ವಿಶ್ವರೂಪದರ್ಶನ ಯೋಗ - ಗೀತಾ ೧೧ನೇ ಅಧ್ಯಾಯ
ಅಥೈಕಾದಶೋಽಧ್ಯಾಯಃ . ವಿಶ್ವರೂಪದರ್ಶನಯೋಗಃ
ಅರ್ಜುನ ಉವಾಚ .
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಂ .
ಯತ್ತ್ವಯೋಕ್ತಂ ವಚಸ್ತೇನ ಮೋಹೋಽಯಂ ವಿಗತೋ ಮಮ .. ೧೧-೧..
ಮತ್+ಅನುಗ್ರಹಾಯ = ನನ್ನ ಅನುಗ್ರಹಕ್ಕಾಗಿ ಗುಹ್ಯಮ್=ರಹಸ್ಯಮಯವಾದ ಅಧ್ಯಾತ್ಮ ಸಂಜ್ಞಿತಮ್=ಅಧ್ಯಾತ್ಮವೆಂಬ ಹೆಸರುಳ್ಳ ಯತ್=ಯಾವುದು ತ್ವಯಾ=ನಿನ್ನಿಂದ ಉಕ್ತಂ=ಹೇಳಿದ ವಚಃ=ಮಾತು ತೇನ=ಅದರಿಂದ ಮೋಹ+ಅಯಂ=ಈ ಮೋಹ ವಿಗತ=ಮಾಯವಾಯಿತು ಮಮ=ನನ್ನ
ನನ್ನ ಮೇಲೆ ಅನುಗ್ರಹದಿಂದ ನೀನು ಯಾವ ಅಧ್ಯಾತ್ಮದ ಮಾತನ್ನು ಹೇಳಿದೆಯೋ ಅದರಿಂದ ನನ್ನ ಈ ಮೋಹವು ನಾಶವಾಯಿತು.
ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ .
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಂ .. ೧೧-೨..
ಭವ=ಸೃಷ್ಟಿ ಅಪ್ಯಯ=ವಿನಾಶ ಹಿ=ನಿಜವಾಗಿ ಭೂತಾನಾಂ=ಜೀವಿಗಳ ಶ್ರುತೌ=ಕೇಳಲ್ಪಟ್ಟ ವಿಸ್ತರಶೋ=ವಿಸ್ತಾರವಾಗಿ ಮಯಾ=ನನ್ನಿಂದ ತ್ವತ್ತಃ=ನಿನ್ನ ಕಮಲಪತ್ರಾಕ್ಷ=ಕಮಲದ ಎಲೆಯಂತಹ ಕಣ್ಣುಳ್ಳವನು - ಕೃಷ್ಣ ಮಾಹಾತ್ಮ್ಯಂ=ಮಹಾತ್ಮೆಯನ್ನು ಅಪಿ=ಸಹ ಚ=ಹಾಗೂ ಅವ್ಯಯಂ=ಅವ್ಯಯವಾದ
ಹೇ ಕಮಲಪತ್ರಾಕ್ಷನೇ, ಜೀವಿಗಳ ಉತ್ಪತ್ತಿ ಹಾಗೂ ಲಯಗಳ ಬಗ್ಗೆ ಹಾಗೂ ನಿನ್ನ ಮಹಾತ್ಮೆಯನ್ನು ಸಹ ವಿಸ್ತಾರವಾಗಿ ನಾನು ಕೇಳಿದೆನು.
ಏವಮೇತದ್ಯಥಾತ್ಥ ತ್ವಮಾತ್ಮಾನಂ ಪರಮೇಶ್ವರ .
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ .. ೧೧-೩..
ಏವಂ=ಹೀಗೆ ಏತತ್=ಇದು ಯಥಾ=ಹೇಗೆ ಆತ್ಥ=ನೀನು ಹೇಳಿದೆ ತ್ವಮ್=ನೀನು ಆತ್ಮಾನಂ=ನೀನೇ ದ್ರಷ್ಟುಮ್=ನೋಡಲು ಇಚ್ಛಾಮಿ=ಇಷ್ಟ ಪಡುತ್ತೇನೆ ತೇ=ನಿನ್ನ ಐಶ್ವರ ರೂಪಂ=ಐಶ್ವರ ರೂಪವನ್ನು, ವಿಶ್ವರೂಪವನ್ನು
ನೀನು ಹೀಗೆ ಹೇಳಿದ್ದು ಸರಿಯೇ ಇದೆ. (ಆದರೂ) ನಿನ್ನ ವಿಶ್ವರೂಪವನ್ನು ನೋಡಲು ನಾನು ಇಷ್ಟಪಡುತ್ತೇನೆ, ಹೇ ಪುರುಷೋತ್ತಮನೇ.
ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ .
ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಂ .. ೧೧-೪..
ಮನ್ಯಸೇ ಯದಿ=ತಿಳಿಯುವದಾದರೆ ತತ್ ಶಕ್ಯಂ=ಅದು ಸಾಧ್ಯ ಮಯಾ=ನನ್ನಿಂದ ದ್ರಷ್ಟುಮ್=ನೋಡಲು ಪ್ರಭೋ=ಹೇ ಪ್ರಭುವೇ ತತೋ=ಅದನ್ನು ಮೇ=ನನಗೆ ತ್ವಂ=ನೀನು ದರ್ಶಯಾತ್ಮಾನಂ=ನನಗೆ ತೋರಿಸು ಅವ್ಯಯಂ=ಅವ್ಯಯವನ್ನು
ನನ್ನಿಂದ ನೋಡಲು ಸಾಧ್ಯ ಎಂದು ನೀನು ತಿಳಿಯುವೆಯಾದರೆ ನಿನ್ನ ಅಕ್ಷರವಾದ ರೂಪವನ್ನು ನನಗೆ ತೋರಿಸು, ಹೇ ಪ್ರಭು, ಹೇ ಯೋಗೇಶ್ವರ.
ಶ್ರೀಭಗವಾನುವಾಚ .
ಪಶ್ಯ ಮೇ ಪಾರ್ಥ ರೂಪಾಣಿ ಶತಶೋಽಥ ಸಹಸ್ರಶಃ .
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ .. ೧೧-೫..
ಪಶ್ಯ=ನೋಡು ಮೇ=ನನ್ನನ್ನು ಪಾರ್ಥ=ಅರ್ಜುನ ರೂಪಾಣಿ=ರೂಪಗಳನ್ನು ಶತಶ:=ನೂರಾರು ಅಥ=ಹಾಗೆಯೇ ಸಹಸ್ರಶಃ=ಸಾವಿರಾರು ನಾನಾವಿಧಾನಿ=ನಾನಾ ವಿಧದ ದಿವ್ಯಾನಿ=ದಿವ್ಯವಾದ ನಾನಾ ವರ್ಣಾಕೃತೀನಿ=ನಾನಾ ಬಣ್ಣ ಹಾಗೂ ಆಕೃತಿಗಳ ಚ=ಹಾಗೂ
ಹೇ ಪಾರ್ಥ, ನನ್ನ ನೂರಾರು ಸಾವಿರಾರು ದಿವ್ಯವಾದ ಬೇರೆಬೇರೆ ವಿಧದ, ಬೇರೆಬೇರೆ ಬಣ್ಣ-ರೂಪಗಳ ರೂಪಗಳನ್ನು ನೋಡು.
ಪಶ್ಯಾದಿತ್ಯಾನ್ವಸೂನ್ರುದ್ರಾನಶ್ವಿನೌ ಮರುತಸ್ತಥಾ .
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ .. ೧೧-೬..
ಪಶ್ಯ=ನೋಡು ಆದಿತ್ಯಾನ್=ಆದಿತ್ಯರನ್ನು ವಸೂನ್=ವಸುಗಳನ್ನು ರುದ್ರಾನ್=ರುದ್ರರನ್ನು ಅಶ್ವಿನೌ=ಅಶ್ವಿನಿ ದೇವತೆಗಳನ್ನು ಮರತೌ=ಮರುತರನ್ನು ತಥಾ=ಹಾಗೇ ಬಹೂನ್=ಬಹಳ ಅದೃಷ್ಟಪೂರ್ವಾಣಿ=ಮೊದಲು ನೋಡಿರದ ಪಶ್ಯ=ನೋಡು ಆಶ್ಚರ್ಯಾಣಿ=ಆಶ್ಚರ್ಯಕರವಾದ ರೂಪಗಳನ್ನು ಭಾರತ=ಅರ್ಜುನ
ಹೇ ಭಾರತನೇ, ಆದಿತ್ಯರನ್ನು, ವಸುಗಳನ್ನು, ರುದ್ರರನ್ನು, ಅಶ್ವಿನಿ ದೇವತೆಗಳನ್ನು, ಮರುತರನ್ನು ಹಾಗೂ ಹಿಂದೆ ಯಾರೂ ನೋಡಿರದ ಆಶ್ಚರ್ಯಗಳನ್ನು ನೋಡು.
ಇಹೈಕಸ್ಥಂ ಜಗತ್ಕೃತ್ಸ್ನಂ ಪಶ್ಯಾದ್ಯ ಸಚರಾಚರಂ .
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ .. ೧೧-೭..
ಇಹ=ಇಲ್ಲಿ ಏಕಸ್ಥಂ=ಒಂದು ಕಡೆಯಲ್ಲಿ ಜಗತ್=ಜಗ ಕೃತ್ಸ್ನಂ=ಸಂಪೂರ್ಣವಾಗಿ ಪಶ್ಯ=ನೋಡು ಅದ್ಯ=ಈಗ ಸಚರಾಚರಂ=ಚರಾಚರವಾದ ಮಮ=ನನ್ನ ದೇಹೇ=ದೇಹದಲ್ಲಿ ಗುಡಾಕೇಶ=ಅರ್ಜುನ ಯತ್+ಚ+ಅನ್ಯತ್=ಯಾವಯಾವುದನ್ನು ದ್ರಷ್ಟುಮ್=ನೋಡಲು ಇಚ್ಛಸಿ=ನೋಡಲು ಇಷ್ಟಪಡುತ್ತೀಯ
ಹೇ ಗುಡಾಕೇಶನೇ, ಇಲ್ಲಿ ಸಂಪೂರ್ಣವಾಗಿ ಎಲ್ಲ ಸಚರಾಚರಜೀವಿಗಳು ಒಂದು ಕಡೆಯಲ್ಲಿ ನನ್ನ ದೇಹದಲ್ಲಿ ನೋಡು. ಹಾಗೂ ಬೇರೆ ಯಾವುದನ್ನು ನೋಡಲು ಇಚ್ಛಿಸತ್ತೀಯೋ (ಅದನ್ನೂ ಸಹ ನೋಡು).
ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ .
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಂ .. ೧೧-೮..
ನ=ಅಲ್ಲ ತು=ಆದರೆ ಮಾಂ=ನನ್ನನ್ನು ಶಕ್ಯಸೇ=ಶಕ್ಯನಾಗುತ್ತೀಯಾ ದ್ರಷ್ಟುಮ್=ನೋಡಲು ಅನೇನ=ಈ ಸ್ವ=ಸ್ವಂತದ ಚಕ್ಷುಷಾ=ಕಣ್ಣುಗಳಿಂದ ದಿವ್ಯಂ=ದಿವ್ಯವಾದ ದದಾಮಿ=ಕೊಡುತ್ತೇನೆ ತೇ=ನಿನಗೆ ಚಕ್ಷುಃ=ಕಣ್ಣುಗಳನ್ನು ಪಶ್ಯ=ನೋಡು ಮೇ=ನನ್ನನ್ನು ಯೋಗಂ ಐಶ್ವರಂ=ಐಶ್ವರ ಯೋಗವನ್ನು
ನೀನು ನಿನ್ನ ಸ್ವಂತ ಕಣ್ಣುಗಳಿಂದ ನನ್ನನ್ನು (ನನ್ನ ವಿಶ್ವರೂಪವನ್ನು) ನೋಡಲು ಶಕ್ಯನಾಗಲಾರೆ. ನಾನು ನಿನಗೆ ದಿವ್ಯ ದೃಷ್ಟಿಯನ್ನು ಕೊಡುತ್ತೇನೆ. ನನ್ನ ವಿಶ್ವರೂಪವನ್ನು ನೋಡು.
ಸಂಜಯ ಉವಾಚ .
ಏವಮುಕ್ತ್ವಾ ತತೋ ರಾಜನ್ಮಹಾಯೋಗೇಶ್ವರೋ ಹರಿಃ .
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಂ .. ೧೧-೯..
ಏವಂ=ಹೀಗೆ ಉಕ್ತ್ವಾ=ಹೇಳಿ ತತಃ=ನಂತರ ರಾಜನ್=ಹೇ ರಾಜನೇ ಮಹಾ ಯೋಗೇಶ್ವರಃ=ಮಹಾ ಯೋಗೇಶ್ವರನಾದ ಹರಿಃ=ಹರಿಯು ದರ್ಶಯಾಮಾಸ=ತೋರಿಸಿದನು ಪಾರ್ಥಾಯ=ಪಾರ್ಥನಿಗೆ ಪರಮಂ=ಪರಮವಾದ ರೂಪಂ ಐಶ್ವರಂ=ಐಶ್ವರವಾದ ರೂಪವನ್ನು
ಹೇ ರಾಜನ್ (ಧ್ರತರಾಷ್ಟ್ರ), ಹೀಗೇ ಹೇಳಿದ ಮಹಾಯೋಗೇಶ್ವರನಾದ ಹರಿಯು ತನ್ನ ಪರಮ ಐಶ್ವರವಾದ ವಿಶ್ವರೂಪವನ್ನು ಪಾರ್ಥನಿಗೆ ತೋರಿಸಿದನು.
ಅನೇಕವಕ್ತ್ರನಯನಮನೇಕಾದ್ಭುತದರ್ಶನಂ .
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಂ .. ೧೧-೧೦..
ವಕ್ತ್ರ=ಮುಖ ನಯನ=ಕಣ್ಣು ಅನೇಕ ಉದ್ಯತ ಆಯುಧಂ=ಅನೇಕ ಆಯುಧಗಳನ್ನು ಎತ್ತಿಹಿಡಿದ
ಅನೇಕ ಮುಖ ಹಾಗೂ ಕಣ್ಣುಗಳನ್ನು ಹೊಂದಿದ, ಅನೇಕ ಅದ್ಭುತದರ್ಶನವುಳ್ಳ, ಅನೇಕ ದಿವ್ಯ ಆಭರಣವನ್ನು ಧರಿಸಿದ, ಅನೇಕ ಆಯುಧಗಳನ್ನು ಎತ್ತಿ ಹಿಡಿದವನನ್ನು (ಅರ್ಜುನ ನೋಡಿದನು).
ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಂ .
ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಂ .. ೧೧-೧೧..
ಮಾಲ್ಯ=ಮಾಲೆ ಅಂಬರ=ಬಟ್ಟೆ ಧರಂ=ಧರಿಸಿದವನು ದಿವ್ಯಗಂಧಾನುಲೇಪನಂ=ದಿವ್ಯಸುಗಂಧವನ್ನು ಲೇಪಸಿದ ಸರ್ವಾಶ್ಚರ್ಯಮಯಂ=ಸರ್ವಾಶ್ಚರ್ಯದಿಂದ ತುಂಬಿದ ದೇವಂ=ದೇವನನ್ನು ಅನಂತಂ=ಅನಂತನು ವಿಶ್ವತೋಮುಖಂ=ವಿಶ್ವತೋಮುಖನನ್ನು
ದಿವ್ಯಮಾಲೆ ಹಾಗೂ ದಿವ್ಯ ಬಟ್ಟೆಗಳನ್ನು ಧರಿಸಿದ, ದಿವ್ಯಗಂಧಗಳನ್ನು ಲೇಪಿಸಿದ, ಸರ್ವಾಶ್ಚರ್ಯಮಯನಾದ, ಅನಂತನಾದ, ವಿಶ್ವತೋಮುಖನಾದ ದೇವನನ್ನು (ಅರ್ಜುನನು ನೋಡಿದನು).
ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ .
ಯದಿ ಭಾಃ ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನಃ .. ೧೧-೧೨..
ದಿವಿ=ಆಕಾಶದಲ್ಲಿ ಸೂರ್ಯಸಹಸ್ರಸ್ಯ=ಸಾವಿರ ಸೂರ್ಯರ ಭವೇತ್=ಆದರೆ ಯುಗಪತ್=ಒಟ್ಟಿಗೆ ಉತ್ಥಿತಾ=ಉದಯಿಸಿದರೆ ಯದಿ=ಒಂದು ವೇಳೆ ಭಾಃ=ಕಂಡರೆ ಸದೃಶೀ=ಸದೃಶವಾದ ಸ್ಯಾತ್=ಆದರೆ ಭಾಸ:=ಕಾಣುತ್ತದೆ ತಸ್ಯ=ಅವನ ಮಹಾತ್ಮನಃ=ಮಹಾತ್ಮನ
ಒಂದು ವೇಳೆ ಆಕಾಶದಲ್ಲಿ ಸಾವಿರ ಸೂರ್ಯರು ಒಟ್ಟಿಗೆ ಉದಯಿಸಿದರೆ ಹೇಗೆ ಕಾಣುವದೋ ಅದು ಆ ಮಹಾತ್ಮನ ಪ್ರಕಾಶಕ್ಕೆ ಸಮಾನವಾದೀತು.
ತತ್ರೈಕಸ್ಥಂ ಜಗತ್ಕೃತ್ಸ್ನಂ ಪ್ರವಿಭಕ್ತಮನೇಕಧಾ .
ಅಪಶ್ಯದ್ದೇವದೇವಸ್ಯ ಶರೀರೇ ಪಾಂಡವಸ್ತದಾ .. ೧೧-೧೩..
ತತ್ರ=ಅಲ್ಲಿ ಏಕಸ್ಥಂ=ಒಟ್ಟಗೆ ಸೇರಿದ ಜಗತ್ ಕೃತ್ಸ್ನಂ=ಸಂಪೂರ್ಣವಾಗಿ ಪ್ರವಿಭಕ್ತಂ=ವಿಭಾಗವಾದ ಅನೇಕಧಾ=ಅನೇಕ ಪ್ರಕಾರವಾಗಿ ಅಪಶ್ಯತ್=ನೋಡಿದನು ದೇವದೇವಸ್ಯ=ದೇವದೇವನ ಶರೀರೇ=ಶರೀರದಲ್ಲಿ ಪಾಂಡವಃ=ಅರ್ಜುನ ತದಾ=ಆವಾಗ
ಆಗ ಪಾಂಡವನು ಬೇರೆ ಬೇರೆ ವಿಭಾಗವಾಗಿರುವ ಜಗತ್ತೆಲ್ಲ ದೇವದೇವನ ಶರೀರದಲ್ಲಿ ಏಕತ್ರವಾಗಿರುವದನ್ನು ಕಂಡನು.
ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ .
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ .. ೧೧-೧೪..
ಹೀಗೆ ವಿಸ್ಮಯಗೊಂಡ ಹರ್ಷದಿಂದ ರೋಮಾಂಚನಗೊಂಡ ಧನಂಜಯ ಕೈ ಜೋಡಿಸಿ ದೇವನಿಗೆ ಶಿರಸಾ ನಮಸ್ಕರಿಸಿದನು.
ಅರ್ಜುನ ಉವಾಚ .
ಪಶ್ಯಾಮಿ ದೇವಾಂಸ್ತವ ದೇವ ದೇಹೇ
ಸರ್ವಾಂಸ್ತಥಾ ಭೂತವಿಶೇಷಸಂಘಾನ್ .
ಬ್ರಹ್ಮಾಣಮೀಶಂ ಕಮಲಾಸನಸ್ಥ-
ಮೃಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ .. ೧೧-೧೫..
ಪಶ್ಯಾಮಿ=ನೋಡುತ್ತೇನೆ ದೇವಾನ್=ದೇವರುಗಳನ್ನು ತವ=ನಿನ್ನ ದೇವ=ಹೇ ದೇವಾ ದೇಹೇ=ದೇಹದಲ್ಲಿ ಸರ್ವಾನ್=ಎಲ್ಲ ತಥಾ=ಹಾಗೆಯೇ ಭೂತವಿಶೇಷಸಂಘಾನ್=ವಿಶೇಷಭೂತಗಳ ಗುಂಪನ್ನು ಬ್ರಹ್ಮಾಣಂ=ಬ್ರಹ್ಮನನ್ನು ಕಮಲಾಸನಸ್ಥಂ=ಕಮಲದಲ್ಲಿ ಕುಳಿತು ಋಷೀನ್=ಋಷೀಗಳನ್ನು ಸರ್ವಾನ್ = ಸಕಲ ಉರಗಾನ್=ಹಾವುಗಳನ್ನು ದಿವ್ಯಾನ್=ದಿವ್ಯವಾದ
ದೇವಾ, ವಿಶೇಷ ರೂಪ ಹೊಂದಿದ ಪ್ರಾಣಿಗಳನ್ನು, ಕಮಲಾಸನನಾದ ಬ್ರಹ್ಮನನ್ನು, ಸರ್ವ ಋಷಿಗಳನ್ನು, ದಿವ್ಯವಾದ ಹಾವುಗಳನ್ನು ನಿನ್ನ ದೇಹದಲ್ಲಿ ನೋಡುತ್ತಿದ್ದೇನೆ.
ಅನೇಕಬಾಹೂದರವಕ್ತ್ರನೇತ್ರಂ
ಪಶ್ಯಾಮಿ ತ್ವಾಂ ಸರ್ವತೋಽನಂತರೂಪಂ .
ನಾಂತಂ ನ ಮಧ್ಯಂ ನ ಪುನಸ್ತವಾದಿಂ
ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ .. ೧೧-೧೬..
ಅನೇಕ=ಅನೇಕ ಬಾಹು=ತೋಳು ಉದರ=ಹೊಟ್ಟೆ ವಕ್ತ್ರ=ಮುಖ ನೇತ್ರ=ಕಣ್ಣು ಪಶ್ಯಾಮಿ=ನೋಡುತ್ತೇನೆ ತ್ವಾಂ=ನಿನ್ನನ್ನು ಸರ್ವತ:=ಎಲ್ಲೆಲ್ಲು ಅನಂತರೂಪಂ=ಅನಂತರೂಪವನ್ನು ನ ಅಂತಂ=ಕೊನೆಯಿಲ್ಲದ ನ ಮಧ್ಯಂ=ಮಧ್ಯವಿಲ್ಲದ ನ ಪುನಃ ತವ ಆದಿಂ=ನಿನಗೆ ಮೊದಲಿಲ್ಲ ವಿಶ್ವೇಶ್ವರ=ವಿಶ್ವೇಶ್ವರ ವಿಶ್ವರೂಪ=ವಿಶ್ವರೂಪನೇ
ಹೇ ವಿಶ್ವೇಶ್ವರನೇ, ಅನೇಕ ತೋಳು, ಹೊಟ್ಟೆ, ಕಣ್ಣು ಹೊಂದಿರುವ ಹಾಗೂ ಅನಂತರೂಪನಾದ ನಿನ್ನನ್ನು ಎಲ್ಲೆಲ್ಲೂ ನೋಡುತ್ತಿದ್ದೇನೆ. ಹೇ ವಿಶ್ವರೂಪನೇ, ನಿನ್ನ ಆದಿ, ಮಧ್ಯ, ಅಂತ್ಯವನ್ನು ಕಾಣಲಾರೆನು.
ಕಿರೀಟಿನಂ ಗದಿನಂ ಚಕ್ರಿಣಂ ಚ
ತೇಜೋರಾಶಿಂ ಸರ್ವತೋ ದೀಪ್ತಿಮಂತಂ .
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾದ್
ದೀಪ್ತಾನಲಾರ್ಕದ್ಯುತಿಮಪ್ರಮೇಯಂ .. ೧೧-೧೭..
ಕಿರೀಟಿನಂ=ಕಿರೀಟ ಧರಿಸಿದವನನ್ನು ಗದಿನಂ=ಗದೆಯನ್ನು ಹಿಡಿದವನನ್ನು ಚಕ್ರಿಣಂ=ಚಕ್ರ ಹಿಡಿದವನನ್ನು ತೇಜೋರಾಶಿಂ=ತೇಜಸ್ಸಿನ ರಾಶಿಯನ್ನು ಸರ್ವತಃ=ಎಲ್ಲೆಲ್ಲೂ ದೀಪ್ತಿಮಂತಂ=ಪ್ರಕಾಶವುಳ್ಳವನನ್ನು ಪಶ್ಯಾಮಿ=ನೋಡುತ್ತಿದ್ದೇನೆ ತ್ವಾಂ=ನಿನ್ನನ್ನು ದುರ್ನಿರೀಕ್ಷ್ಯ=ನೋಡಲು ಕಷ್ಟವಾಗುವ ಸಮಂತಾದ್=ಎಲ್ಲೆಲ್ಲೂ ದೀಪ್ತನಲಾರ್ಕದ್ಯುತಿಮ್=ಉರಿಯುತ್ತಿರುವ ಬೆಂಕಿಯಂತೆ ಪ್ರಕಾಶಿಸುತ್ತಿರುವ ಅಪ್ರಮೇಯಂ=ಅಪರಿಮಿತನೂ
ಕಿರೀಟವನ್ನು ಧರಿಸಿದವನಾಗಿ, ಗದೆ ಹಾಗೂ ಚಕ್ರಗಳನ್ನು ಧರಿಸಿದವನೂ, ತೇಜೋರಾಶಿಯೂ, ಎಲ್ಲೆಲ್ಲೂ ಪ್ರಕಾಶಮಾನವುಳ್ಳವನೂ, ನೋಡಲು ಕಷ್ಟವಾದವನೂ, ಉರಿಯುತ್ತಿರುವ ಬೆಂಕಿಯಂತೆ ಪ್ರಭೆಯುಳ್ಳವನೂ, ಅಪ್ರಮೇಯನೂ ಆದ ನಿನ್ನನ್ನು ನಾನು ನೋಡುತ್ತಿದ್ದೇನೆ.
ತ್ವಮಕ್ಷರಂ ಪರಮಂ ವೇದಿತವ್ಯಂ
ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ .
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ
ಸನಾತನಸ್ತ್ವಂ ಪುರುಷೋ ಮತೋ ಮೇ .. ೧೧-೧೮..
ತ್ವಮ್=ನೀನು ಅಕ್ಷರಂ=ಅವಿನಾಶಿ ವೇದಿತವ್ಯಂ=ತಿಳಿಯಬೇಕಾದದ್ದು ಅಸ್ಯ ವಿಶ್ವಸ್ಯ=ಈ ವಿಶ್ವದ ಪರಂ ನಿಧಾನಂ=ಪರಮ ನಿಧಿ ಅವ್ಯಯ=ಅವ್ಯಯ ಶಾಶ್ವತಧರ್ಮಗೋಪ್ತಾ=ಶಾಶ್ವತ ಧರ್ಮವನ್ನು ರಕ್ಷಿಸುವನು ಸನಾತನ=ಸನಾತನ ಮತಃ ಮೇ = ನನ್ನ ಅಭಿಪ್ರಾಯ
ನೀನು ಅಕ್ಷರನು, ಪರಮನು ಹಾಗೂ ತಿಳಿಯತಕ್ಕವನು. ಈ ವಿಶ್ವದ ಪರಮ ನಿಧಿ ನೀನು. ಅವ್ಯಯನು ನೀನು ಹಾಗೂ ಶಾಶ್ವತ ಧರ್ಮವನ್ನು ರಕ್ಷಿಸುವವನು. ನೀನು ಆದಿಪುರುಷನು. ಹೀಗೆಂದು ನನ್ನ ಅಭಿಪ್ರಾಯ.
ಅನಾದಿಮಧ್ಯಾಂತಮನಂತವೀರ್ಯ-
ಮನಂತಬಾಹುಂ ಶಶಿಸೂರ್ಯನೇತ್ರಂ .
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ
ಸ್ವತೇಜಸಾ ವಿಶ್ವಮಿದಂ ತಪಂತಂ .. ೧೧-೧೯..
ಅನಾದಿ ಮಧ್ಯ ಅಂತ =ಆದಿ,ಮಧ್ಯೆ ಹಾಗೂ ಅಂತ್ಯವಿಲ್ಲದ ಅನಂತ ವೀರ್ಯಮ್=ಅನಂತ ಶಕ್ತಿಯುಳ್ಳ ಅನಂತಬಾಹು=ಅನಂತವಾದ ತೋಳುಳ್ಳ ಶಶಿಸೂರ್ಯನೇತ್ರಂ=ಸೂರ್ಯ ಚಂದ್ರರು ಕಣ್ಣಾಗಿರುವ ಪಶ್ಯಾಮಿ=ನೋಡುತ್ತೇನೆ ತ್ವಾಂ=ನಿನ್ನನ್ನು ದೀಪ್ತಹುತಾಶವಕ್ತ್ರಂ=ಉರಿಯುತ್ತಿರುವ ಬೆಂಕಿಯಂತಹ ಬಾಯುಳ್ಳ ಸ್ವತೇಜಸಾ=ನಿನ್ನ ತೇಜಸ್ಸಿನಿಂದ ವಿಶ್ವಂ ಇದಂ=ಈ ವಿಶ್ವವನ್ನು ತಪಂತಂ=ಕಾಯಿಸುವವನು
ಆದಿ, ಮಧ್ಯೆ ಅಥವಾ ಅಂತ್ಯವಿಲ್ಲದ, ಅನಂತ ಶಕ್ತಿಯುಳ್ಳ, ಅನಂತ ಬಾಹುಗಳನ್ನು ಹೊಂದಿರುವ, ಶಶಿ-ಸೂರ್ಯರನ್ನು ಕಣ್ಣಾಗಿ ಹೊಂದಿರುವ, ಉರಿಯುವ ಬೆಂಕಿಯಂತಹ ಬಾಯುಳ್ಳ, ಸ್ವ-ತೇಜಸ್ಸಿನಿಂದ ಈ ವಿಶ್ವವನ್ನು ಕಾಯಿಸುವ ನಿನ್ನನ್ನು ನಾನು ನೋಡುತ್ತೇನೆ.
ದ್ಯಾವಾಪೃಥಿವ್ಯೋರಿದಮಂತರಂ ಹಿ
ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ .
ದೃಷ್ಟ್ವಾದ್ಭುತಂ ರೂಪಮುಗ್ರಂ ತವೇದಂ
ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ .. ೧೧-೨೦..
ದ್ವಾವಾಪ್ರಥಿವ್ಯಃ = ಭೂಲೋಕ ಹಾಗೂ ಸ್ವರ್ಗಲೋಕ ಇದಂ ಅಂತರಂ=ಅವುಗಳ ಮಧ್ಯೆ ವ್ವಾಪ್ತಂ=ವ್ಯಾಪಿಸಿರುವ ತ್ವಯಾ=ನಿನ್ನಿಂದ ಏಕೇನ=ಒಬ್ಬನಿಂದ ದಿಶಶ್ಚ=ದಿಕ್ಕುಗಳನ್ನು ಸರ್ವಾಃ=ಎಲ್ಲ ದೃಷ್ಟ್ವಾ=ನೋಡಿ ಅದ್ಭುತಂ=ಅದ್ಭುತವನ್ನು ರೂಪಂ ಉಗ್ರಂ=ಉಗ್ರ ರೂಪವನ್ನು ತವ ಇದಂ=ನಿನ್ನ ಈ ಲೋಕತ್ರಯಂ=ಮೂರು ಲೋಕಗಳು ಪ್ರವ್ಯಥಿತಂ=ಕಳವಳಗೊಂಡಿದೆ
ದೇವಲೋಕ, ಭೂಲೋಕ ಹಾಗೂ ಅವುಗಳ ಮಧ್ಯದ ಸ್ಥಳವೆಲ್ಲವನ್ನೂ, ಸರ್ವ ದಿಕ್ಕುಗಳನ್ನೂ ನಿನ್ನೊಬ್ಬನಿಂದಲೇ ಆವ್ರತವಾಗಿರುವದನ್ನು ನೋಡಿ, ನಿನ್ನ ಅದ್ಭುತ ಹಾಗೂ ಉಗ್ರವಾದ ರೂಪವನ್ನು ನೋಡಿ ಮೂರೂಲೋಕವೂ ಭಯದಿಂದ ಕಳವಳಗೊಂಡಿದೆ, ಹೇ ಮಹಾತ್ಮನೇ.
ಅಮೀ ಹಿ ತ್ವಾಂ ಸುರಸಂಘಾ ವಿಶಂತಿ
ಕೇಚಿದ್ಭೀತಾಃ ಪ್ರಾಂಜಲಯೋ ಗೃಣಂತಿ .
ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ
ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಲಾಭಿಃ .. ೧೧-೨೧..
ಅಮಿ=ಈ ತ್ವಾಂ=ನಿನ್ನ ಸುರಸಂಘಾ=ದೇವತೆಗಳ ಸಮೂಹ ವಿಶಂತಿ=ಪ್ರವೇಶಿಸುತ್ತಿವೆ ಕೇಚಿತ್=ಕೆಲವರು ಭೀತಾಃ=ಭಯಗ್ರಸ್ತರಾಗಿ ಪ್ರಾಂಜಲಯ:=ಕೈ ಜೋಡಿಸಿ ಗ್ರಣಂತಿ=ಸ್ತುತಿಸುತ್ತಾರೆ ಸ್ವಸ್ತಿ=ಸ್ವಸ್ತಿ ಇತಿ ಉಕ್ತ್ವಾ = ಎಂದು ಹೇಳಿ ಮಹರ್ಷಿ ಸಿದ್ಧಸಂಘಾಃ=ಮಹರ್ಷಿಗಳು ಸಂಘಗಳು ಸ್ತುವಂತಿ=ಸ್ತುತಿಸುತ್ತಾರೆ ತ್ವಾಂ=ನಿನ್ನನ್ನು ಸ್ತುತಿಭಿಃ=ಸ್ತುತಿಗಳಿಂದ ಪುಷ್ಕಲಾಭಿಃ=ಭವ್ಯವಾದುವಗಳಿಂದ
ಈ ದೇವತೆಗಳ ಸಂಘಗಳು ನಿನ್ನನ್ನೇ ಪ್ರವೇಶಿಸುತ್ತಿವೆ. ಕೆಲವರು ಭೀತರಾಗಿ ಕೈಜೋಡಿಸಿ ನಿನ್ನನ್ನು ಸ್ತುತಿಸುತ್ತಿದ್ದಾರೆ. ಮಹಾ ಋಷಿಗಳ ಸಂಘಗಳು ಸ್ವಸ್ತಿ ಎನ್ನುತ್ತಾ ಭವ್ಯವಾದ ಸ್ತುತಿಗಳಿಂದ ನಿನ್ನನ್ನು ಹೊಗಳುತ್ತಾರೆ.
ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ
ವಿಶ್ವೇಽಶ್ವಿನೌ ಮರುತಶ್ಚೋಷ್ಮಪಾಶ್ಚ .
ಗಂಧರ್ವಯಕ್ಷಾಸುರಸಿದ್ಧಸಂಘಾ
ವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ .. ೧೧-೨೨..
ರುದ್ರ=ರುದ್ರರು ಆದಿತ್ಯ=ಆದಿತ್ಯರು ವಸವಃ=ವಸುಗಳು ಯೇ=ಯಾರು ಚ=ಹಾಗೂ ಸಾಧ್ಯಾ=ಸಾಧ್ಯರು ವಿಶ್ವೇ=ವಿಶ್ವದಲ್ಲಿ ಅಶ್ವಿನೌ=ಅಶ್ವಿನಿ ದೇವತೆಗಳು ಮರುತಃ=ಮರುತರು ಚ=ಹಾಗೂ ಉಷ್ಮಪಾ:=ಪಿತೃಗಳು ಗಂಧರ್ವಯಕ್ಷ ಅಸುರ ಸಿದ್ಧ ಸಂಘಾ=ಗಂಧರ್ವ ಯಕ್ಷ ಅಸುರ ಹಾಗೂ ಸಿದ್ಧಸಂಘಗಳು ವೀಕ್ಷಂತೆ=ನೋಡುತ್ತಾರೆ ತ್ವಾಂ=ನಿನ್ನನ್ನು ವಿಸ್ಮಿತಾಃ ಏವ=ಆಶ್ಚರ್ಯದಿಂದಲೇ ಸರ್ವೇ=ಎಲ್ಲರೂ
ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ಅಶ್ವಿನಿ ದೇವತೆಗಳು, ಮರುತರು, ಪಿತೃಗಳು, ಗಂಧರ್ವರು, ಯಕ್ಷರು, ಅಸುರರು, ಸಿದ್ಧರು ಇವರೆಲ್ಲ ಆಶ್ಚರ್ಯದಿಂದಲೇ ನಿನ್ನನ್ನು ನೋಡುತ್ತಿದ್ದರು.
ರೂಪಂ ಮಹತ್ತೇ ಬಹುವಕ್ತ್ರನೇತ್ರಂ
ಮಹಾಬಾಹೋ ಬಹುಬಾಹೂರುಪಾದಂ .
ಬಹೂದರಂ ಬಹುದಂಷ್ಟ್ರಾಕರಾಲಂ
ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಂ .. ೧೧-೨೩..
ರೂಪಂ ಮಹತ್ತೇ = ನಿನ್ನ ದೊಡ್ಡದಾದ ರೂಪವನ್ನು ಬಹುವಕ್ತ್ರನೇತ್ರಂ=ಬಹಳ ಮುಖ ಹಾಗೂ ಕಣ್ಣುಗಳಿರುವ ಮಹಾಬಾಹೋ=ಹೇ ಮಹಾಬಾಹು. ಬಹುಬಾಹು ಊರು ಪಾದಂ=ಬಹಳ ತೋಳು ಕಾಲು ಹಾಗೂ ಪಾದಗಳನ್ನು ಬಹು ಉದರಂ=ಬಹಳ ಹೊಟ್ಟೆ ದಂಷ್ಟ್ರಾ=ಕೋರೆ ದಾಡೆ ಕರಾಲಂ=ಕರಾಳವಾದ ದೃಷ್ಟ್ವಾ=ನೋಡಿ ಲೋಕಾಃ=ಲೋಕವು ಪ್ರವ್ಯಥಿತಾಃ=ಭಯಗೊಂಡಿರುವ ತಥಾ=ಹಾಗೆಯೇ ಅಹಂ=ನಾನು
ಎಲೈ ಮಹಾಬಾಹು, ಅನೇಕ ಮುಖಗಳು, ಕಣ್ಣುಗಳು, ಬಾಹುಗಳು, ಕಾಲುಗಳು, ಪಾದಗಳು, ಹೊಟ್ಟೆಗಳು, ಕರಾಳ ಕೋರೆದಾಡೆಗಳು ಹೊಂದಿರುವ ನಿನ್ನ ಮಹತ್ತಾದ ರೂಪವನ್ನು ನೋಡಿ ಲೋಕದ ಜನರು ಭಯಗೊಂಡಿದ್ದಾರೆ. ಹಾಗೇ ನಾನೂ ಸಹ ಭಯಗೊಂಡಿದ್ದೇನೆ.
ನಭಃಸ್ಪೃಶಂ ದೀಪ್ತಮನೇಕವರ್ಣಂ
ವ್ಯಾತ್ತಾನನಂ ದೀಪ್ತವಿಶಾಲನೇತ್ರಂ .
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ
ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ .. ೧೧-೨೪..
ನಭಃ ಸ್ಪೃಶಂ=ಆಕಾಶವನ್ನು ಮುಟ್ಟುತ್ತಿರುವ ದೀಪ್ತಂ=ತೇಜೋಮಯನಾದ ಅನೇಕವರ್ಣಂ=ಅನೇಕವರ್ಣನಾದ ವ್ಯಾತ್ತ ಆನನಂ=ತೆರೆದ ಬಾಯಿಯ ದೀಪ್ತ ವಿಶಾಲ ನೇತ್ರಂ=ಪ್ರಜ್ವಲವಾದ ವಿಶಾಲ ನೇತ್ರವುಳ್ಳ ದೃಷ್ಟ್ವಾ=ನೋಡಿ ತ್ವಾಂ=ನಿನ್ನನ್ನು ಪ್ರವ್ಯಥಿತ ಅಂತರಾತ್ಮಾ=ಭಯಗೊಂಡ ಮನಸ್ಸುಳ್ಳವಾನಾಗಿ ಧೃತಿಂ=ಧೈರ್ಯವನ್ನು ವಿಂದಾಮಿ=ಹೊಂದುವೆನು ಶಮಂ=ಸಮಾಧಾನವನ್ನು ಚ=ಹಾಗೂ
ಹೇ ವಿಷ್ಣೂ, ಆಕಾಶವನ್ನು ಮುಟ್ಟುತ್ತಿರುವ ನಿನ್ನ ತೇಜೋಮಯವಾದ, ಅನೇಕ ವರ್ಣದ ರೂಪವನ್ನೂ, ತೆರೆದ ಬಾಯನ್ನೂ, ಪ್ರಕಾಶಮಾನವಾದ ವಿಶಾಲ ಕಣ್ಣುಗಳನ್ನೂ ನೋಡಿ ನಾನು ಭಯಗೊಂಡಿರುವೆನು. ಧೈರ್ಯ ಹಾಗೂ ಸಮಾಧಾನವನ್ನು ಹೊಂದಲಾರೆನು.
ದಂಷ್ಟ್ರಾಕರಾಲಾನಿ ಚ ತೇ ಮುಖಾನಿ
ದೃಷ್ಟ್ವೈವ ಕಾಲಾನಲಸನ್ನಿಭಾನಿ .
ದಿಶೋ ನ ಜಾನೇ ನ ಲಭೇ ಚ ಶರ್ಮ
ಪ್ರಸೀದ ದೇವೇಶ ಜಗನ್ನಿವಾಸ .. ೧೧-೨೫..
ದಂಷ್ಟ್ರಾಕರಾಲಾನಿ = ಕರಾಳವಾದ ಕೋರೆದಾಡೆಯ ತೇ=ನಿನ್ನ ಮುಖಾನಿ=ಮುಖಗಳು ದೃಷ್ಟ್ವ ಏವ=ನೋಡಿಯೇ ಕಾಲ ಅನಲ =ಪ್ರಳಯಾಗ್ನಿ ಸನ್ನಿಭಾನಿ=ಅಂತಿರುವ ದಿಶೋ=ದಿಕ್ಕು ನ ಜಾನೇ=ತಿಳಿಯದಾದೆ. ನ ಲಭೇ ಚ ಶರ್ಮ=ಸಂತೋಷ ಸಿಗಲಿಲ್ಲ ಪ್ರಸೀದ=ಪ್ರಸನ್ನನಾಗು ಜಗತ್ ನಿವಾಸ=ಜಗತ್ತೇ ನಿವಾಸವಾಗಿರುವವನು
ಕೋರೆದಾಡೆಗಳಿಂದ ಕರಾಳವಾಗಿರುವ, ಪ್ರಳಯಾಗ್ನಿಯಂತೆ ತೋರುವ ನಿನ್ನ ಮುಖವನ್ನು ನೋಡಿ, ಸಂತೋಷ ಸಮಾಧಾನವಿಲ್ಲದವನಾಗಿ ದಿಕ್ಕೇ ತೋರದಂತಾಗಿದ್ದೇನೆ, ಹೇ ದೇವೇಶ, ಹೇ ಜಗನ್ನಿವಾಸ, ದಯವಿಟ್ಟು ಪ್ರಸನ್ನನಾಗು.
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ
ಸರ್ವೇ ಸಹೈವಾವನಿಪಾಲಸಂಘೈಃ .
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾಸೌ
ಸಹಾಸ್ಮದೀಯೈರಪಿ ಯೋಧಮುಖ್ಯೈಃ .. ೧೧-೨೬..
ಅಮೀ=ಅವರು ಚ=ಸಹ ತ್ವಾಂ=ನಿನ್ನನ್ನು ಧೃತರಾಷ್ಟ್ರಸ್ಯ=ಧೃತರಾಷ್ಟ್ರನ ಪುತ್ರಾಃ=ಮಕ್ಕಳು ಸರ್ವೇ=ಎಲ್ಲರೂ ಸಹ=ಜೊತೆ ಏವ=ಹಾಗೇ ಅವನಿಪಾಲ=ರಾಜ ಸಂಘೈಃ=ಸಂಘಗಳು ಸೂತಪುತ್ರ=ಕರ್ಣ ತಥಾ=ಹಾಗೇ ಅಸೌ=ಈ ಸಹ=ಜೊತೆ ಅಸ್ಮದೀಯೈ=ನಮ್ಮ ಅಪಿ=ಸಹ ಯೋಧಮುಖೈಃ=ಪ್ರಮುಖ ಯೋಧರಿಂದ
ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ
ದಂಷ್ಟ್ರಾಕರಾಲಾನಿ ಭಯಾನಕಾನಿ .
ಕೇಚಿದ್ವಿಲಗ್ನಾ ದಶನಾಂತರೇಷು
ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ .. ೧೧-೨೭..
ವಕ್ತ್ರಾಣಿ=ಮುಖಗಳು ತೇ=ನಿನ್ನ ತ್ವರಮಾಣಾ=ರಭಸದಿಂದ ವಿಶಂತಿ=ಪ್ರವೇಶಿಸುತ್ತಿದ್ದಾರೆ ದಂಷ್ಟ್ರಾಕರಾಲಾನಿ=ಕರಾಳ ಕೋರೆದಾಡೆಗಳು ಭಯಾನಕಾನಿ=ಭಯಾನಕವಾದ ಕೇಚಿತ್=ಕೆಲವು ವಿಲಗ್ನಾ:=ಸಿಲುಕಿಕೊಂಡು ದಶನ=ಹಲ್ಲು ಅಂತರೇಷು=ಮಧ್ಯದಲ್ಲಿ ಸಂದೃಶ್ಯಂತೇ=ಕಾಣಿಸುತ್ತಾರೆ ಚೂರ್ಣಿತೈಃ=ಪುಡಿಪುಡಿಯಾಗಿ ಉತ್ತಮಾಂಗೈಃ=ತಲೆಗಳು
ಧೃತರಾಷ್ಟ್ರನ ಮಕ್ಕಳು, ಅನ್ಯ ರಾಜರಸಮೂಹಗಳು, ಕರ್ಣ ಇತ್ಯಾದಿಯರು, ನಮ್ಮ ಸೈನ್ಯದ ಮುಖ್ಯ ಯೋಧರು ಸಹ ಎಲ್ಲಾ ನಿನ್ನ ಭಯಾನಾಕವಾದ ಕೋರೆದಾಡೆಗಳಿರುವ ಕರಾಳವಾಗಿರುವ ಬಾಯಿಯಲ್ಲಿ ರಭಸದಿಂದ ಪ್ರವೇಶಿಸಿ ಹಲ್ಲುಗಳ ನಡುವೆ ಅವರ ತಲೆಗಳು ಪುಡಿಯಾಗುವದು ಕಾಣಿಸುತ್ತಿದೆ.
ಯಥಾ ನದೀನಾಂ ಬಹವೋಽಮ್ಬುವೇಗಾಃ
ಸಮುದ್ರಮೇವಾಭಿಮುಖಾ ದ್ರವಂತಿ .
ತಥಾ ತವಾಮೀ ನರಲೋಕವೀರಾ
ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ .. ೧೧-೨೮..
ಯಥಾ=ಹೇಗೆ ನದೀನಾಂ=ನದಿಯಲ್ಲಿ ಬಹವ:=ಬಹಳ ಅಂಬುವೇಗಾಃ=ಬಾಣದ ವೇಗದಲ್ಲಿ ಸಮುದ್ರಮೇವಾಭಿಮುಖಾ=ಸಮುದ್ರದ ದಿಕ್ಕಿನಲ್ಲಿ ದ್ರವಂತಿ=ಹರಿಯುತ್ತವೆ ತಥಾ=ಹಾಗೇ ತವ = ನಿನ್ನ ಅಮೀ=ಈ ನರಲೋಕವೀರಾ=ನರಲೋಕದ ವೀರರು ವಿಶಂತಿ=ಪ್ರವೇಶಿಸುತ್ತಿದ್ದಾರೆ ವಕ್ತ್ರಾಣಿ=ಮುಖಗಳನ್ನು ಅಭಿವಿಜ್ವಲಂತಿ=ಪ್ರಜ್ವಲಿಸುತ್ತಿರುವ
ಹೇಗೆ ನದಿಯ ಬಹಳ ಜಲಪ್ರವಾಹಗಳು ಬಾಣದ ವೇಗದಲ್ಲಿ ಸಮುದ್ರಾಭಿಮುಖವಾಗಿ ಹರಿಯುತ್ತವೋ, ಹಾಗೇ ನರಲೋಕವೀರರು ನಿನ್ನ ಪ್ರಜ್ವಲಿಸುತ್ತಿರುವ ಬಾಯನ್ನು ಪ್ರವೇಶಿಸುತ್ತಿದ್ದಾರೆ.
ಯಥಾ ಪ್ರದೀಪ್ತಂ ಜ್ವಲನಂ ಪತಂಗಾ
ವಿಶಂತಿ ನಾಶಾಯ ಸಮೃದ್ಧವೇಗಾಃ .
ತಥೈವ ನಾಶಾಯ ವಿಶಂತಿ ಲೋಕಾ-
ಸ್ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ .. ೧೧-೨೯..
ಯಥಾ=ಹೇಗೆ ಪ್ರದೀಪ್ತಂ=ಉರಿಯುತ್ತಿರುವ ಜ್ವಲನಂ=ಬೆಂಕಿಯನ್ನು ಪತಂಗಾ=ಪತಂಗಗಳು ವಿಶಂತಿ=ಪ್ರವೇಶಿಸುತ್ತಿದ್ದಾರೆ ನಾಶಾಯ=ನಾಶಕ್ಕಾಗಿ ಸಮೃದ್ಧವೇಗಾಃ=ಬಹಳ ವೇಗವುಳ್ಳವರಾಗಿ ತಥಾ ಏವ=ಹಾಗೆಯೆ ಲೋಕಾ:=ಲೋಕದ ಜನರು ತವ=ನಿನ್ನ ಅಪಿ=ಸಹ ವಕ್ತ್ರಾಣಿ=ಬಾಯಿಗಳನ್ನು
ಹೇಗೆ ತಂಗಗಳು ಸುಟ್ಟು ನಾಶವಾಗಲು ವೇಗವಾಗಿ ಉರಿಯುತ್ತಿರುವ ಬೆಂಕಿಯನ್ನು ಪ್ರವೇಶಿಸುತ್ತಾರೋ ಹಾಗೇ ನಾಶವಾಗಲು ಲೋಕದ ಜನರು ನಿನ್ನ ಬಾಯಿಗಳನ್ನು ಪ್ರವೇಶಿಸುತ್ತಿದ್ದಾರೆ.
ಲೇಲಿಹ್ಯಸೇ ಗ್ರಸಮಾನಃ ಸಮಂತಾಲ್-
ಲೋಕಾನ್ಸಮಗ್ರಾನ್ವದನೈರ್ಜ್ವಲದ್ಭಿಃ .
ತೇಜೋಭಿರಾಪೂರ್ಯ ಜಗತ್ಸಮಗ್ರಂ
ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ .. ೧೧-೩೦..
ಆಖ್ಯಾಹಿ ಮೇ ಕೋ ಭವಾನುಗ್ರರೂಪೋ
ನಮೋಽಸ್ತು ತೇ ದೇವವರ ಪ್ರಸೀದ .
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ
ನ ಹಿ ಪ್ರಜಾನಾಮಿ ತವ ಪ್ರವೃತ್ತಿಂ .. ೧೧-೩೧..
ಶ್ರೀಭಗವಾನುವಾಚ .
ಕಾಲೋಽಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ
ಲೋಕಾನ್ಸಮಾಹರ್ತುಮಿಹ ಪ್ರವೃತ್ತಃ .
ಋತೇಽಪಿ ತ್ವಾಂ ನ ಭವಿಷ್ಯಂತಿ ಸರ್ವೇ
ಯೇಽವಸ್ಥಿತಾಃ ಪ್ರತ್ಯನೀಕೇಷು ಯೋಧಾಃ .. ೧೧-೩೨..
ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಂ .
ಮಯೈವೈತೇ ನಿಹತಾಃ ಪೂರ್ವಮೇವ
ನಿಮಿತ್ತಮಾತ್ರಂ ಭವ ಸವ್ಯಸಾಚಿನ್ .. ೧೧-೩೩..
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ
ಕರ್ಣಂ ತಥಾನ್ಯಾನಪಿ ಯೋಧವೀರಾನ್ .
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ
ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ .. ೧೧-೩೪..
ಸಂಜಯ ಉವಾಚ .
ಏತಚ್ಛ್ರುತ್ವಾ ವಚನಂ ಕೇಶವಸ್ಯ
ಕೃತಾಂಜಲಿರ್ವೇಪಮಾನಃ ಕಿರೀಟೀ .
ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ
ಸಗದ್ಗದಂ ಭೀತಭೀತಃ ಪ್ರಣಮ್ಯ .. ೧೧-೩೫..
ಅರ್ಜುನ ಉವಾಚ .
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ
ಜಗತ್ಪ್ರಹೃಷ್ಯತ್ಯನುರಜ್ಯತೇ ಚ .
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ
ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ .. ೧೧-೩೬..
ಕಸ್ಮಾಚ್ಚ ತೇ ನ ನಮೇರನ್ಮಹಾತ್ಮನ್
ಗರೀಯಸೇ ಬ್ರಹ್ಮಣೋಽಪ್ಯಾದಿಕರ್ತ್ರೇ .
ಅನಂತ ದೇವೇಶ ಜಗನ್ನಿವಾಸ
ತ್ವಮಕ್ಷರಂ ಸದಸತ್ತತ್ಪರಂ ಯತ್ .. ೧೧-೩೭..
ತ್ವಮಾದಿದೇವಃ ಪುರುಷಃ ಪುರಾಣ-
ಸ್ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ .
ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ
ತ್ವಯಾ ತತಂ ವಿಶ್ವಮನಂತರೂಪ .. ೧೧-೩೮..
ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ
ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ .
ನಮೋ ನಮಸ್ತೇಽಸ್ತು ಸಹಸ್ರಕೃತ್ವಃ
ಪುನಶ್ಚ ಭೂಯೋಽಪಿ ನಮೋ ನಮಸ್ತೇ .. ೧೧-೩೯..
ನಮಃ ಪುರಸ್ತಾದಥ ಪೃಷ್ಠತಸ್ತೇ
ನಮೋಽಸ್ತು ತೇ ಸರ್ವತ ಏವ ಸರ್ವ .
ಅನಂತವೀರ್ಯಾಮಿತವಿಕ್ರಮಸ್ತ್ವಂ
ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ .. ೧೧-೪೦..
ಸಖೇತಿ ಮತ್ವಾ ಪ್ರಸಭಂ ಯದುಕ್ತಂ
ಹೇ ಕೃಷ್ಣ ಹೇ ಯಾದವ ಹೇ ಸಖೇತಿ .
ಅಜಾನತಾ ಮಹಿಮಾನಂ ತವೇದಂ
ಮಯಾ ಪ್ರಮಾದಾತ್ಪ್ರಣಯೇನ ವಾಪಿ .. ೧೧-೪೧..
ಯಚ್ಚಾವಹಾಸಾರ್ಥಮಸತ್ಕೃತೋಽಸಿ
ವಿಹಾರಶಯ್ಯಾಸನಭೋಜನೇಷು .
ಏಕೋಽಥವಾಪ್ಯಚ್ಯುತ ತತ್ಸಮಕ್ಷಂ
ತತ್ಕ್ಷಾಮಯೇ ತ್ವಾಮಹಮಪ್ರಮೇಯಂ .. ೧೧-೪೨..
ಪಿತಾಸಿ ಲೋಕಸ್ಯ ಚರಾಚರಸ್ಯ
ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ .
ನ ತ್ವತ್ಸಮೋಽಸ್ತ್ಯಭ್ಯಧಿಕಃ ಕುತೋಽನ್ಯೋ
ಲೋಕತ್ರಯೇಽಪ್ಯಪ್ರತಿಮಪ್ರಭಾವ .. ೧೧-೪೩..
ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ
ಪ್ರಸಾದಯೇ ತ್ವಾಮಹಮೀಶಮೀಡ್ಯಂ .
ಪಿತೇವ ಪುತ್ರಸ್ಯ ಸಖೇವ ಸಖ್ಯುಃ
ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಂ .. ೧೧-೪೪..
ಅದೃಷ್ಟಪೂರ್ವಂ ಹೃಷಿತೋಽಸ್ಮಿ ದೃಷ್ಟ್ವಾ
ಭಯೇನ ಚ ಪ್ರವ್ಯಥಿತಂ ಮನೋ ಮೇ .
ತದೇವ ಮೇ ದರ್ಶಯ ದೇವ ರೂಪಂ
ಪ್ರಸೀದ ದೇವೇಶ ಜಗನ್ನಿವಾಸ .. ೧೧-೪೫..
ಕಿರೀಟಿನಂ ಗದಿನಂ ಚಕ್ರಹಸ್ತಂ
ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ .
ತೇನೈವ ರೂಪೇಣ ಚತುರ್ಭುಜೇನ
ಸಹಸ್ರಬಾಹೋ ಭವ ವಿಶ್ವಮೂರ್ತೇ .. ೧೧-೪೬..
ಶ್ರೀಭಗವಾನುವಾಚ .
ಮಯಾ ಪ್ರಸನ್ನೇನ ತವಾರ್ಜುನೇದಂ
ರೂಪಂ ಪರಂ ದರ್ಶಿತಮಾತ್ಮಯೋಗಾತ್ .
ತೇಜೋಮಯಂ ವಿಶ್ವಮನಂತಮಾದ್ಯಂ
ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಂ .. ೧೧-೪೭..
ನ ವೇದಯಜ್ಞಾಧ್ಯಯನೈರ್ನ ದಾನೈ-
ರ್ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ .
ಏವಂರೂಪಃ ಶಕ್ಯ ಅಹಂ ನೃಲೋಕೇ
ದ್ರಷ್ಟುಂ ತ್ವದನ್ಯೇನ ಕುರುಪ್ರವೀರ .. ೧೧-೪೮..
ಮಾ ತೇ ವ್ಯಥಾ ಮಾ ಚ ವಿಮೂಢಭಾವೋ
ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಂ .
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ
ತದೇವ ಮೇ ರೂಪಮಿದಂ ಪ್ರಪಶ್ಯ .. ೧೧-೪೯..
ಸಂಜಯ ಉವಾಚ .
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ
ಸ್ವಕಂ ರೂಪಂ ದರ್ಶಯಾಮಾಸ ಭೂಯಃ .
ಆಶ್ವಾಸಯಾಮಾಸ ಚ ಭೀತಮೇನಂ
ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ .. ೧೧-೫೦..
ಅರ್ಜುನ ಉವಾಚ .
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ .
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ .. ೧೧-೫೧..
ಶ್ರೀಭಗವಾನುವಾಚ .
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ .
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣಃ .. ೧೧-೫೨..
ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ .
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ .. ೧೧-೫೩..
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋಽರ್ಜುನ .
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ .. ೧೧-೫೪..
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ .
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ .. ೧೧-೫೫..
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು
ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ
ವಿಶ್ವರೂಪದರ್ಶನಯೋಗೋ ನಾಮೈಕಾದಶೋಽಧ್ಯಾಯಃ .. ೧೧..
Comments
Post a Comment