Posts

Showing posts from November, 2025

ಭಗವದ್ಗೀತಾ ಆರತಿ

ನಮ್ಮ ಧರ್ಮದ ಯಾವುದಾದರೂ ಕೃತಿ ಅತಿ ಪ್ರಸಿದ್ಧವಾಗಿದೆ ಎಂದರೆ ಅದು ಭಗವದ್ಗೀತೆ. ಬಹಳ ಕ್ಲಿಷ್ಟವಲ್ಲದ ಭಾಷೆಯಲ್ಲಿ ಜನ-ಸಾಮಾನ್ಯರೂ ಅರಿಯಬಲ್ಲಾದ ತತ್ವಜ್ಞಾನವನ್ನು ತಿಳಿಸಿಹೇಳಿ ಮನುಜರ ಮನಸ್ಸನ್ನು ಪ್ರಶಾಂತಗೊಳಿಸುವ ಕೃತಿ ಇದು. ಆದರೆ ಒಂದು ಸಮಸ್ಯೆಯೆಂದರೆ ಭಗವದ್ಗೀತೆ ಇರುವದು ಸಂಸ್ಖೃತದಲ್ಲಿ - ಅದೂ ಪದ್ಯ ರೂಪದಲ್ಲಿ - ಸ್ವಲ್ಪ ಕಷ್ಟ. ನಮ್ಮ ತಾಯಿ ಅವರ ಸೋದರತ್ತೆಯಿಂದ ಕಲಿತ ಗೀತೆಯ ಕನ್ನಡಾನುವಾದ - ಸಂಕ್ಷಿಪ್ತ ಅನುವಾದ - ಅದೂ ಆರತಿಯ ಪದ್ಯ ರೂಪದಲ್ಲಿರುವ ಅನುವಾದ ಮೊನ್ನೆ ಕೇಳಿದೆ. ಬಹಳ ಇಷ್ಟವಾಯಿತು. ನಿಮಗೆ ಹೇಗೆನಿಸುತ್ತದೆ ನೋಡಿ. ---------------------------------------------------------------------  ಧನ್ಯನಾದೆನು ಕೇಳಿ ನಿನ್ನಿಂದ |  ಮನದೊಳಗೆ ನಿಂದ| ಮೋಹವಡಗಿತು ಹರಿಯೆ ಭರದಿಂದ|| ಜ್ಞಾನದಿಂ ಭೂತಗಳ ಸೃಷ್ಟಿ | ಪ್ರಳಯ ನಿನ್ನಿಂದೆಂಬುದರಿತೆನು| ವಿಶ್ವರೂಪವ ನಿನ್ನದನು| ತೋರೆಂದ ಪಾರ್ಥಗೆ ತೋರಿದಾತನಿ||  ಗಾರತಿಯ ನಾನೆತ್ತಿ ಬೇಡುವೆನು| ಶ್ರೀ ಹರಿಯೆ ವರವನು| ನೀಡು ನೀ ನಿನಗಿಷ್ಟವಾದುದನು||೧||   ನೋಡಲಾಗದು ನರನೆ ನಿನ್ನಿಂದ| ಈ ಕಣ್ಣಿನಿಂದ| ನನ್ನ ರೂಪವ ನಿನ್ನ ಮುನ್ನಿಂದ|| ದಿವ್ಯ ನೇತ್ರವ ಕೊಡುವೆ ನೀ| ನೋಡೆನ್ನನೆಂದವಗಿತ್ತು ತೋರುವ| ವಿಶ್ವರೂಪವ ಧರಿಸಿ ನಾನಾ ರೂಪದಿಂ ಮುನ್ನಿಂದ ಮಾಧವ|| ಗಾರತಿಯ ನಾನೆತ್ತಿ ಬೇಡುವೆನು||೨||   ನೋಡು ನೀನೆಂದೆನುತ ಗೋವಿಂದ | ಬಹುರೂಪದಿಂದ...

ಮುಂಡಕ ಉಪನಿಷತ್ತು

Image
  ಪರಿಚಯ  ಮುಖ್ಯ ಉಪನಿಷತ್ತುಗಳಲ್ಲಿ ಒಂದಾದ ಮುಂಡಕ ಉಪನಿಷತ್ತು ಅಥರ್ವವೇದದಲ್ಲಿ ಕಂಡುಬರುತ್ತದೆ. ಕಾವ್ಯ ರೂಪದಲ್ಲಿರುವ ಪ್ರಸಿದ್ಧವಾದ ಇದು ಅತಿ ಹೆಚ್ಚು ಅನುವಾದಗೊಂಡಿರುವ ಉಪನಿಷತ್ತಾಗಿದೆ.   ಇದು ಋಷಿ ಅಂಗೀರಸ ಹಾಗೂ ಗೃಹಸ್ಥನಾದ ಶೌನಕರ ನಡುವಿನ ಸಂವಾದದ ರೂಪದಲ್ಲಿದೆ.    ಇದರಲ್ಲಿ ಮೂರು ಮುಂಡಕಗಳಿವೆ (ವಿಭಾಗಗಳು). ಮೊದಲನೆಯ ಮುಂಡಕ ಶ್ರೇಷ್ಠ ಹಾಗೂ ಕನಿಷ್ಠ ವಿದ್ಯೆಗಳನ್ನು ವಿವರಿಸುತ್ತದೆ - ಹಾಗೂ ಅಪರ ವಿದ್ಯೆಯ ವ್ಯರ್ಥತೆಯನ್ನು ಮಂಡಿಸುತ್ತದೆ. ಎರಡನೆಯ ಮುಂಡಕ ಆತ್ಮ ಹಾಗೂ ಬ್ರಹ್ಮ ನ ಸ್ವರೂಪವನ್ನು, ಬ್ರಹ್ಮ ಹಾಗೂ ಬಾಹ್ಯ ಪ್ರಪಂಚದ ಸಂಬಂಧವನ್ನು ಹಾಗೂ ಬ್ರಹ್ಮ ಜ್ಞಾನವನ್ನು ಪಡೆಯುವ ವಿಧಾನವನ್ನು ವಿವರಿಸುತ್ತದೆ. ಮೂರನೆಯ ಮುಂಡಕ ಈ ವಿವರಣೆಯನ್ನು ಮುಂದುವರಿಸುತ್ತದೆ.   ಸತ್ಯಮೇವ ಜಯತೇ - ಸತ್ಯವೇ ಜಯಿಸುತ್ತದೆ - ಈ ನುಡಿ ಮುಂಡಕ ಉಪನಿಷತ್ತಿನ ಭಾಗವಾಗಿದೆ. ನಮ್ಮ ದೇಶದ ರಾಷ್ಟ್ರೀಯ ಲಾಂಛನದಲ್ಲಿ ಈ ನುಡಿಯು ಕಂಡು ಬರುತ್ತದೆ.    ಕರ್ತೃ : ಬೇರೆಲ್ಲ ವೇದ ಹಾಗೂ ಉಪನಿಷತ್ತುಗಳಂತೆ ಮುಂಡಕ ಉಪನಿಷತ್ತನ್ನು ರಚನೆ ಮಾಡಿದವರು ಯಾರೆಂಬುದು ನಮಗೆ ತಿಳಿದಿಲ್ಲ . ಆದರೆ ಅದರಲ್ಲೇ ಹೇಳಿರುವ ಪ್ರಕಾರ ಬ್ರಹ್ಮನು ಈ ಕೃತಿಯನ್ನು ತನ್ನ ಹಿರಿಯ ಮಗ ಅಥರ್ವನಿಗೆ, ಅಥರ್ವನು ಅಂಗೀರನಿಗೆ, ಅಂಗೀರನು ಸತ್ಯವಾಹನಿಗೆ, ಸತ್ಯವಾಹನು ಆಂಗೀರಸನಿಗೆ ಹೇಳಿಕೊಟ್ಟನು.    ಶಂಕರಾಚಾರ್ಯರು ಈ ಉಪನಿಷತ್ತ...