Posts

ಶಿವಾನಂದಲಹರಿ

  ಶ್ರೀ ಶಿವಾನಂದಲಹರಿ ಕಲಾಭ್ಯಾಂ ಚೂಡಾಲಂಕೃತಶಶಿಕಲಾಭ್ಯಾಂ ನಿಜತಪಃ-      ಫಲಾಭ್ಯಾಂ ಭಕ್ತೇಷು ಪ್ರಕಟಿತಫಲಾಭ್ಯಾಂ ಭವತು ಮೇ . ಶಿವಾಭ್ಯಾಮಸ್ತೋಕತ್ರಿಭುವನಶಿವಾಭ್ಯಾಂ ಹೃದಿ ಪುನ-      ರ್ಭವಾಭ್ಯಾಮಾನಂದಸ್ಫುರದನುಭವಾಭ್ಯಾಂ ನತಿರಿಯಂ .. ೧.. ಕಲೆಯ ಸಾಕಾರ ರೂಪರಾದ, ಚಂದ್ರನಿಂದ ಅಲಂಕರಿಸಲ್ಪಟ್ಟ ಶಿರವನ್ನು ಹೊಂದಿರುವ, ಪರಸ್ಪರ ತಪಸ್ಸಿನ ಫಲಗಳಾದ, ಭಕ್ತರಲ್ಲಿ ಔದಾರ್ಯವನ್ನು ಪ್ರದರ್ಶಿಸುವ, ಮೂರು ಲೋಕಗಳಿಗೆ ಸಮೃದ್ಧವಾಗಿ ಶುಭಕರವಾದ, ನನ್ನ ಹೃದಯದಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಮತ್ತು ಉಕ್ಕಿ ಹರಿಯುವ ಆನಂದವನ್ನು ಅನುಭವಿಸುವ ಶಿವನಿಗೆ ನನ್ನ ನಮಸ್ಕಾರಗಳು. ಗಲಂತೀ ಶಂಭೋ ತ್ವಚ್ಚರಿತಸರಿತಃ ಕಿಲ್ಬಿಷರಜೋ      ದಲಂತೀ ಧೀಕುಲ್ಯಾಸರಣಿಷು ಪತಂತೀ ವಿಜಯತಾಂ . ದಿಶಂತೀ ಸಂಸಾರಭ್ರಮಣಪರಿತಾಪೋಪಶಮನಂ      ವಸಂತೀ ಮಚ್ಚೇತೋಹ್ರದಭುವಿ ಶಿವಾನಂದಲಹರೀ .. ೨.. ಓ ಶಂಭು, ನಿನ್ನ ಜೀವನದ ನದಿಯಿಂದ ಹೊರಹೊಮ್ಮುವ, ಪಾಪದ ಧೂಳನ್ನು ನಾಶಮಾಡುವ, ಬುದ್ಧಿಶಕ್ತಿಯ ಹೊಳೆಗಳ ಹಾದಿಗಳಲ್ಲಿ ಬೀಳುವ, ಲೌಕಿಕ ಜೀವನದ ವೃತ್ತದಲ್ಲಿ ಅಲೆದಾಡುವ ಯಾತನೆಯನ್ನು ಕಡಿಮೆ ಮಾಡುವ ಮತ್ತು ನನ್ನ ಹೃದಯದಲ್ಲಿ ನೆಲೆಸಿರುವ ಶಿವನ ಆನಂದದ ಅಲೆಯು ವಿಜಯಶಾಲಿಯಾಗಲಿ. ತ್ರಯೀವೇದ್ಯಂ ಹೃದ್ಯಂ ತ್ರಿಪುರಹರಮಾದ್ಯಂ ತ್ರಿನಯನಂ      ಜಟಾಭಾರೋದಾರಂ ಚಲದುರಗಹ...

ರಾಮರಕ್ಷಾ ಸ್ತೋತ್ರ

  ಶ್ರೀ ರಾಮ ರಕ್ಷಾ ಸ್ತೋತ್ರಂ ಓಂ ಅಸ್ಯ ಶ್ರೀ ರಾಮರಕ್ಷಾ ಸ್ತೋತ್ರಮಂತ್ರಸ್ಯ ಬುಧಕೌಶಿಕ ಋಷಿಃ ಶ್ರೀ ಸೀತಾರಾಮ ಚಂದ್ರೋದೇವತಾ ಅನುಷ್ಟುಪ್ ಛಂದಃ ಸೀತಾ ಶಕ್ತಿಃ ಶ್ರೀಮದ್ ಹನುಮಾನ್ ಕೀಲಕಂ ಶ್ರೀರಾಮಚಂದ್ರ ಪ್ರೀತ್ಯರ್ಥೇ ರಾಮರಕ್ಷಾ ಸ್ತೋತ್ರಜಪೇ ವಿನಿಯೋಗಃ ॥ ಈ ರಾಮರಕ್ಷಾ ಸ್ತೋತ್ರದ ಕರ್ತೃ ಬುದ್ಧ ಕೌಶಿಕ. ದೇವತೆ ಸೀತಾ ರಾಮಚಂದ್ರ. ಛಂದಸ್ಸು ಅನುಷ್ಟುಪ್. ಶಕ್ತಿ ಸೀತೆ, ಕೇಂದ್ರ ಕೀಲಕ ಹನುಮಂತ. ರಾಮಚಂದ್ರನ ಪ್ರೀತ್ಯರ್ಥವಾಗಿ ರಾಮರಕ್ಷಾ ಸ್ತೋತ್ರ ಜಪ ವಿನಿಯೋಗ ಮಾಡಲಾಗುತ್ತಿದೆ.. ಧ್ಯಾನಂ ಧ್ಯಾಯೇದಾಜಾನುಬಾಹುಂ ಧೃತಶರ ಧನುಷಂ ಬದ್ಧ ಪದ್ಮಾಸನಸ್ಥಂ ಪೀತಂ ವಾಸೋವಸಾನಂ ನವಕಮಲ ದಳಸ್ಪರ್ಥಿ ನೇತ್ರಂ ಪ್ರಸನ್ನಮ್ । ವಾಮಾಂಕಾರೂಢ ಸೀತಾಮುಖ ಕಮಲಮಿಲಲ್ಲೋಚನಂ ನೀರದಾಭಂ ನಾನಾಲಂಕಾರ ದೀಪ್ತಂ ದಧತಮುರು ಜಟಾಮಂಡಲಂ ರಾಮಚಂದ್ರಮ್ ॥ ಬಿಲ್ಲು ಬಾಣ ಹಿಡಿದು, ಕಮಲದ ಭಂಗಿಯಲ್ಲಿ ಕುಳಿತು, ಹಳದಿ ಬಟ್ಟೆಗಳನ್ನು ಧರಿಸಿ, ಕಮಲದ ದಳಗಳಿಗಿಂತ ಸುಂದರವಾಗಿ ಕಣ್ಣುಗಳನ್ನು ಹೊಂದಿರುವ, ಸಂತೋಷವಾಗಿರುವ, ಎಡಭಾಗದಲ್ಲಿ ಅಂದರೆ ಮಡಿಲಲ್ಲಿ ಕುಳಿತಿರುವ ಸೀತೆಯ ಕಮಲದ ಮುಖವನ್ನು ಸ್ಪರ್ಶಿಸುವ ಮತ್ತು ಮೋಡಗಳಂತೆ ಕಪ್ಪಾಗಿರುವ, ಉದ್ದನೆಯ ತೋಳುಗಳನ್ನು ಹೊಂದಿರುವ, ಜಡೆ ಕೂದಲುಳ್ಳ, ವಿವಿಧ ಆಭರಣಗಳಿಂದ ಅಲಂಕರಿಸಲ್ಪಟ್ಟ ಶ್ರೀ ರಾಮನನ್ನು ನಾನು ಧ್ಯಾನಿಸುತ್ತೇನೆ.   ಸ್ತೋತ್ರಂ ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್ । ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾ...

ನಾರಾಯಣೀ ಸ್ತುತಿಃ

ನಾರಾಯಣೀ ಸ್ತುತಿ ಅಥವಾ ದುರ್ಗಾದೇವಿ ಸ್ತುತಿಯು ತಾಯಿ ದುರ್ಗೆಯನ್ನು ಪೂಜಿಸುವ ಶ್ಲೋಕ. ಇದನ್ನು ದೇವೀ ಮಹಾತ್ಮೆಯ ೧೧ನೇ ಅಧ್ಯಾಯದಿಂದ ತೆಗೆದುಕೊಳ್ಳಲಾಗಿದೆ. ಈ ಶ್ಲೋಕವನ್ನು ದುರ್ಗಾಸಪ್ತಶತಿ ಅಥವಾ ಚಂಡೀಪಾಠ ಎಂದೂ ಹೇಳುತ್ತಾರೆ. ದುರ್ಗೆಯು  ನಾರಾಯಣನ ಸಹೋದರಿಯಾದದ್ದರಿಂದ ಅವಳನ್ನು  ನಾರಾಯಣೀ ಎಂದು ಕರೆಯುತ್ತಾರೆ.  ದೇವೀ ಮಾಹಾತ್ಮ್ಯೇ ಏಕಾದಶೋಽಧ್ಯಾಯಃ .. ಓಂ ಋಷಿರುವಾಚ .. ೧.. ದೇವ್ಯಾ ಹತೇ ತತ್ರ ಮಹಾಸುರೇಂದ್ರೇ ಸೇಂದ್ರಾಃ ಸುರಾ ವಹ್ನಿಪುರೋಗಮಾಸ್ತಾಂ  . ಕಾತ್ಯಾಯನೀಂ ತುಷ್ಟುವುರಿಷ್ಟಲಾಭಾದ್ ವಿಕಾಶಿವಕ್ತ್ರಾಬ್ಜವಿಕಾಶಿತಾಶಾಃ .. ೨.. ದೇವಿಯಿಂದ ಅಸುರರ ರಾಜನು ಹತನಾದ ನಂತರ, ಇಂದ್ರ ಮತ್ತು ಅಗ್ನಿಯ ಮತ್ತು ಇತರ ದೇವತೆಗಳು, ತಮ್ಮ ಇಷ್ಟಾರ್ಥಗಳನ್ನು ಪೂರೈಸಿದ್ದಕ್ಕಾಗಿ ಕಾತ್ಯಾಯನಿಯನ್ನು ಸ್ತುತಿಸಿದರು. ಭರವಸೆಗಳು ಈಡೇರಿದ್ದರಿಂದ, ಅವರ ಮುಖಗಳು ಪ್ರಕಾಶಮಾನವಾಗಿ ಅರಳಿದವು. ದೇವಿ ಪ್ರಪನ್ನಾರ್ತಿಹರೇ ಪ್ರಸೀದ ಪ್ರಸೀದ ಮಾತರ್ಜಗತೋಽಖಿಲಸ್ಯ . ಪ್ರಸೀದ ವಿಶ್ವೇಶ್ವರಿ ಪಾಹಿ ವಿಶ್ವಂ ತ್ವಮೀಶ್ವರೀ ದೇವಿ ಚರಾಚರಸ್ಯ .. ೩.. ಓ ದೇವಿ, ನಿನ್ನನ್ನು ಆಶ್ರಯಿಸುವವರ ದುಃಖಗಳನ್ನು ನಿವಾರಿಸುವವಳೇ,  ದಯೆ ತೋರು . ಅಖಿಲ ಜಗದ ತಾಯೇ, ದಯೆ ತೋರು. ಎಲ್ಲರ ಅಧಿಪತಿಯೇ,  ದಯೆ ತೋರು . ಸಕಲ ಚರಾಚರಗಳ  ಅಧಿಪತಿಯೇ, ಬ್ರಹ್ಮಾಂಡವನ್ನು ರಕ್ಷಿಸು. ಆಧಾರಭೂತಾ ಜಗತಸ್ತ್ವಮೇಕಾ ಮಹೀಸ್ವರೂಪೇಣ ಯತಃ ಸ್ಥಿತಾಸಿ . ಅ...

ಮಹಿಷಾಸುರಮರ್ದಿನಿ ಸ್ತೋತ್ರ

ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದನುತೇ   ಗಿರಿವರವಿಂಧ್ಯಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ . ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ   ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ .. ೧..  ಅಯಿ = ಹೇ ತಾಯೇ      ಗಿರಿನಂದಿನಿ = ಪರ್ವತಪುತ್ರಿ    ವಿಶ್ವವಿನೋದಿನಿ = ವಿಶ್ವವೇ ನಿನ್ನ ಆಟ  ನಂದನುತೇ - ನಂದಿಯಿಂದ ಪೂಜಿಸಲ್ಪಡುವವಳು ಗಿರಿವರ = ಅರಿಶ್ರೇಷ್ಠ ಪರ್ವತ ವಿಂಧ್ಯಶಿರೋಧಿನಿವಾಸಿನಿ = ವಿಂಧ್ಯಪರ್ವತ ಶಿಖರದ ಮೇಲೆ ವಾಸಿಸುವಳು   ವಿಷ್ಣುವಿಲಾಸಿನಿ = ವಿಷ್ಣುವಿಗೆ ವಿಲಾಸ ಕೊಡುವವಳು   ಜಿಷ್ಣುನುತೇ=ಇಂದ್ರನಿಂದ ಪೂಜಿಸಲ್ಪಡುವವಳು    ಶಿತಿಕಂಠ = ನೀಲಕಂಠ    ಕುಟುಂಬಿನಿ = ಪತ್ನಿ   ಭೂರಿಕುಟುಂಬಿನಿ= ಅಪಾರ ಕುಟುಂಬವನ್ನು ಹೊಂದಿದವಳು  ಭೂರಿಕೃತೇ = ಅಪಾರವನ್ನು ಸೃಷ್ಟಿಸಿದವಳು ಮಹಿಷಾಸುರಮರ್ದಿನಿ = ಮಹಿಷಾಸುರನನ್ನು ವಧಿಸಿದವಳು     ರಮ್ಯಕಪರ್ದಿನಿ = ರಮ್ಯ ಜಟೆಯವಳು ಶೈಲಸುತೆ =  ಪರ್ವತಪುತ್ರಿ ಸುರವರವರ್ಷಿಣಿ ದುರ್ಧರಧರ್ಷಿಣಿ ದುರ್ಮುಖಮರ್ಷಿಣಿ ಹರ್ಷರತೇ ತ್ರಿಭುವನಪೋಷಿಣಿ ಶಂಕರತೋಷಿಣಿ ಕಿಲ್ಬಿಷಮೋಷಿಣಿ ಘೋಷರತೇ . ದನುಜನಿರೋಷಿಣಿ ದಿತಿಸುತರೋಷಿಣಿ ದುರ್ಮದಶೋಷಿಣಿ ಸಿಂಧುಸುತೇ ಜಯ ಜಯ ಹೇ ಮಹಿಷಾಸು...