ಕಠೋಪನಿಷತ್ - ಪ್ರಥಮಾಧ್ಯಾಯ ಪ್ರಥಮಾ ವಲ್ಲೀ
ಕಠೋಪನಿಷತ್ ಪ್ರಮುಖ ಉಪನಿಷತ್ತುಗಳಲ್ಲಿ ಒಂದು. ಈ ಉಪನಿಷತ್ತು ಆತ್ಮ, ಬ್ರಹ್ಮ ಮತ್ತು ಮುಕ್ತಿಯ ಕುರಿತಾಗಿ ನಚಿಕೇತ ಎಂಬ ಬಾಲಕ ಮತ್ತು ಯಮನ ಮಧ್ಯ ನಡೆಯುವ ಸಂಭಾಷಣೆಯ ರೂಪದಲ್ಲಿದೆ. ಭಾರತಿಯ ತತ್ವಜ್ಞಾನದ ಕೃತಿಗಳ ಪೈಕಿ ಪ್ರಸಿದ್ಧವಾಗಿರುವ ಈ ಕೃತಿಯನ್ನು ಬಹಳಷ್ಟು ಜನ ಪಾಶ್ಚಾತ್ಯ ವಿದ್ವಾಂಸರೂ ಕೂಡ ಅಧ್ಯಯಸಿದ್ದಾರೆ. ಕ್ರಿ.ಶ. ಹದಿನೇಳನೇ ಶತಮಾನದಲ್ಲಿ ಪರ್ಶಿಯನ್ ಭಾಷೆಗೆ ಅನುವಾದವಾದ ಈ ಕೃತಿ ನಂತರ ಲ್ಯಾಟಿನ್ ಭಾಷೆಯಲ್ಲಿ ಅನುವಾದಗೊಂಡು ಯುರೋಪಿನಲ್ಲೆಲ್ಲ ಹಬ್ಬಿಕೊಂಡಿತು. ಪ್ರಸಿದ್ಧ ಕವಿ ಎಡ್ವಿನ್ ಆರ್ನಾಲ್ಡ್ ಈ ಉಪನಿಷತ್ತನ್ನು ಕಾವ್ಯ ರೂಪದಲ್ಲಿ ಬರೆದರೆ (The secret of Death), ರಾಲ್ಫ್ ವಾಲ್ಡೋ ಎಮರ್ಸನ್ ಈ ಉಪನಿಷತ್ತಿನ ಮೇಲೆ ಇಮ್ಮೊರ್ಟಾಲಿಟಿ ಎಂಬ ಪ್ರಬಂಧವನ್ನು ಬರೆದಿದ್ದಾರೆ. ಕಠೋಪನಿಷತ್ ಓಂ .. ಅಥ ಕಠೋಪನಿಷದ್ .. ಓಂ ಸಹ ನಾವವತು . ಸಹ ನೌ ಭುನಕ್ತು . ಸಹವೀರ್ಯಂ ಕರವಾವಹೈ . ತೇಜಸ್ವಿ ನಾವಧೀತಮಸ್ತು . ಮಾ ವಿದ್ವಿಷಾವಹೈ .. ಓಂ ಶಾಂತಿಃ ಶಾಂತಿಃ ಶಾಂತಿಃ .. ಓಂ , ಜೊತೆಯಲ್ಲಿ ನಾವು ಹೋಗೋಣ. ಜೊತೆಯಲ್ಲಿ ನಾವು ಆನಂದಿಸೋಣ. ಜೊತೆಯಲ್ಲಿ ರಭಸದಿಂದ ವಿದ್ಯಾಭ್ಯಾಸವನ್ನು ಮಾಡೋಣ. ನಮ್ಮ ವಿದ್ಯೆ ತೇಜೋಮಯವಾಗಲಿ. ದ್ವೇಷಕ್ಕೆ ಕಾರಣವಾಗದಿರಲಿ. ಓಂ ಶಾಂತಿಃ ಶಾಂತಿಃ ಶಾಂತಿಃ .. Part ...