ವಾಕ್ಯ ವೃತ್ತಿ
ಪರಿಚಯ: ವಾಕ್ಯ ವೃತ್ತಿಯು ಒಂದು ವೇದಾಂತದ ಸಣ್ಣ ಗ್ರಂಥವಾಗಿದ್ದು, ಎರಡು ಮಹಾವಾಕ್ಯಗಳಾದ "ಅಹಂ ಬ್ರಹ್ಮಾಸ್ಮಿ "ಮತ್ತು "ತತ್ ತ್ವಮ್ ಅಸಿ "ಗಳ ವಿಸ್ತಾರವಾದ ವಿವರಣೆಯನ್ನು ಹೊಂದಿದೆ. ಪ್ರತಿಯೊಂದು ಮಂತ್ರವನ್ನು ಗುರುವು ಶಿಷ್ಯನಿಗೆ ವಿವರಿಸುವಂತೆ ಸ್ಪಷ್ಟವಾಗಿ ವಿವರಿಸುವದನ್ನು ವೃತ್ತಿ ಎಂದು ಕರೆಯಲಾಗುತ್ತದೆ. ಈ ಪಠ್ಯದ ಬಗ್ಗೆ ಬಹಳ ಪುರಾತನವಾದ ವ್ಯಾಖ್ಯಾನವು ಲಭ್ಯವಿದ್ದರೂ, ಇದರ ಲೇಖಕರ ಯಾರೆಂದು ನಿಖರವಾಗಿ ತಿಳಿದಿಲ್ಲ. ಈ ಕೃತಿಯ ಕುರಿತು ಸ್ವಾಮಿ ಚಿನ್ಮಯಾನಂದ ಅವರ ವ್ಯಾಖ್ಯಾನವನ್ನು 1981 ರಲ್ಲಿ ಪ್ರಕಟಿಸಲಾಯಿತು. ವಾಕ್ಯ ವೃತ್ತಿಯು ಆದಿ ಶಂಕರರಿಂದ ರಚಿತವಾಗಿದೆ ಎಂದು ಹೇಳಲಾಗಿದೆ ಹಾಗೂ ಐವತ್ತೆರಡು ಶ್ಲೋಕಗಳನ್ನು ಹೊಂದಿದೆ. ಇದು ಕುತೂಹಲಿಯಾದ ವಿದ್ಯಾರ್ಥಿಮತ್ತು ಜ್ಞಾನಿಯಾದ ಶಿಕ್ಷಕರ ನಡುವಿನ ಸಂಭಾಷಣೆಯ ರೂಪದಲ್ಲಿದೆ. ಇದರಲ್ಲಿ ಒಬ್ಬ ವಿದ್ಯಾರ್ಥಿಯು ತನ್ನ ಗುರುಗಳ ಬಳಿ ಹೋಗಿ ಮಹಾವಾಕ್ಯವು(ತತ್ವಮಸಿ) ತನಗೆ ಸರಿಯಾಗಿ ತಿಳಿಯಲಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ ಮತ್ತು ಆಗ ಅವನ ಗುರುವು ತಾಳ್ಮೆಯಿಂದ ಈ ಮಹತ್ವದ ವಾಕ್ಯದಲ್ಲಿ ಬಳಸಲಾದ ಪದಗಳ ಮೂಲಕ ಅದರ ಅರ್ಥವನ್ನು ಸ್ಪಷ್ಟಪಡಿಸುತ್ತಾನೆ. (ಆಧಾರ : ವಿಕಿಪೀಡಿಯಾ)