ವಾಕ್ಯ ವೃತ್ತಿ
ಪರಿಚಯ:
ಈ ಪಠ್ಯದ ಬಗ್ಗೆ ಬಹಳ ಪುರಾತನವಾದ ವ್ಯಾಖ್ಯಾನವು ಲಭ್ಯವಿದ್ದರೂ, ಇದರ ಲೇಖಕರ ಯಾರೆಂದು ನಿಖರವಾಗಿ ತಿಳಿದಿಲ್ಲ.
ಈ ಕೃತಿಯ ಕುರಿತು ಸ್ವಾಮಿ ಚಿನ್ಮಯಾನಂದ ಅವರ ವ್ಯಾಖ್ಯಾನವನ್ನು 1981 ರಲ್ಲಿ ಪ್ರಕಟಿಸಲಾಯಿತು.
ವಾಕ್ಯ ವೃತ್ತಿಯು ಆದಿ ಶಂಕರರಿಂದ ರಚಿತವಾಗಿದೆ ಎಂದು ಹೇಳಲಾಗಿದೆ ಹಾಗೂ ಐವತ್ತೆರಡು ಶ್ಲೋಕಗಳನ್ನು ಹೊಂದಿದೆ. ಇದು ಕುತೂಹಲಿಯಾದ ವಿದ್ಯಾರ್ಥಿಮತ್ತು ಜ್ಞಾನಿಯಾದ ಶಿಕ್ಷಕರ ನಡುವಿನ ಸಂಭಾಷಣೆಯ ರೂಪದಲ್ಲಿದೆ.
ಇದರಲ್ಲಿ ಒಬ್ಬ ವಿದ್ಯಾರ್ಥಿಯು ತನ್ನ ಗುರುಗಳ ಬಳಿ ಹೋಗಿ ಮಹಾವಾಕ್ಯವು(ತತ್ವಮಸಿ) ತನಗೆ ಸರಿಯಾಗಿ ತಿಳಿಯಲಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ ಮತ್ತು ಆಗ ಅವನ ಗುರುವು ತಾಳ್ಮೆಯಿಂದ ಈ ಮಹತ್ವದ ವಾಕ್ಯದಲ್ಲಿ ಬಳಸಲಾದ ಪದಗಳ ಮೂಲಕ ಅದರ ಅರ್ಥವನ್ನು ಸ್ಪಷ್ಟಪಡಿಸುತ್ತಾನೆ.
ವಾಕ್ಯವೃತ್ತಿ
.. ಶ್ರೀ ಗಣೇಶಾಯ ನಮಃ..
ನಿರ್ಮುಕ್ತಬಂಧನಮಪಾರಸುಖಾಂಬುರಾಶಿಂ
ವಿಶ್ವದ ಸೃಷ್ಟಿ, ನಿರ್ವಹಣೆ ಮತ್ತು ಲಯಕ್ಕೆ ಕಾರಣವಾಗುವ ಅಗೋಚರ ಶಕ್ತಿಯನ್ನು ಹೊಂದಿರುವ, ಸರ್ವವ್ಯಾಪಿಯಾದ, ಶ್ರೀಯ(ಲಕ್ಷ್ಮಿಯ) ಪ್ರಿಯನಾದ, ವಿಶ್ವದಲ್ಲಿ ಎಲ್ಲವನ್ನೂ ತಿಳಿದ ಪ್ರಭುವಾದ, ಅನಂತ ರೂಪಗಳನ್ನು ಧರಿಸಿದರೂ ಸದಾ ಮುಕ್ತನಾದ, ಅಪಾರ ಆನಂದ ಸಾಗರನಾದ, ಆ ಶುದ್ಧ ಪ್ರಜ್ಞಾರೂಪನಿಗೆ ನಾನು ನಮಸ್ಕರಿಸುತ್ತೇನೆ.
ಇತ್ಥಂ ವಿಜಾನಾಮಿ ಸದಾತ್ಮರೂಪಂ
ಯಾರ ಕೃಪೆಯಿಂದ "ನಾನೇ ವಿಷ್ಣು, ನನ್ನಿಂದಲೇ ಎಲ್ಲವೂ ಪರಿಕಲ್ಪಿತವಾಗಿದೆ" ಎಂದು ಅರಿತುಕೊಳ್ಳುತ್ತಿದ್ದೇನೋ, ಆ ಗುರುವಿನ ಪಾದಾರವಿಂದಕ್ಕೆ ಪುನಃ ಪುನಃ ನಮಸ್ಕರಿಸುತ್ತೇನೆ.
ಶಮಾದಿಸಾಧನೈರ್ಯುಕ್ತಃ ಸದ್ಗುರುಂ ಪರಿಪೃಚ್ಛತಿ .. ೩..
ತಾಪತ್ರಯದ ಬೆಂಕಿಯಿಂದ ಬೆಂದಿರುವ, ಮನಸ್ಸು ಉದ್ವಿಗ್ನನಾದ, ಶಮ-ದಮ ಇತ್ಯಾದಿ ಸಾಧನೆಗಳನ್ನು ರೂಢಿಗಗೊಳಿಸಿಕೊಂಡಿರುವ ಶಿಷ್ಯನು ಸದ್ಗುರುವನ್ನು ಕೇಳುತ್ತಾನೆ.
ಅನಾಯಾಸೇನ ಯೇನಾಸ್ಮಾನ್ಮುಚ್ಚ್ಯೇಯಂ ಭವಬಂಧನಾತ್ .
ತನ್ಮೇ ಸಂಕ್ಷಿಪ್ಯ ಭಗವನ್ಕೇವಲಂ ಕೃಪಯಾ ವದ .. ೪..
"ಈ ಭವಬಂದನದಿಂದ ಅನಾಯಾಸವಾಗಿ ಹೇಗೆ ನಾನು ಮುಕ್ತನಾಗಲಿ ಎಂಬುದನ್ನು ಸಂಕ್ಷಿಪ್ತವಾಗಿ ಕೃಪೆ ಮಾಡಿ ಹೇಳು, ಭಗವಾನ್." ಎಂದು ಶಿಷ್ಯನು ಕೇಳುತ್ತಾನೆ.
ಗುರುರುವಾಚ .
ಸಾಧ್ವೀತೇ ವಚನವ್ಯಕ್ತಿಃ ಪ್ರತಿಭಾತಿ ವದಾಮಿ ತೇ .
ಇದಂ ತದಿತಿ ವಿಸ್ಪಷ್ಟಂ ಸಾವಧಾನಮನಾಃ ಶೃಣು .. ೫..
ತತ್ತ್ವಮಸ್ಯಾದಿವಾಕ್ಯೋತ್ಥಂ ಯಜ್ಜೀವಪರಮಾತ್ಮನೋಃ .
ತಾದಾತ್ಮ್ಯವಿಷಯಂ ಜ್ಞಾನಂ ತದಿದಂ ಮುಕ್ತಿಸಾಧನಂ .. ೬..
"ತತ್ ತ್ವಮ್ ಅಸಿ" ಇತ್ಯಾದಿ ವೇದದ ವಾಕ್ಯಗಳಿಂದ ಹೊರಹೊಮ್ಮುವ ಜ್ಞಾನವು, "ಜೀವಾತ್ಮ ಮತ್ತು ಪರಮಾತ್ಮನ ನಡುವಿನ ಐಕ್ಯತೆ"ಯ ಕುರಿತಾದ ಜ್ಞಾನವು, ಮುಕ್ತಿಯ ಸಾಧನವಾಗಿದೆ.
ಶಿಷ್ಯ ಉವಾಚ .
ಕೋ ಜೀವಃ ಕಃ ಪರಶ್ಚಾತ್ಮಾ ತಾದಾತ್ಮ್ಯಂ ವಾ ಕಥಂ ತಯೋಃ .
ತತ್ತ್ವಮಸ್ಯಾದಿವಾಕ್ಯಂ ವಾ ಕಥಂ ತತ್ಪ್ರತಿಪಾದಯೇತ್ .. ೭..
ಶಿಷ್ಯ ಹೇಳಿದನು
"ಆತ್ಮ ಯಾವುದು? ಪರಮಾತ್ಮ ಯಾವುದು? ಹೇಗೆ ಅವೆರಡೂ ಒಂದೆ ಆಗುತ್ತವೆ? 'ತತ್ವಮಸಿ' ಇತ್ಯಾದಿ ವಾಕ್ಯಗಳು ಹೇಗೆ ಇವೆರಡರ ಐಕ್ಯತೆಯನ್ನು ಪ್ರಮಾಣಿಸುತ್ತವೆ?"
ಗುರುರುವಾಚ .
ಅತ್ರ ಬ್ರೂಮಃ ಸಮಾಧಾನಂ ಕೋಽನ್ಯೋ ಜೀವಸ್ತ್ವಮೇವ ಹಿ .
ಯಸ್ತ್ವಂ ಪೃಚ್ಛಸಿ ಮಾಂ ಕೋಽಹಂ ಬ್ರಹ್ಮೈವಾಸಿ ನ ಸಂಶಯಃ .. ೮..
ಗುರು ಹೇಳುತ್ತಾನೆ
"ನಾನು ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ. 'ನಾನು ಯಾರು?' ಎಂಬ ಪ್ರಶ್ನೆಯನ್ನು ಕೇಳುವ ಆತ್ಮ (ಜೀವಾತ್ಮ) ನೀನಲ್ಲದೆ ಬೇರೆ ಯಾರು ಇರಲು ಸಾಧ್ಯ?ನಿಸ್ಸಂದೇಹವಾಗಿ ನೀನೇ ಬ್ರಹ್ಮ".
ಶಿಷ್ಯ ಉವಾಚ .
ಪದಾರ್ಥಮೇವ ಜಾನಾಮಿ ನಾದ್ಯಾಪಿ ಭಗವನ್ ಸ್ಫುಟಂ .
ಅಹಂ ಬ್ರಹ್ಮೇತಿ ವಾಕ್ಯಾರ್ಥಂ ಪ್ರತಿಪದ್ಯೇ ಕಥಂ ವದ .. ೯..
ಶಿಷ್ಯ ಹೇಳಿದನು: "ಆ ಶಬ್ದಗಳ ಅರ್ಥವೂ ನನಗೆ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲ; ಹಾಗಾದರೆ "ನಾನು ಬ್ರಹ್ಮ" ಎಂಬ ವಾಕ್ಯದ ಮಹತ್ವವನ್ನು ನಾನು ಹೇಗೆ ಗ್ರಹಿಸಲಿ?"
ಗುರುರುವಾಚ .
ಸತ್ಯಮಾಹ ಭವಾನತ್ರ ವಿಗಾನಂ ನೈವ ವಿದ್ಯತೇ .
ಹೇತುಃ ಪದಾರ್ಥಬೋಧೋ ಹಿ ವಾಕ್ಯಾರ್ಥಾವಗತೇರಿಹ .. ೧೦..
ಗುರು ಹೇಳಿದನು "ಒಂದು ವಾಕ್ಯದಲ್ಲಿ ಬಳಸಲಾದ ಶಬ್ದಗಳ ಅರ್ಥ ಮತ್ತು ತಿಳುವಳಿಕೆಯು, ವಾಕ್ಯದ ಪೂರ್ಣ ಮಹತ್ವವನ್ನು ಅರ್ಥಮಾಡಿಕೊಳ್ಳಲು ಅವಶ್ಯಕವಾಗಿದೆ ಎಂದು ನೀನು ಹೇಳಿದಾಗ ನೀನು ಸತ್ಯವನ್ನೇ ಹೇಳಿದ್ದೀಯ. ಅದರ ಬಗ್ಗೆ ಯಾವುದೇ ಎರಡು ಅಭಿಪ್ರಾಯಗಳಿಲ್ಲ"
ಅಂತಃಕರಣತದ್ವೃತ್ತಿಸಾಕ್ಷಿಚೈತನ್ಯವಿಗ್ರಹಃ .
ಆನಂದರೂಪಃ ಸತ್ಯಃ ಸನ್ಕಿಂ ನಾತ್ಮಾನಂ ಪ್ರಪದ್ಯಸೇ .. ೧೧..
ಶಾಶ್ವತ ಆನಂದ-ಸತ್ವದ ಸಾಕಾರವಾದ, ಅಂತಃಕರಣ ಮತ್ತು ಅವುಗಳ ವೃತ್ತಿಯನ್ನು ಬೆಳಗಿಸುವ ಸಾಕ್ಷಿಯ ಬೆಳಕಾದ, ನಿನ್ನ ಸ್ವಂತ ಆತ್ಮವನ್ನು ನೀನು ಏಕೆ ಗುರುತಿಸುವುದಿಲ್ಲ?
ಸತ್ಯಾನಂದಸ್ವರೂಪಂ ಧೀಸಾಕ್ಷಿಣಂ ಬೋಧವಿಗ್ರಹಂ .
ಚಿಂತಯಾತ್ಮತಯಾ ನಿತ್ಯಂ ತ್ಯಕ್ತ್ವಾ ದೇಹಾದಿಗಾಂ ಧಿಯಂ .. ೧೨..
ಆತ್ಮವೆಂದರೆ ಶರೀರವೆಂಬ ತಪ್ಪು ಕಲ್ಪನೆಯನ್ನು ತ್ಯಜಿಸಿ, ಸತ್ಯಾನಂದ ಸ್ವರೂಪವಾದ, ಬುದ್ಧಿಶಕ್ತಿಯ ಸಾಕ್ಷಿಯಾದ, ಜ್ಞಾನದ ಸಾಕಾರವು ನೀನೆಂದು ನಿತ್ಯವೂ ಚಿಂತಿಸು.
ರೂಪಾದಿಮಾನ್ಯತಃ ಪಿಂಡಸ್ತತೋ ನಾತ್ಮಾ ಘಟಾದಿವತ್ .
ವಿಯದಾದಿಮಹಾಭೂತವಿಕಾರತ್ವಾಚ್ಚ ಕುಂಭವತ್ .. ೧೩..
ರೂಪ ಇತ್ಯಾದಿಗಳನ್ನು ಹೊಂದಿರುವ ಈ ಶರೀರ ಮಡಿಕೆಯಂತೆಯೆ ಆತ್ಮವಲ್ಲ. ಅದು ಮಡಿಕೆಯಂತೆಯೇ ಆಕಾಶ ಇತ್ಯಾದಿ ಪಂಚ ಮಹಾಭೂತಗಳ ಪರಿವರ್ತನೆಯಿಂದ ರಚಿತವಾಗಿದೆ.
ಅನಾತ್ಮಾ ಯದಿ ಪಿಂಡೋಽಯಮುಕ್ತಹೇತುಬಲಾನ್ಮತಃ .
ಕರಾಮಲಕವತ್ಸಾಕ್ಷಾದಾತ್ಮಾನಂ ಪ್ರತಿಪಾದಯ .. ೧೪..
ಶಿಷ್ಯ ಹೇಳಿದನು: "ಈ ವಾದಗಳ ಬಲದಿಂದ, ಸ್ಥೂಲ ದೇಹವನ್ನು "ಆತ್ಮ ಅಲ್ಲ" ಎಂದು ಪರಿಗಣಿಸಿದರೆ, ದಯವಿಟ್ಟು ಅಂಗೈಯಲ್ಲಿನ ಹಣ್ಣಿನಂತೆ, ಸ್ಪಷ್ಟವಾಗಿ ಆತ್ಮವನ್ನು ಸಮಗ್ರವಾಗಿ ವಿವರಿಸಿ ಮತ್ತು ನೇರವಾಗಿ ಸೂಚಿಸಿ ".
ಘಟದ್ರಷ್ಟಾ ಘಟಾದ್ಭಿನ್ನಃ ಸರ್ವಥಾ ನ ಘಟೋ ಯಥಾ .
ದೇಹದ್ರಷ್ಟಾ ತಥಾ ದೇಹೋ ನಾಹಮಿತ್ಯವಧಾರಯ .. ೧೫..
ಗುರು ಹೇಳುತ್ತಾನೆ "ಒಂದು ಮಡಕೆಯನ್ನು ನೋಡುವವನು, ಮಡಕೆಯಿಂದ ಸ್ಪಷ್ಟವಾಗಿ ಭಿನ್ನನಾಗಿರುತ್ತಾನೆ ಮತ್ತು ಅವನು ಎಂದಿಗೂ ಮಡಕೆಯಾಗಲು ಸಾಧ್ಯವಿಲ್ಲ. ಅದೇ ರೀತಿ, ನಿನ್ನ ದೇಹವನ್ನು ಗ್ರಹಿಸುವ ನೀನು ದೇಹದಿಂದ ಭಿನ್ನನಾಗಿದ್ದೀಯ ಮತ್ತು ಎಂದಿಗೂ ದೇಹವಾಗಲು ಸಾಧ್ಯವಿಲ್ಲ - ಇದನ್ನು ನೀನು ದೃಢವಾಗಿ ಖಚಿತಪಡಿಸಿಕೊ."
ಏವಮಿಂದ್ರಿಯದೃಙ್ನಾಹಮಿಂದ್ರಿಯಾಣೀತಿ ನಿಶ್ಚಿನು .
ಮನೋಬುದ್ಧಿಸ್ತಥಾ ಪ್ರಾಣೋ ನಾಹಮಿತ್ಯವಧಾರಯ .. ೧೬..
ಅಂತೆಯೇ, ಇಂದ್ರಿಯಗಳನ್ನು ನೋಡುವವನಾದ ನೀನು ಇಂದ್ರಿಯಗಳಲ್ಲ ಎಂದು ನಿನ್ನಲ್ಲಿ ಖಚಿತ ಪಡಿಸಿಕೊ, ಮತ್ತು ನೀನು ಮನಸ್ಸು ಅಲ್ಲ, ಬುದ್ಧಿ ಅಲ್ಲ, ಪ್ರಾಣ ಅಲ್ಲ ಎಂದು ಖಚಿತಪಡಿಸಿಕೊ.
ಸಂಘಾತೋಽಪಿ ತಥಾ ನಾಹಮಿತಿ ದೃಶ್ಯವಿಲಕ್ಷಣಂ .
ದ್ರಷ್ಟಾರಮನುಮಾನೇನ ನಿಪುಣಂ ಸಂಪ್ರಧಾರಯ .. ೧೭..
ಅದೇ ರೀತಿ ನೀನು ಇವೆಲ್ಲವುಗಳ ಸಂಯೋಜನೆಯಲ್ಲ ಎಂದು ಖಚಿತಪಡಿಸಿಕೊ ಮತ್ತು ಬುದ್ಧಿವಂತಿಕೆಯಿಂದ, ಅನುಮಾನದ ಮೂಲಕ, ನೀನು, 'ದರ್ಶಕ', ಹಾಗಾಗಿ 'ದೃಶ್ಯ'ದಿಂದ ಸಂಪೂರ್ಣವಾಗಿ ಭಿನ್ನ ಎಂದು ನಿರ್ಧರಿಸಿಕೋ.
ದೇಹೇಂದ್ರಿಯಾದಯೋ ಭಾವಾ ಹಾನಾದಿವ್ಯಾಪೃತಿಕ್ಷಮಾಃ .
ಯಸ್ಯ ಸನ್ನಿಧಿಮಾತ್ರೇಣ ಸೋಽಹಮಿತ್ಯವಧಾರಯ .. ೧೮..
"'ನಾನೇ ಅವನು', ಯಾರ ಉಪಸ್ಥಿತಿಯಿಂದಾಗಿಯೇ ದೇಹ ಮತ್ತು ಇಂದ್ರಿಯಗಳಂತಹ ಜಡ ವಸ್ತುಗಳು ಸ್ವೀಕಾರ ಮತ್ತು ತಿರಸ್ಕಾರದ ಮೂಲಕ ಕಾರ್ಯನಿರ್ವಹಿಸಲು ಸಮರ್ಥವಾಗಿವೆಯೋ ಆ ವ್ಯಕ್ತಿ".
ಅನಾಪನ್ನವಿಕಾರಃ ಸನ್ನಯಸ್ಕಾಂತವದೇವ ಯಃ .
ಬುದ್ಧ್ಯಾದೀಂಶ್ಚಾಲಯೇತ್ಪ್ರತ್ಯಕ್ ಸೋಽಹಮಿತ್ಯವಧಾರಯ .. ೧೯..
ಯಾರು ನಿರ್ವಿಕಾರನು, ಆಯಸ್ಕಾಂತದಂತೆ ಬುದ್ಧಿ ಇತ್ಯಾದಿಗಳನ್ನು ಚಲಿಸುವವನೋ ಅವನೇ ನೀನು ಎಂದು ದೃಢವಾಗಿ ನಂಬಿಕೋ.
ಅಜಡಾತ್ಮವದಾಭಾಂತಿ ಯತ್ಸಾನ್ನಿಧ್ಯಾಜ್ಜಡಾ ಅಪಿ .
ದೇಹೇಂದ್ರಿಯಮನಃಪ್ರಾಣಾಃ ಸೋಽಹಮಿತ್ಯವಧಾರಯ .. ೨೦..
ಯಾರ ಪ್ರಮುಖ ಉಪಸ್ಥಿತಿಯಲ್ಲಿ ದೇಹ, ಇಂದ್ರಿಯಗಳು, ಮನಸ್ಸು ಮತ್ತು ಪ್ರಾಣಗಳು, ಸ್ವತಃ ಜಡವಾಗಿದ್ದರೂ, ಅವು ಆತ್ಮದಂತೆ ಜಾಗೃತ ಮತ್ತು ಕ್ರಿಯಾಶೀಲವಾಗಿ ಕಾಣುತ್ತವೆಯೋ, ಅವನೇ ನಾನು ಎಂದು ನಂಬಿಕೋ.
ಅಗಮನ್ಮೇ ಮನೋಽನ್ಯತ್ರ ಸಾಂಪ್ರತಂ ಚ ಸ್ಥಿರೀಕೃತಂ .
ಏವಂ ಯೋ ವೇತ್ತಿ ಧೀವೃತ್ತಿಂ ಸೋಽಹಮಿತ್ಯವಧಾರಯ .. ೨೧..
ನನ್ನ ಮನಸ್ಸು ಬೇರೆಡೆಗೆ ಹೋಯಿತು, ಆದರೆ, ಈಗ ಅದನ್ನು ಸ್ಥಿರೀಕರಿಸಲಾಗಿದೆ" ಎಂಬಂತಹ ನನ್ನ ಮನಸ್ಸಿನಲ್ಲಿರುವ ಮಾರ್ಪಾಡುಗಳನ್ನು ಬೆಳಗಿಸುವ ಆತ್ಮವೇ ನಾನು ಎಂದು ನಂಬಿಕೋ.
ಸ್ವಪ್ನಜಾಗರಿತೇ ಸುಪ್ತಿಂ ಭಾವಾಭಾವೌ ಧಿಯಾಂ ತಥಾ .
ಯೋ ವೇತ್ತ್ಯವಿಕ್ರಿಯಃ ಸಾಕ್ಷಾತ್ಸೋಽಹಮಿತ್ಯವಧಾರಯ .. ೨೨..
"ಯಾವ ಪ್ರಜ್ಞೆ ನಿರ್ವಿಕಾರವಾದ ಆತ್ಮವೋ, ಯಾವುದು ಮೂರು ಸ್ಥಿತಿಗಳಾದ ಸ್ವಪ್ನ, ಜಾಗೃತ, ಸುಷುಪ್ತಿಯಲ್ಲಿ ಅರಿತುಕೊಂಡು ಪ್ರಕಾಶಿಸುವದೋ, ಯಾವುದು ಬುದ್ಧಿಯ ಕಾಣಿಸಿಕೊಳ್ಳುವಿಕೆ ಮತ್ತು ಕಣ್ಮರೆಯಾಗುವಿಕೆಯನ್ನು, ಅದರ ಮಾರ್ಪಾಟವನ್ನು ಪ್ರಕಾಶಿಸುವದೋ, ಅದೇ ನಾನು" ಎಂದು ನಂಬಿಕೋ.
ಘಟಾವಭಾಸಕೋ ದೀಪೋ ಘಟಾದನ್ಯೋ ಯಥೇಷ್ಯತೇ .
ದೇಹಾವಭಾಸಕೋ ದೇಹೀ ತಥಾಹಂ ಬೋಧವಿಗ್ರಹಃ .. ೨೩..
ಮಡಿಕೆಯಲ್ಲಿರುವ ದೀಪ ಮಡಿಕೆಯನ್ನು ಬೆಳಗಿದರೂ ಅದು ಮಡಿಕೆಯಲ್ಲ. ಹಾಗೇ ನೀನು ಆತ್ಮ. ದೇಹವನ್ನು ಪ್ರಕಾಶಿಸುವ ಪ್ರಜ್ಞೆ, ಆದರೆ ದೇಹದಿಂದ ಭಿನ್ನ. ನೀನು ಪ್ರಜ್ಞಾಸ್ವರೂಪ ಎಂದು ತಿಳಿದುಕೋ.
ಪುತ್ರವಿತ್ತಾದಯೋ ಭಾವಾ ಯಸ್ಯ ಶೇಷತಯಾ ಪ್ರಿಯಾಃ .
ದ್ರಷ್ಟಾ ಸರ್ವಪ್ರಿಯತಮಃ ಸೋಽಹಮಿತ್ಯವಧಾರಯ .. ೨೪..
"ಯಾರು ಎಲ್ಲರಿಗಿಂತ ಪ್ರಿಯನೋ, ಯಾರು ಎಲ್ಲದರ ನೋಡುವವನೋ, ಯಾರಿಗಾಗಿ ಪುತ್ರ, ಧನ ಇತ್ಯಾದಿ ವಸ್ತುಗಳು ಮತ್ತು ವ್ಯಕ್ತಿಗಳು ಪ್ರಿಯವೋ, ಅವನೇ ನಾನು" ಎಂದು ನಂಬಿಕೋ.
ಪರಪ್ರೇಮಾಸ್ಪದತಯಾ ಮಾ ನ ಭೂವಮಹಂ ಸದಾ .
ಭೂಯಾಸಮಿತಿ ಯೋ ದ್ರಷ್ಟಾ ಸೋಽಹಮಿತ್ಯವಧಾರಯ .. ೨೫..
ಯಾರ ಬಗ್ಗೆ ಯಾವಾಗಲೂ 'ನಾನು ಸರ್ವಾದಾ ಇರಲಿ; ನಾನು ಎಂದಿಗೂ ಅಸ್ತಿತ್ವ ಕಳೆದುಕೊಳ್ಳದಿರಲಿ' ಎಂಬ ಆತಂಕವಿದೆಯೋ ಅವನೇ ನೀನು ಎಂದು ತಿಳಿ. ಏಕೆಂದರೆ ಈ ದ್ರಷ್ಟಾರನು ಎಲ್ಲರಿಗಿಂತ ಪ್ರಿಯ. 'ಅವನೇ ನಾನು' - ಹೀಗೆ ಪ್ರತಿಪಾದಿಸಿ ಮತ್ತು ಅರಿತುಕೊ.
ಯಃ ಸಾಕ್ಷಿಲಕ್ಷಣೋ ಬೋಧಸ್ತ್ವಂಪದಾರ್ಥಃ ಸ ಉಚ್ಯತೇ .
ಸಾಕ್ಷಿತ್ವಮಪಿ ಬೋದ್ಧೃತ್ವಮವಿಕಾರಿತಯಾತ್ಮನಃ .. ೨೬..
ಸಾಕ್ಷಿಯಾಗಿ ಕಾಣಿಸಿಕೊಳ್ಳುವ ಆತ್ಮವೇ "ನೀನು" ಎಂಬ ಪದದ ಅರ್ಥ. ಎಲ್ಲಾ ಬದಲಾವಣೆಗಳಿಂದ ಮುಕ್ತವಾಗಿರುವ, ಸಾಕ್ಷಿ ಕೂಡ ಆತ್ಮದ ಪ್ರಕಾಶಮಾನ ಶಕ್ತಿಯಾಗಿದೆ.
ದೇಹೇಂದ್ರಿಯಮನಃಪ್ರಾಣಾಹಂಕೃತಿಭ್ಯೋ ವಿಲಕ್ಷಣಃ .
ಪ್ರೋಜ್ಝಿತಾಶೇಶಷಡ್ಭಾವವಿಕಾರಸ್ತ್ವಂಪದಾಭಿಧಃ .. ೨೭..
ದೇಹ, ಇಂದ್ರಿಯಗಳು, ಮನಸ್ಸು, ಪ್ರಾಣ ಮತ್ತು ಅಹಂಕಾರಗಳಿಂದ ಸಂಪೂರ್ಣವಾಗಿ ಭಿನ್ನವಾದದ್ದು ಆತ್ಮ; ಆದ್ದರಿಂದ, ಎಲ್ಲಾ ಭೌತಿಕ ವಸ್ತುಗಳು ಅಗತ್ಯವಾಗಿ ಒಳಗಾಗಬೇಕಾದ ಆರು ಮಾರ್ಪಾಡುಗಳಿಂದ ಅದು ಸಂಪೂರ್ಣವಾಗಿ ಮುಕ್ತವಾಗಿದೆ. ಈ ಆತ್ಮವು "ನೀನು" ಎಂಬ ಪದದ ಸೂಚಕ ಅರ್ಥವಾಗಿದೆ.
ತ್ವಮರ್ಥಮೇವಂ ನಿಶ್ಚಿತ್ಯ ತದರ್ಥಂ ಚಿಂತಯೇತ್ಪುನಃ .
ಅತದ್ವ್ಯಾವೃತ್ತಿರೂಪೇಣ ಸಾಕ್ಷಾದ್ವಿಧಿಮುಖೇನ ಚ .. ೨೮..
"ನೀನು" ಎಂಬ ಪದದ ಅರ್ಥವನ್ನು ಹೀಗೆ ಖಚಿತಪಡಿಸಿಕೊಂಡ ನಂತರ, "ಅದು" ಎಂಬ ಪದದ ಅರ್ಥವೇನೆಂದು, ನಿರಾಕರಣೆಯ ವಿಧಾನ ಮತ್ತು ಧರ್ಮಗ್ರಂಥದ ಪ್ರತಿಪಾದನೆಯ ನೇರ ವಿಧಾನ ಎರಡನ್ನೂ ಬಳಸಿ ಯೋಚಿಸಬೇಕು.
ನಿರಸ್ತಾಶೇಷಸಂಸಾರದೋಷೋಽಸ್ಥೂಲಾದಿಲಕ್ಷಣಃ .
ಅದೃಶ್ಯತ್ವಾದಿಗುಣಕಃ ಪರಾಕೃತತಮೋಮಲಃ .. ೨೯..
("ಅದು" ಯಾವುದೆಂದರೆ) ಸಂಸಾರದ ಎಲ್ಲಾ ಕಲ್ಮಶಗಳಿಂದ ಮುಕ್ತವಾದ, "ದೊಡ್ಡದಲ್ಲ, ಸಣ್ಣದಲ್ಲ" ಇತ್ಯಾದಿ ಎಂದು ವ್ಯಾಖ್ಯಾನಿಸಲ್ಪಟ್ಟ, ಅಗ್ರಾಹ್ಯ ಇತ್ಯಾದಿ ಗುಣಗಳನ್ನು ಹೊಂದಿರುವ, ಅಜ್ಞಾನದಿಂದ ಸೃಷ್ಟಿಸಲ್ಪಟ್ಟ ಎಲ್ಲಾ ಕತ್ತಲೆಯನ್ನು ಮೀರಿದ್ದು.
ನಿರಸ್ತಾತಿಶಯಾನಂದಃ ಸತ್ಯಪ್ರಜ್ಞಾನವಿಗ್ರಹಃ .
ಸತ್ತಾಸ್ವಲಕ್ಷಣಃ ಪೂರ್ಣ ಪರಮಾತ್ಮೇತಿ ಗೀಯತೇ .. ೩೦..
ಬಾಹ್ಯ ಪ್ರಜ್ಞೆಯ ಶುದ್ಧ ಸಾಕಾರವಾದ, ತನಗಿಂತ ಹೆಚ್ಚಿನ ಆನಂದವನ್ನು ಹೊಂದಿರದ ಮತ್ತು ಅದರ ನಿರ್ದಿಷ್ಟ ವ್ಯಾಖ್ಯಾನಕ್ಕಾಗಿ 'ಅಸ್ತಿತ್ವ'ವನ್ನು ಹೊಂದಿರುವ ಸರ್ವವ್ಯಾಪಿ - ಇದು 'ಅದು' ಎಂಬ ಪದದಿಂದ ಸೂಚಿಸಲ್ಪಟ್ಟ ಅರ್ಥವಾಗಿದೆ; ಹಾಗೆಂದು, ಧರ್ಮಗ್ರಂಥಗಳು ಹಾಡುಗಳಲ್ಲಿ ಘೋಷಿಸುತ್ತವೆ.
ಸರ್ವಜ್ಞತ್ವಂ ಪರೇಶತ್ವಂ ತಥಾ ಸಂಪೂರ್ಣಶಕ್ತಿತಾ .
ವೇದೈಃ ಸಮರ್ಥ್ಯತೇ ಯಸ್ಯ ತದ್ಬ್ರಹ್ಮೇತ್ಯವಧಾರಯ .. ೩೧..
ವೇದಗಳಲ್ಲಿ ಸರ್ವಜ್ಞ, ಸರ್ವಶಕ್ತ ಮತ್ತು ಪರಮಾತ್ಮ ಎಂದು ಸಾಬೀತಾಗಿರುವುದೇ ಅನಂತ ಬ್ರಹ್ಮ... ಆ ಬ್ರಹ್ಮವನ್ನು ನೀನು ಧ್ಯಾನಿಸು.
ಯಜ್ಜ್ಞಾನಾತ್ಸರ್ವವಿಜ್ಞಾನಂ ಶ್ರುತಿಷು ಪ್ರತಿಪಾದಿತಂ .
ಮೃದಾದ್ಯನೇಕದೃಷ್ಟಾಂತೈಸ್ತದ್ಬ್ರಹ್ಮೇತ್ಯವಧಾರಯ .. ೩೨..
ಯಾವುದನ್ನು ತಿಳಿಯುವದರಿಂದ ಸರ್ವ ಜ್ಞಾನವೂ ಸಿಗುವದೆಂದು ವೇದಗಳಲ್ಲಿ ಮಣ್ಣು ಇತ್ಯಾದಿ ದೃಷ್ಟಾಂತಗಳಿಂದ ವಿವರಿಸಲಾಗಿದೆಯೋ ಅದೇ ಬ್ರಹ್ಮನೆಂದು ತಿಳಿದುಕೋ.
ಯದಾನಂತ್ಯಂ ಪ್ರತಿಜ್ಞಾಯ ಶ್ರುತಿಸ್ತತ್ಸಿದ್ಧಯೇ ಜಗೌ .
ತತ್ಕಾರ್ಯತ್ವಂ ಪ್ರಪಂಚಸ್ಯ ತದ್ಬ್ರಹ್ಮೇತ್ಯವಧಾರಯ .. ೩೩..
ಯಾವುದನ್ನು ವೇದಗಳು ಅಪರಿಮಿತವೆಂದು ಸಾಬೀತುಪಡಿಸಲು ಪ್ರಸ್ತಾಪಿಸುತ್ತವೆಯೋ ಮತ್ತು ಆ ಪ್ರತಿಪಾದನೆಯನ್ನು ಬೆಂಬಲಿಸಲು ವಿಶ್ವವನ್ನು ಅದರ ಮಾರ್ಪಾಡು ಎಂದು ಕರೆಯುತ್ತವೆಯೋ. ಆ "ಬ್ರಹ್ಮ"ನನ್ನು ನೀನು ದೃಢವಾಗಿ ಧ್ಯಾನಿಸಬೇಕು.
ವಿಜಿಜ್ಞಾಸ್ಯತಯಾ ಯಚ್ಚ ವೇದಾಂತೇಷು ಮುಮುಕ್ಷುಭಿಃ .
ಸಮರ್ಥ್ಯತೇಽತಿಯತ್ನೇನ ತದ್ಬ್ರಹ್ಮೇತ್ಯವಧಾರಯ .. ೩೪..
ಉಪನಿಷತ್ತುಗಳಲ್ಲಿ ಮೋಕ್ಷಾರ್ಥಿಗಳು (ಮುಮುಕ್ಷು) ಧ್ಯಾನಿಸುವ ವಸ್ತುವು ಯಾವುದೆಂದು ಅತಿ ಯತ್ನದಿಂದ ಸಮರ್ಥಿಸಲ್ಪಟ್ಟಿದೆಯೋ, ಆ ವಸ್ತುವೇ ಬ್ರಹ್ಮನೆಂದು ದೃಢ ಪಡಿಸಿಕೋ.
ಜೀವಾತ್ಮನಾ ಪ್ರವೇಶಶ್ಚ ನಿಯಂತೃತ್ವಂ ಚ ತಾನ್ ಪ್ರತಿ .
ಶ್ರೂಯತೇ ಯಸ್ಯ ವೇದೇಷು ತದ್ಬ್ರಹ್ಮೇತ್ಯವಧಾರಯ .. ೩೫..
ವೇದಗಳಲ್ಲಿ ಯಾವುದು 'ಪ್ರತಿಯೊಂದು ಜೀವಿಯನ್ನು ಅದರ ವೈಯಕ್ತಿಕ ಆತ್ಮ ಆಗಿ ಪ್ರವೇಶಿಸಿದೆಯೋ' ಎಂದು ಹೇಳಲಾಗಿದೆಯೋ ಮತ್ತು ಅದೇ ಮೂಲಗಳಲ್ಲಿ ಅವುಗಳ ನಿಯಂತ್ರಕವು ಎಂದು ಹೇಳಲಾಗಿದೆಯೋ - ಆ ಬ್ರಹ್ಮನ ಬಗ್ಗೆ ಖಚಿತಪಡಿಸಿಕೊ.
ಕರ್ಮಣಾಂ ಫಲದಾತೃತ್ವಂ ಯಸ್ಯೈವ ಶ್ರೂಯತೇ ಶ್ರುತೌ .
ಜೀವಾನಾಂ ಹೇತುಕರ್ತೃತ್ವಂ ತದ್ಬ್ರಹ್ಮೇತ್ಯವಧಾರಯ .. ೩೬..
ಉಪನಿಷತ್ತುಗಳಲ್ಲಿ ಹೇಳಿದಂತೆ "ಜನರ ಕ್ರಿಯೆಗಳಿಗೆ ಪ್ರತಿಫಲ ನೀಡುವ ಮತ್ತು ಜನರು ಏನು ಮಾಡಿದರೂ ಅದರ ಕಾರಣವಾಗುವ" ಜೀವಿಯೇ ಬ್ರಹ್ಮ ಎಂದು ಖಚಿತಪಡಿಸಿಕೊ.
ತತ್ತ್ವಂಪದಾರ್ಥೌ ನಿರ್ಣೀತೌ ವಾಕ್ಯಾರ್ಥಶ್ಚಿಂತ್ಯತೇಽಧುನಾ .
ತಾದಾತ್ಮ್ಯಮತ್ರ ವಾಕ್ಯಾರ್ಥಸ್ತಯೋರೇವ ಪದಾರ್ಥಯೋಃ .. ೩೭..
ನೀನು - ತ್ವಮ್ ಶಬ್ದದ ಅರ್ಥ ನಿರ್ಣಯಿಸಲಾಗಿದೆ. ತತ್ - ಅದು - ಈ ಶಬ್ದದ ಅರ್ಥ ಕೂಡ ನಿರ್ಣಯಿಸಲಾಗಿದೆ. ಈಗ 'ತತ್ವಮಸಿ' - ಅದೇ ನೀನು - ಈ ವಾಕ್ಯದ ಅರ್ಥ - ಈ ಎರಡು ಶಬ್ದಗಳ ಸಮಾನತೆಯನ್ನು ಈಗ ಚರ್ಚಿಸೋಣ.
ಸಂಸರ್ಗೋ ವಾ ವಿಶಿಷ್ಟೋ ವಾ ವಾಕ್ಯಾರ್ಥೋ ನಾತ್ರ ಸಮ್ಮತಃ .
ಅಖಂಡೈಕರಸತ್ವೇನ ವಾಕ್ಯಾರ್ಥೋ ವಿದುಷಾಂ ಮತಃ .. ೩೮..
ವಾಕ್ಯದ ಅರ್ಥ ('ತತ್ವಮಸಿ' ಎಂಬ ವಾಕ್ಯ) ಈ ಎರಡು ಶಬ್ದಗಳ 'ಅರ್ಥದ ಜೋಡಣೆ' ಅಥವಾ 'ಗುಣಲಕ್ಷಣ' ರೀತಿಯಿಂದ ಸಿಗುವದಿಲ್ಲ. ಜ್ಞಾನಿಗಳ ಪ್ರಕಾರ " ಜೀವಿ ಕೇವಲ ಪರಮಾನಂದ ಸ್ವರೂಪ ಮಾತ್ರ" ಇದು ಮಾತ್ರ ವಾಕ್ಯದ ಅರ್ಥ.
(ಈ ಹೂವು ಹಳದಿ - ಈ ವಾಕ್ಯದಲ್ಲಿ ಹಳದಿ ಎಂಬುದು ಹೂವಿನ ಗುಣಲಕ್ಷಣ)
ಪ್ರತ್ಯಗ್ಬೋಧೋ ಯ ಆಭಾತಿ ಸೋಽದ್ವಯಾನಂದಲಕ್ಷಣಃ .
ಅದ್ವಯಾನಂದರೂಪಶ್ಚ ಪ್ರತ್ಯಗ್ಬೋಧೈಕಲಕ್ಷಣಃ .. ೩೯..
ಯಾವುದು ವೈಯಕ್ತಿಕ ಪ್ರಜ್ಞೆಯಂತೆ ತೋರುವದೋ, ಅದು ನಿಜವಾಗಿ ಅದ್ವಯ ಸಂಪೂರ್ಣ ಆನಂದ. ಸಂಪೂರ್ಣ ಆನಂದವೇ ಬೇರೆ ಏನೂ ಅಲ್ಲ, ಅದು ಒಳಗಿನ ವ್ಯಕ್ತಿಗತ ಸ್ವಯಂ ಪ್ರಜ್ಞೆ.
ಇತ್ಥಮನ್ಯೋನ್ಯತಾದಾತ್ಮ್ಯಪ್ರತಿಪತ್ತಿರ್ಯದಾ ಭವೇತ್ .
ಅಬ್ರಹ್ಮತ್ವಂ ತ್ವಮರ್ಥಸ್ಯ ವ್ಯಾವರ್ತೇತ ತದೈವ ಹಿ .. ೪೦..
ಮೇಲೆ ವಿವರಿಸಿದಂತೆ, 'ನೀನು' ಮತ್ತು 'ಅದು' (ತತ್, ತ್ವಮ್) ಎಂಬ ಎರಡು ಪದಗಳ ನಡುವಿನ ಪರಸ್ಪರ ಸಮಾನತೆಯನ್ನು ಗ್ರಹಿಸಿದಾಗ, 'ನೀನು' ಎಂಬ ಪದದಿಂದ ಮನವರಿಕೆಯಾಗುವ 'ನಾನು ಬ್ರಹ್ಮನಲ್ಲ' ಎಂಬ ಕಲ್ಪನೆಯು ತಕ್ಷಣವೇ ಕೊನೆಗೊಳ್ಳುತ್ತದೆ.
ತದರ್ಥಸ್ಯ ಪಾರೋಕ್ಷ್ಯಂ ಯದ್ಯೇವಂ ಕಿಂ ತತಃ ಶ್ರುಣು .
ಪೂರ್ಣಾನಂದೈಕರೂಪೇಣ ಪ್ರತ್ಯಗ್ಬೋಧೋವತಿಷ್ಠತೇ .. ೪೧..
'ಅದು' ಎಂಬ ಪದದ ಆಳವಾದ ಅರ್ಥ 'ಅದ್ವಿತೀಯ ಪರಮಾನಂದ', ಮತ್ತು 'ನೀನು' ಎಂಬುದರ ಅರ್ಥ 'ಸಾಕ್ಷಿ ಪ್ರಜ್ಞೆ' ಎಂದು ಆಗಿದ್ದರೆ, ನಂತರ ಏನು? ಕೇಳು: ಎಲ್ಲಾ ಆಲೋಚನೆಗಳನ್ನು ಬೆಳಗಿಸುವ ಆಂತರಿಕ ಸ್ವಯಂ ಪ್ರಜ್ಞೆ, ಒಂದು ಅದ್ವಿತೀಯ ಸಂಪೂರ್ಣ, ಪರಮಾನಂದದ ರೂಪವಾಗಿ ಉಳಿಯುತ್ತದೆ.
ತತ್ತ್ವಮಸ್ಯಾದಿವಾಕ್ಯಂ ಚ ತಾದಾತ್ಮ್ಯಪ್ರತಿಪಾದನೇ .
ಲಕ್ಷ್ಯೌ ತತ್ತ್ವಂಪದಾರ್ಥೌ ದ್ವಾವುಪಾದಾಯ ಪ್ರವರ್ತತೇ .. ೪೨..
'ತತ್ವಮಸಿ' ಎಂಬಂತಹ ಮಹಾನ್ ಹೇಳಿಕೆಗಳು 'ನೀನು' ಮತ್ತು 'ಅದು' ಎಂಬ ಎರಡು ಪದಗಳ ಅರ್ಥವನ್ನು ಅವುಗಳ ಸೂಚ್ಯ ಅರ್ಥವನ್ನು ಆಶ್ರಯಿಸುವ ಮೂಲಕ ಪ್ರತಿಪಾದಿಸುತ್ತವೆ.
ಹಿತ್ವಾ ದ್ವೌ ಶಬಲೌ ವಾಚ್ಯೌ ವಾಕ್ಯಂ ವಾಕ್ಯಾರ್ಥಬೋಧನೇ .
ಯಥಾ ಪ್ರವರ್ತತೇಽಸ್ಮಾಭಿಸ್ತಥಾ ವ್ಯಾಖ್ಯಾತಮಾದರಾತ್ .. ೪೩..
ತತ್ವಮಸಿ ವಾಕ್ಯವು ನೇರವಾಗಿ ವ್ಯಕ್ತಪಡಿಸಲಾದ ಎರಡು ಅಕ್ಷರಶಃ ಅರ್ಥಗಳನ್ನು ಹೇಗೆ ತಿರಸ್ಕರಿಸುತ್ತದೆ ಮತ್ತು ಅದು ನಿಜವಾಗಿಯೂ ಏನನ್ನು ಸೂಚಿಸುತ್ತದೆ ಎಂಬುದನ್ನು ನಾವು ಬಹಳ ಎಚ್ಚರಿಕೆಯಿಂದ ವಿವರಿಸಿದ್ದೇವೆ.
ಆಲಂಬನತಯಾಭಾತಿ ಯೋಽಸ್ಮತ್ಪ್ರತ್ಯಯಶಬ್ದಯೋಃ .
ಅಂತಃಕರಣಸಂಭಿನ್ನಬೋಧಃ ಸ ತ್ವಂಪದಾಭಿಧಃ .. ೪೪..
ಕಲ್ಪನೆಯ ವಸ್ತುವಾಗಿ ಮತ್ತು 'ನಾನು' ಎಂಬ ಪದವಾಗಿ ಹೊಳೆಯುವುದು ಆಂತರಿಕ ಸಾಧನಗಳಲ್ಲಿ ವ್ಯಕ್ತಪಡಿಸುವ ಪ್ರಜ್ಞೆ. ಇದು 'ನೀನು' (ತ್ವಮ್) ನ ನೇರ ಪದ-ಅರ್ಥ.
ಮಾಯೋಪಾಧಿರ್ಜಗದ್ಯೋನಿಃ ಸರ್ವಜ್ಞತ್ವಾದಿಲಕ್ಷಣಃ .
ಪರೋಕ್ಷ್ಯಶಬಲಃ ಸತ್ಯಾದ್ಯಾತ್ಮಕಸ್ತತ್ಪದಾಭಿಧಃ .. ೪೫..
ಯಾವುದು ಮಾಯೆಯ ಮೂಲಕ ವ್ಯಕ್ತವಾಗುವ ಪ್ರಜ್ಞೆಯೋ, ಯಾವುದು ನಂತರ 'ವಿಶ್ವದ ಕಾರಣ'ವಾಗುವದೋ, ಯಾವುದನ್ನು ಸರ್ವವ್ಯಾಪಿ ಎಂದು ವಿವರಿಸಲಾಗುವದೋ, ಯಾವುದು ಪರೋಕ್ಷವಾಗಿ ಮಾತ್ರ ತಿಳಿಯಬಹುದಾದದ್ದೋ (ಧ್ಯಾನದ ಮೂಲಕ); ಮತ್ತು ಯಾವುದು ಅಸ್ತಿತ್ವದ ಸ್ವರೂಪವನ್ನು ಹೊಂದಿರುವುದೋ - ಆ ಈಶ್ವರ ಎಂಬುದು 'ಅದು' ಎಂಬ ಪದದ ಅರ್ಥ.
ಪ್ರತ್ಯಕ್ಪರೋಕ್ಷತೈಕಸ್ಯ ಸದ್ವಿತೀಯತ್ವಪೂರ್ಣತಾ .
ವಿರುಧ್ಯತೇ ಯತಸ್ತಸ್ಮಾಲ್ಲಕ್ಷಣಾ ಸಂಪ್ರವರ್ತತೇ .. ೪೬..
ಪದಗಳ ಅಕ್ಷರಶಃ ಅರ್ಥದ ಆಧಾರದ ಮೇಲೆ ನಾವು 'ಅದು' ಮತ್ತು 'ನೀನು' ಎಂಬ ಪದಗಳ ಸಮಾನತೆಯನ್ನು ಹುಡುಕಿದರೆ, ಒಂದೇ ವಸ್ತುವಿಗೆ ನಾವು ಪರಸ್ಪರ ವಿರುದ್ಧ ಸ್ವಭಾವವನ್ನು ಆರೋಪಿಸಬೇಕು; ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಿಳಿಯುವ ಗುಣ - ಮತ್ತು ಒಂದೇ ಅಂಶಕ್ಕೆ 'ದ್ವಂದ್ವತೆಯ ಅಸ್ತಿತ್ವ' ಮತ್ತು 'ಸಂಪೂರ್ಣ ಏಕತೆ'ಯ ಗುಣಗಳನ್ನು ಸಹ ಒತ್ತಾಯಿಸಬೇಕು. ಅಂತಹ ವಿರೋಧಾಭಾಸದ ಅಸಾಧ್ಯ ಆದ್ದರಿಂದ ಸೂಚ್ಯ-ಅರ್ಥ, 'ಸೂಚ್ಯ ವಿವರಣೆಯನ್ನು' ಒಪ್ಪಿಕೊಳ್ಳಬೇಕು.
ಮಾನಾಂತರವಿರೋಧೇ ತು ಮುಖ್ಯಾರ್ಥಸ್ಯ ಪರಿಗ್ರಹೇ .
ಮುಖ್ಯಾರ್ಥೇನಾವಿನಾಭೂತೇ ಪ್ರತೀತಿರ್ಲಕ್ಷಣೋಚ್ಯತೇ .. ೪೭..
ಅದು ಇತರ ಪುರಾವೆಗಳೊಂದಿಗೆ ಘರ್ಷಿಸುವುದರಿಂದ, ನೇರ ಪದದ ಅರ್ಥ ಸ್ವೀಕಾರಾರ್ಹವಲ್ಲ; ಇತರ ಪುರಾವೆಗಳೊಂದಿಗೆ ಸ್ಥಿರವಾಗಿರುವ ಅರ್ಥವನ್ನು, ಅಂದರೆ ಸೂಚಿತ ಅರ್ಥವನ್ನು ಒಪ್ಪಿಕೊಳ್ಳಬೇಕು.
ತತ್ತ್ವಮಸ್ಯಾದಿವಾಕ್ಯೇಷು ಲಕ್ಷಣಾ ಭಾಗಲಕ್ಷಣಾ .
ಸೋಽಯಮಿತ್ಯಾದಿವಾಕ್ಯಸ್ಥಪದಯೋರಿವ ನಾಪರಾ .. ೪೮..
'ತತ್ವಮಸಿ' ಇತ್ಯಾದಿ ಹೇಳಿಕೆಗಳಲ್ಲಿ, 'ಸೋ ಅಯಮ್' ಇತ್ಯಾದಿ ವಾಕ್ಯಗಳಂತೆಯೇ ಭಾಗ ಲಕ್ಷಣ ವಿಧಾನವನ್ನು ಬಳಸಬೇಕಾಗುತ್ತದೆ; . ಬೇರೆ ಯಾವುದೇ ವಿಧಾನವನ್ನು ಅನ್ವಯಿಸಲಾಗುವುದಿಲ್ಲ.
ಅಹಂ ಬ್ರಹ್ಮೇತಿವಾಕ್ಯಾರ್ಥಬೋಧೋ ಯಾವದ್ದೃಢೀಭವೇತ್ .
ಶಮಾದಿಸಹಿತಸ್ತಾವದಭ್ಯಸೇಚ್ಛ್ರವಣಾದಿಕಂ .. ೪೯..
'ಅಹಂ ಬ್ರಹ್ಮೇತಿ' ಎಂಬ ನೇರ ವೈಯಕ್ತಿಕ ಅನುಭವವನ್ನು ಪಡೆಯುವವರೆಗೆ, ನಾವು ಸ್ವಯಂ ನಿಯಂತ್ರಣ ಇತ್ಯಾದಿಗಳ ಮೌಲ್ಯಗಳನ್ನು ಜೀವಿಸಬೇಕು ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಅಥವಾ ಶಾಸ್ತ್ರಗಳನ್ನು ಓದುವುದು ಮತ್ತು ಆ ವಿಚಾರಗಳ ಕುರಿತು ದೈನಂದಿನ ಚಿಂತನೆ ಮತ್ತು ಧ್ಯಾನವನ್ನು ಅಭ್ಯಾಸ ಮಾಡಬೇಕು.
ಶ್ರುತ್ಯಾಚಾರ್ಯಪ್ರಸಾದೇನ ದೃಢೋ ಬೋಧೋ ಯದಾ ಭವೇತ್ .
ನಿರಸ್ತಾಶೇಷಸಂಸಾರನಿದಾನಃ ಪುರುಷಸ್ತದಾ .. ೫೦..
ಒಬ್ಬ ಆಧ್ಯಾತ್ಮಿಕ ಗುರುವಿನ ಅನುಗ್ರಹದಿಂದ, ಒಬ್ಬ ಅನ್ವೇಷಕನು ಶಾಸ್ತ್ರಗಳಲ್ಲಿ ವಿವರಿಸಿದಂತೆ ಪರಮಾತ್ಮನ ಸ್ಪಷ್ಟ ಮತ್ತು ನೇರ ಅನುಭವವನ್ನು ಪಡೆದಾಗ, ಅವನು, "ಸಾಕ್ಷಾತ್ಕಾರ" ಗೊಂಡವನು, ಎಲ್ಲಾ 'ಅಜ್ಞಾನ'ದಿಂದ ಮುಕ್ತನಾಗುತ್ತಾನೆ, ಅದು ಈ ಬಹುತ್ವದ ಪ್ರಪಂಚದ ಸಂಪೂರ್ಣ ಅನುಭವಕ್ಕೆ ಅಡಿಪಾಯವಾಗಿದೆ.
ವಿಶೀರ್ಣಕಾರ್ಯಕರಣೋ ಭೂತಸೂಕ್ಷ್ಮೈರನಾವೃತಃ .
ವಿಮುಕ್ತಕರ್ಮನಿಗಡಃ ಸದ್ಯ ಏವ ವಿಮುಚ್ಯತೇ .. ೫೧..
ತನ್ನ ಸ್ಥೂಲ ಮತ್ತು ಸೂಕ್ಷ್ಮ ದೇಹಗಳಿಂದ ಬದ್ಧನಾಗದೇ, ಸ್ಥೂಲ ಮತ್ತು ಸೂಕ್ಷ್ಮ ವಸ್ತುಗಳ ಹಿಡಿತದಿಂದ ಮುಕ್ತನಾಗಿ, ಕರ್ಮಗಳ ಮೋಡಿಯಿಂದ ಮುಕ್ತನಾಗಿ, ಅಂತಹ ಮನುಷ್ಯನು ತಕ್ಷಣವೇ ಮುಕ್ತನಾಗುತ್ತಾನೆ.
ಪ್ರಾರಬ್ಧಕರ್ಮವೇಗೇನ ಜೀವನ್ಮುಕ್ತೋ ಯದಾ ಭವೇತ್ .
ಕಿಂಚಿತ್ಕಾಲಮನಾರಬ್ಧಕರ್ಮಬಂಧಸ್ಯ ಸಂಕ್ಷಯೇ .. ೫೨..
ಪ್ರಾರಬ್ಧವು ಫಲ ನೀಡಲು ಪ್ರಾರಂಭಿಸಿರುವ ಕ್ರಿಯೆಗಳ ಬಲವಾದ ಶಕ್ತಿಯಿಂದಾಗಿ, ಜೀವನ್ಮುಕ್ತನು ಅವುಗಳನ್ನು (ಕರ್ಮಗಳನ್ನು) ಖಾಲಿ ಮಾಡಲು ಸ್ವಲ್ಪ ಸಮಯದವರೆಗೆ ಉಳಿಯುತ್ತಾನೆ
ನಿರಸ್ತಾತಿಶಯಾನಂದಂ ವೈಷ್ಣವಂ ಪರಮಂ ಪದಂ .
ಪುನರಾವೃತ್ತಿರಹಿತಂ ಕೈವಲ್ಯಂ ಪ್ರತಿಪದ್ಯತೇ .. ೫೩..
ಜೀವನ್ಮುಕ್ತನು ಎಂದಿಗೂ ಮುಗಿಯದ ಅಪಾರ ಆನಂದದ, ಅಲ್ಲಿಂದ ಹಿಂತಿರುಗುವಿಕೆ ಇಲ್ಲದಿರುವ, ವಿಷ್ಣುವಿನ ಪರಮ ವಾಸಸ್ಥಾನ ಎಂದು ಕರೆಯಲಾಗುವ ಸಂಪೂರ್ಣ ಏಕತೆಯ ಸ್ಥಿತಿಯನ್ನು ಪಡೆಯುತ್ತಾನೆ.
.. ಇತಿ ಪರಮಹಂಸಪರಿವ್ರಾಜಕಾಚಾರ್ಯಶ್ರೀಮಚ್ಛಂಕರಾಚಾರ್ಯವಿರಚಿತಾ
ವಾಕ್ಯವೃತ್ತಿಃ ಸಮಾಪ್ತ ..
Comments
Post a Comment