆಮ್ಮದಿಯ ಮೂರ್ತಿಯೂ ಆದ, ರಾವಣನ ಶತ್ರುವೂ, ರಘು ವಂಶದ ಕಿರೀಟ ರತ್ನವೂ, ಎಲ್ಲರ ಗಮನ ಸೆಳೆಯುವವನೂ ಆದ ಆ ರಾಮನಿಗೆ ನಾನು ನಮಸ್ಕರಿಸುತ್ತೇನೆ.
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ।
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ॥ 27 ॥
ಪರೋಪಕಾರಿ (ಒಳ್ಳೆಯ ಮತ್ತು ರಕ್ಷಿಸುವ) ಮತ್ತು ಚಂದ್ರನಂತೆ ಶಾಂತಿಯುತ ಮತ್ತು ಸೀತೆಯ ಅಧಿಪತಿ ಮತ್ತು ಎಲ್ಲರಿಗೂ ಪಾಲಕನಾದ ಆ ರಾಮನಿಗೆ ನಾನು ನಮಸ್ಕರಿಸುತ್ತೇನೆ.
ಶ್ರೀರಾಮ ರಾಮ ರಘುನಂದನ ರಾಮ ರಾಮ
ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ ।
ಶ್ರೀರಾಮ ರಾಮ ರಣಕರ್ಕಶ ರಾಮ ರಾಮ
ಶ್ರೀರಾಮ ರಾಮ ಶರಣಂ ಭವ ರಾಮ ರಾಮ ॥ 28 ॥
ರಘುಗಳಿಗೆ ಪ್ರಿಯನಾದ, ಭರತನ ಅಣ್ಣನಾದ ಮತ್ತು ಯುದ್ಧದಲ್ಲಿ ಶತ್ರುಗಳನ್ನು ಪೀಡಿಸುವ ಆ ರಾಮನಿಗೆ ನಾನು ಖಂಡಿತ ಶರಣಾಗುತ್ತೇನೆ.
ಶ್ರೀರಾಮ ಚಂದ್ರ ಚರಣೌ ಮನಸಾ ಸ್ಮರಾಮಿ
ಶ್ರೀರಾಮ ಚಂದ್ರ ಚರಣೌ ವಚಸಾ ಗೃಹ್ಣಾಮಿ ।
ಶ್ರೀರಾಮ ಚಂದ್ರ ಚರಣೌ ಶಿರಸಾ ನಮಾಮಿ
ಶ್ರೀರಾಮ ಚಂದ್ರ ಚರಣೌ ಶರಣಂ ಪ್ರಪದ್ಯೇ ॥ 29 ॥
ನನ್ನ ಮನಸ್ಸಿನಲ್ಲಿ ಶ್ರೀ ರಾಮಚಂದ್ರನ ಪಾದಗಳನ್ನು ಸ್ಮರಿಸುತ್ತೇನೆ.
ನನ್ನ ಮಾತಿನ ಮೂಲಕ ಶ್ರೀ ರಾಮಚಂದ್ರನ ಪಾದಗಳನ್ನು ಸ್ತುತಿಸುತ್ತೇನೆ
ಶಿರ ಬಾಗಿ ಶ್ರೀ ರಾಮಚಂದ್ರನ ಪಾದಗಳಿಗೆ ನಮಸ್ಕರಿಸುತ್ತೇನೆ
ನಾನು ನಮಸ್ಕರಿಸುವುದರ ಮೂಲಕ ಶ್ರೀ ರಾಮಚಂದ್ರನ ಪಾದಗಳನ್ನು ಆಶ್ರಯಿಸುತ್ತೇನೆ.
ಮಾತಾ ರಾಮೋ ಮತ್-ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್-ಸಖಾ ರಾಮಚಂದ್ರಃ ।
ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ
ನಾನ್ಯಂ ಜಾನೇ ನೈವ ಜಾನೇ ನ ಜಾನೇ ॥ 30 ॥
ರಾಮ ನನ್ನ ತಾಯಿ, ತಂದೆ, ಗುರು ಮತ್ತು ಸ್ನೇಹಿತನಂತೆ, ನಿಜಕ್ಕೂ ದಯಾಳು ರಾಮನೇ ನನಗೆ ಸರ್ವಸ್ವ. ನನಗೆ ಅವನಂತವರು ಬೇರೆ ಯಾರೂ ತಿಳಿದಿಲ್ಲ, (ನಿಜಕ್ಕೂ ನನಗೆ ಗೊತ್ತಿಲ್ಲ).
ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ಚ (ತು) ಜನಕಾತ್ಮಜಾ ।
ಪುರತೋ ಮಾರುತಿರ್ಯಸ್ಯ ತಂ ವಂದೇ ರಘುನಂದನಮ್ ॥ 31 ॥
ಬಲಭಾಗದಲ್ಲಿ ಲಕ್ಷ್ಮಣನನ್ನೂ , ಎಡಭಾಗದಲ್ಲಿ ಸೀತೆಯನ್ನೂ ಹೊಂದಿರುವ ಮತ್ತು ಮುಂಭಾಗದಲ್ಲಿ ಹನುಮನನ್ನೂ ಹೊಂದಿರುವ ಆ ರಘು ವಂಶದ ನಂದನನಾದ ರಾಮನಿಗೆ ನಾನು ನಮಸ್ಕರಿಸುತ್ತೇನೆ.
ಲೋಕಾಭಿರಾಮಂ ರಣರಂಗಧೀರಂ
ರಾಜೀವನೇತ್ರಂ ರಘುವಂಶನಾಥಮ್ ।
ಕಾರುಣ್ಯರೂಪಂ ಕರುಣಾಕರಂ ತಂ
ಶ್ರೀರಾಮಚಂದ್ರಂ ಶರಣ್ಯಂ ಪ್ರಪದ್ಯೇ ॥ 32 ॥
ನೋಡಲು ತುಂಬಾ ಆಹ್ಲಾದಕರನಾದ, ರಣರಂಗದ ಒಡೆಯನಾದ, ಕಮಲದ ಕಣ್ಣಿನವನಾದ, ರಘು ಕುಲದ ಅಧಿಪತಿಯಾದ, ಕರುಣಾಳುವಿನ ಪ್ರತಿರೂಪವಾದ ಆ ರಾಮನಲ್ಲಿ ನಾನು ಆಶ್ರಯ ಪಡೆಯುತ್ತೇನೆ.
ಮನೋಜವಂ ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಮ್ ।
ವಾತಾತ್ಮಜಂ ವಾನರಯೂಥ ಮುಖ್ಯಂ
ಶ್ರೀರಾಮದೂತಂ ಶರಣಂ ಪ್ರಪದ್ಯೇ ॥ 33 ॥
ಮನಸ್ಸಿನಷ್ಟೇ ವೇಗವಾದ, ವೇಗದಲ್ಲಿ ತಂದೆಗೆ ವಾಯುದೇವನಿಗೆ ಸಮಾನ, ಇಂದ್ರಿಯಗಳ ಒಡೆಯ, ವಿದ್ವಾಂಸರಲ್ಲಿ ಶ್ರೇಷ್ಠ, ವಾನರ ಸೇನೆಗಳ ನಾಯಕ ಮತ್ತು ಶ್ರೀರಾಮನ ದೂತನಾದ ಹನುಮಂತನನ್ನು ನಾನು ಆಶ್ರಯಿಸುತ್ತೇನೆ.
ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್ ।
ಆರುಹ್ಯಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ॥ 34 ॥
ಮರದ ಮೇಲೆ ಕುಳಿತು ಕೋಗಿಲೆ ಹಾಡುವಂತೆ ಮಧುರವಾಗಿ ರಾಮನ ಮಹಿಮೆಯ ನಾಮವನ್ನು ಹಾಡುವ ಮಹಾನ್ ಋಷಿ ವಾಲ್ಮೀಕಿಯನ್ನು ನಾನು ವಂದಿಸುತ್ತೇನೆ.
ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ ।
ಲೋಕಾಭಿರಾಮಂ ಶ್ರೀರಾಮಂ ಭೂಯೋಭೂಯೋ ನಮಾಮ್ಯಹಮ್ ॥ 35 ॥
ಎಲ್ಲಾ ಅಡೆತಡೆಗಳನ್ನು ನಿವಾರಿಸುವ, ಎಲ್ಲಾ ಸಮೃದ್ಧಿಯನ್ನು ನೀಡುವ ಮತ್ತು ಎಲ್ಲರನ್ನೂ ಸಂತೋಷಪಡಿಸುವ ರಾಮನಿಗೆ ನಾನು ಮತ್ತೆ ಮತ್ತೆ ನಮಸ್ಕರಿಸುತ್ತೇನೆ.
ಭರ್ಜನಂ ಭವಬೀಜಾನಾಮರ್ಜನಂ ಸುಖಸಂಪದಾಮ್ ।
ತರ್ಜನಂ ಯಮದೂತಾನಾಂ ರಾಮ ರಾಮೇತಿ ಗರ್ಜನಮ್ ॥ 36 ॥
ರಾಮ ನಾಮದ ಘರ್ಜನೆಯು ಪುನರ್ಜನ್ಮದ ನಾಶ (ಆದ್ದರಿಂದ ಮುಕ್ತಿಗೆ ಕಾರಣ), ಎಲ್ಲಾ ಸಂಪತ್ತಿನ ಗಳಿಕೆ ಮತ್ತು ಯಮನ ದೂತರಿಗೆ ಭಯ ಹುಟ್ಟಿಸುತ್ತದೆ.
ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ ।
ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ
ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ॥ 37 ॥
ರಾಜರಲ್ಲಿ ರತ್ನವಾದ ರಾಮ, ನಾನು ಅವನನ್ನು ಪೂಜಿಸುತ್ತೇನೆ, ಅವನಿಂದಲೇ ಅನೇಕ ರಾಕ್ಷಸರು ನಾಶವಾಗಿದ್ದಾರೆ, ಅವನಿಗೆ ನನ್ನ ಪ್ರಾರ್ಥನೆ ಹೇಳಲಾಗುತ್ತದೆ, ಅವನನ್ನು ಮೀರಿ ಪೂಜಿಸಲು ಏನೂ ಇಲ್ಲ, ನಾನು ಅವನ ಸೇವಕ, ನನ್ನ ಮನಸ್ಸು ಅವನಲ್ಲಿ ಸಂಪೂರ್ಣವಾಗಿ ಮಗ್ನವಾಗಿದೆ, ಓ ರಾಮ, ದಯವಿಟ್ಟು ನನ್ನನ್ನು ಉದ್ಧರಿಸು.
ಗಮನಿಸಿ: ಈ ಶ್ಲೋಕವು ರಾಮ ಎಂಬ ಏಕವಚನ ಪದದ ಎಲ್ಲಾ ಏಳು ವಿಭಕ್ತಿಗಳನ್ನು ನೀಡುತ್ತದೆ ಮತ್ತು ಅವುಗಳನ್ನು ನೆನಪಿಟ್ಟುಕೊಳ್ಳಲು ನಮಗೆ ಸುಲಭ ಮಾರ್ಗವನ್ನು ನೀಡುತ್ತದೆ!
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ।
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ॥ 38 ॥
ನನ್ನ ಮನವನ್ನು ಸಂತೋಷಪಡಿಸುವ ಮತ್ತು ವರಪ್ರದವಾದ ಮುಖ ಹೊಂದಿರುವ ಭಗವಾನ್ ರಾಮನ ಹೆಸರು 'ಶ್ರೀ ರಾಮ, ರಾಮ' ಎಂದು ಮತ್ತೆ ಮತ್ತೆ ಜಪಿಸಿ, ನಾನು ಆನಂದವನ್ನು ಕಂಡುಕೊಳ್ಳುತ್ತೇನೆ. ಅವನ ಹೆಸರನ್ನು ಜಪಿಸುವುದು ವಿಷ್ಣುವಿನ ಸಾವಿರ ನಾಮಗಳನ್ನು ಜಪಿಸುವುದಕ್ಕೆ ಸಮಾನವಾಗಿದೆ.
ಇತಿ ಶ್ರೀಬುಧಕೌಶಿಕಮುನಿ ವಿರಚಿತಂ ಶ್ರೀರಾಮ ರಕ್ಷಾಸ್ತೋತ್ರಂ ಸಂಪೂರ್ಣಮ್ ।
Comments
Post a Comment