ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ
ಶಂಕರಾಚಾರ್ಯರು ರಚಿಸಿದ ದೇವ್ಯಾಪರಾಧ ಕ್ಷಮಾಪಣಾ ಸ್ತೋತ್ರ
|
ನ ಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ಸ್ತುತಿ ಮಹೋ ನಚಾಹ್ವಾನಮ್ ಧ್ಯಾನಂ ತದಪಿ ಚನಜಾನೆ ಸ್ತುತಿಕಥಾ | ನ ಜಾನೇ ಮುದ್ರಾಸ್ತೇ ತದಪಿ ಚನಜಾನೆ ವಿಲಪನಂ ಪರಂ ಜಾನೆ ಮಾತಾಸ್ತ್ವದನುಸರಣಂ ಕ್ಲೇಷಹರಣಂ|| |
ತಾಯೇ, ನಿನ್ನ ಮಂತ್ರ ನನಗೆ ತಿಳಿದಿಲ್ಲ. ಯಂತ್ರವೂ ತಿಳಿದಿಲ್ಲ. ನಿನ್ನನ್ನು ಸ್ತುತಿಸಲು ತಿಳಿದಿಲ್ಲ. ಧ್ಯಾನ ಮಾಡಿ ನಿನ್ನನ್ನು ಆಹ್ವಾನಿಸಲು ನಾನು ತಿಳಿದಿಲ್ಲ. ನಿನ್ನ ಸ್ತುತಿ-ಕಥೆಗಳನ್ನು ಹೇಳಲೂ ಅರಿಯೆನು. ನಿನ್ನನ್ನು ಧ್ಯಾನಿಸುವ ಮುದ್ರೆಯನ್ನು ಸಹ ನಾನು ತಿಳಿಯೆನು. ಏನೂ ಮಾಡದೇ ಸುಮ್ಮನೆ ಅಳಲೂ ಅರಿಯೆನು. ಆದರೆ ನಾನು ಒಂದು ಮಾತು ಮಾತ್ರ ನನಗೆ ತಿಳಿದಿದೆ - ನಿನ್ನನ್ನು ಅನುಸರಿಸಿದರೆ, ನಿನ್ನ ಕೃಪೆಯಿಂದ ನನ್ನ ದುಃಖ-ದುರಿತಗಳೆಲ್ಲವೂ ದೂರವಾಗುತ್ತವೆ.
ವಿಧೇರಾ ಧ್ಯಾನೇನ ದ್ರವಿಣವೀರಹೇಣಾಲಸತಯಾ
ವಿಧೇಯಾ ಶಕ್ಯತ್ವಾಂ ತವಚರಣಯೋರ್ಯಾ ಚ್ಯುತಿರಭೂತ್|
ತದೇ ತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೆ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನಭವತಿ||
ಪೂಜೆಯ ವಿಧಿಗಳನ್ನು ತಿಳಿಯದೇ ಅಥವಾ ಹಣದ ಕೊರತೆಯಿಂದ ಅಥವಾ ನನ್ನ ಆಲಸಿತನದಿಂದ, ನಿನ್ನ ಚರಣಸೇವೆ ಮಾಡಲು ನನ್ನಿಂದ ಸಾಧ್ಯವಾಗದೇ ತಪ್ಪಾಗಿದೆ. ಅದನ್ನು ನೀನು ಕ್ಷಮಿಸಬೇಕು, ಯಾಕೆಂದರೆ ತಾಯೇ, ನೀನು ಸಕಲೋದ್ಧಾರಿಣಿಯಾಗಿರುವೆ. ಕುಪುತ್ರ ಎಲ್ಲಾದರರೂ ಸಿಗಬಹುದು. ಆದರೆ ಕೆಟ್ಟ ತಾಯಿ ಎಲ್ಲೂ ಸಹ ಇರುವದಿಲ್ಲ. .
ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಃ ಸಂತಿ ಸರಳಾಃ
ಪರಂ ತೇಷಾಂ ಮಧ್ಯೇ ವಿರಲ ತರಲೋಽಹಂ ತವ ಸುತಃ
ಮದೀಯೋಽಯಂ ತ್ಯಾಗಃ ಸಮುಚಿತ ಮಿದಂ ನೋ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || ೩||
ಪರಂ ತೇಷಾಂ ಮಧ್ಯೇ ವಿರಲ ತರಲೋಽಹಂ ತವ ಸುತಃ
ಮದೀಯೋಽಯಂ ತ್ಯಾಗಃ ಸಮುಚಿತ ಮಿದಂ ನೋ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || ೩||
ಈ ಪ್ರಥ್ವಿಯಲ್ಲಿ ಸರಳ ಸ್ವಭಾವದ ನಿನ್ನ ಮಕ್ಕಳು ಬಹಳ ಇರಬಹುದು.
ಆದರೆ ಅವರ ಮಧ್ಯದಲ್ಲಿ ವಿರಳವಾದ, ಚಂಚಲನಾದ ನಾನೂ ಕೂಡ ನಿನ್ನ ಮಗ. ಅದಕ್ಕಾಗಿ ನೀನು ನನ್ನನ್ನು (ಕ್ಷಮಿಸದೇ) ತ್ಯಜಿಸುವುದು ಸರಿಯಲ್ಲ. ಕುಪತ್ರನೆಲ್ಲಾದರೂ ಇರಬಹುದು ಆದರೆ ಎಂದೂ ಕುಮಾತಾ ಎಲ್ಲೂ ಇರುವದಿಲ್ಲ.
ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ
ನವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ
ತಥಾಪಿ ತ್ವಂ ಸ್ನೇಹಂ ಮಯಿ ನಿರಪಮಂ ಯತ್ಪ್ರಕುರುಷೆ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ||4||
ಜಗನ್ಮಾತೆಯೇ , ಮಾತೆಯೇ, ನಿನ್ನ ಚರಣಸೇವೆಯನ್ನು ನಾನು ಮಾಡಲಿಲ್ಲ. ನಿನ್ನ ಚರಣಕ್ಕೆ ಕಾಣಿಕೆಯನ್ನೂ ಹಾಕಲಿಲ್ಲ .ಆದರೂ ಸಹ ನೀನು ನನ್ನಲ್ಲಿ ನಿರುಪಮ ಸ್ನೇಹವನ್ನು ತೋರಿಸಿರುವೆ. ಕುಪುತ್ರ ಎಲ್ಲಾದರೂ ಇರಬಹುದು, ಆದರೆ ಎಲ್ಲೂ ಕುಮಾತಾ ಇರುವದಿಲ್ಲ .
ಪರಿತ್ಯಕ್ತ್ವಾ ದೇವಾ ವಿವಿಧವಿಧಸೇವಾಕುಲತಯಾ
ಮಯಾ ಪಂಚಾಶೀತಾರಧಿಕಮಪನೀತೇ ತು ವಯಸಿ
ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲಂಬೋ ಲಂಬೋದರ ಜನನಿ ಕಂ ಯಾಮಿ ಶರಣಂ||5||
ದೇವರ ವಿವಿಧ-ವಿಧ ಸೇವೆಗಳನ್ನು ಮಾಡುವದನ್ನು ನಾನು ತ್ಯಜಿಸಿ ಎಂಬತ್ತೈದು ವರುಷಗಳೇ ಕಳೆದಿವೆ. ಹೇ ಲಂಬೋದರಜನನೀ, ಮಾತೆ, ಈಗಲೂ ನಿನ್ನ ಕೃಪೆಯಾಗದಿದ್ದರೆ, ಬೆಂಬಲವಿಲ್ಲದ ನಾನು ಯಾರಿಗೆ ತಾನೆ ಶರಣು ಹೋಗಬೇಕು? .
ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈಃ .
ತವಾಪರ್ಣೇ ಕರ್ಣೇ ವಿಶತಿ ಮನು ವರ್ಣೇ ಫಲಮಿದಂ
ಜನಃ ಕೋ ಜಾನೀತೇ ಜನನಿ ಜನನೀಯಂ ಜಪವಿಧೌ ||6||
ನಿರಾತಂಕೋ ರಂಕೋ ವಿಹರತಿ ಚಿರಂ ಕೋಟಿಕನಕೈಃ .
ತವಾಪರ್ಣೇ ಕರ್ಣೇ ವಿಶತಿ ಮನು ವರ್ಣೇ ಫಲಮಿದಂ
ಜನಃ ಕೋ ಜಾನೀತೇ ಜನನಿ ಜನನೀಯಂ ಜಪವಿಧೌ ||6||
ಹೇ ಅಪರ್ಣೆ - ನಿನ್ನ ಜಪವು ಕಿವಿಯ ಮೇಲೆ ಬಿದ್ದ ಫಲದಿಂದ ನಾಯಿಯನ್ನು ತಿನ್ನುವ ಚಂಡಾಲನು ಸಹ, ಜೇನಿನಂತೆ ಮಧುರವಾಗಿ ಮಾತನಾಡತೊಡಗುತ್ತಾನೆ. ತೀರಾ ದರಿದ್ರನು ಕೋಟಿ ಐಶ್ವರ್ಯ ಸಿಕ್ಕಿ ನಿರಾತಂಕದಿಂದ ವಿಹರಿಸುತ್ತಾನೆ. ಹೇ ಜನನೀ - ನಿನ್ನ ಜಪದಿಂದ ಆಗುವ ಫಲಗಳು ಯಾರಿಗೇ ತಾನೇ ತಿಳಿದಿದೆ ?
ಚಿತಾಭಸ್ಮಾಲೇಪೋ ಗರಲಮಶನಂ ದಿಕ್ಪಟಧರೋ
ಜಟಾಧಾರೀ ಕಂಠೇ ಭುಜಗಪತಿಹಾರೀ ಪಶುಪತಿಃ .
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನಿ ತ್ವತ್ಪಾಣಿಗ್ರಹಣಪರಿಪಾಟೀಫಲಮಿದಂ ||7||
ಜಟಾಧಾರೀ ಕಂಠೇ ಭುಜಗಪತಿಹಾರೀ ಪಶುಪತಿಃ .
ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ
ಭವಾನಿ ತ್ವತ್ಪಾಣಿಗ್ರಹಣಪರಿಪಾಟೀಫಲಮಿದಂ ||7||
ಈಶ್ವರನು ಚಿತಾಭಸ್ಮವನ್ನು ಲೇಪಿಸಿಕೊಂಡು, ವಿಷವನ್ನು ಕುಡಿದು ದಿಕ್ಕನ್ನೇ ಬಟ್ಟೆಯಾಗಿ ಧರಿಸಿದವನಾಗಿ, ಜಟಾಧಾರಿಯಾಗಿ, ಕಂಠದಲ್ಲಿ ಸರ್ಪವನ್ನು ಧರಿಸಿ, ಪಶುಪತಿಯಾದರೂ ಎಲ್ಲ ಭೂತಗಳ ಈಶನಾಗಿ, ಜಗದೀಶ ಎಂಬ ಪದವಿ ಹೊಂದಿ, ಕೈಯಲ್ಲಿ ಕಪಾಲವನ್ನು ಹಿಡಿದಿದ್ದಾನೆ. ಭವಾನಿ, ಇದೆಲ್ಲ (ಅವನು) ನಿನ್ನ ಪಾಣಿಗೃಹಣ ಮಾಡಿದ ಫಲ.
ನ ಮೋಕ್ಷಸ್ಯಾಕಾಂಕ್ಷಾ ಭವವಿಭವವಾಂಛಾಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ನ ಪುನಃ|
ಅತಸ್ತ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತಃ ||8||
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ನ ಪುನಃ|
ಅತಸ್ತ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತಃ ||8||
ನನಗೆ ಮೋಕ್ಷದ ಆಸೆಯಿಲ್ಲ. ಐಶ್ವರ್ಯದ ಆಸೆಯೂ ಇಲ್ಲ. ಜ್ಞಾನದ ಆಸೆಯೂ ಇಲ್ಲ, ಶಶಿಮುಖಿಯೇ, ನನಗೆ ಸುಖದ ಆಸೆಯೂ ಇಲ್ಲ. ಇನ್ನು ಮುಂದೆ ನಾನು ನಿನ್ನನ್ನು ಬೇಡುವದಿಷ್ಟೇ ತಾಯೇ. ಮೃಡಾನೀ ರುದ್ರಾಣೀ ಶಿವ ಶಿವ ಭವಾನೀ, ನೀನು ನನ್ನ ಜೀವನವನ್ನು ನಿನ್ನ ಜಪದ ಕಡೆಗೆ ತಿರುಗಿಸು,
ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ
ಕಿಂ ರುಕ್ಷಚಿಂತನಪರೈರ್ನ ಕೃತಂ ವಚೋಭಿಃ .
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ ||9||
ಕಿಂ ರುಕ್ಷಚಿಂತನಪರೈರ್ನ ಕೃತಂ ವಚೋಭಿಃ .
ಶ್ಯಾಮೇ ತ್ವಮೇವ ಯದಿ ಕಿಂಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮಂಬ ಪರಂ ತವೈವ ||9||
ನಿನ್ನನ್ನು ವಿಧಿಪೂರ್ವಕವಾಗಿ, ವಿವಿಧೋಪಚಾರಗಳಿಂದ ನಾನು ಆರಾಧಿಸಿಲ್ಲ. ಒರಟು ಚಿಂತನೆ ಮಾಡಿ, ಒರಟು ಮಾತುಗಳನ್ನು ಆಡಿರಬಹುದು. ಶ್ಯಾಮೆ, ಹೇ ಅಂಬಾ, ಆದರೂ ನೀನು ಈ ಅನಾಥನಲ್ಲಿ ಕಿಂಚಿತ್ ಕೃಪೆ ಮಾಡಿರುವೆ, .
ಆಪತ್ಸು ಮಗ್ನಃ ಸ್ಮರಣಂ ತ್ವದೀಯಂ
ಕರೋಮಿ ದುರ್ಗೇ ಕರುಣಾರ್ಣವೇಶಿ .
ನೈತಚ್ಛಠತ್ವಂ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾ ಜನನೀಂ ಸ್ಮರಂತಿ .. 10..
ಕರೋಮಿ ದುರ್ಗೇ ಕರುಣಾರ್ಣವೇಶಿ .
ನೈತಚ್ಛಠತ್ವಂ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾ ಜನನೀಂ ಸ್ಮರಂತಿ .. 10..
ಆಪತ್ತಿನಲ್ಲಿ ಮುಳುಗಿರುವೆ , ಅದಕ್ಕಾಗೇ ನಿನ್ನ ಸ್ಮರಣೆ ಮಾಡುತ್ತಿರುವೆ ದುರ್ಗೆ, ಕರುಣಾ ಸಾಗರೇ, ಈಶೇ, ನನ್ನ ಭಾವನೆಗಳು ಸುಳ್ಳು ಎಂದುಕೊಳ್ಳಬೇಡ. (ಯಾಕೆಂದರೆ) ಹಸಿವೆಯಾದಾಗ, ಬಾಯಾರಿಕೆಯಾದಾಗ ಜನರು ತಾಯಿಯನ್ನು ತಾನೇ ಸ್ಮರಿಸುತ್ತಾರೆ.
ಜಗದಂಬ ವಿಚಿತ್ರ ಮತ್ರ ಕಿಂ
ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ .
ಅಪರಾಧಪರಂಪರಾಪರಂ
ನ ಹಿ ಮಾತಾ ಸಮುಪೇಕ್ಷತೇ ಸುತಂ .. 11..
ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ .
ಅಪರಾಧಪರಂಪರಾಪರಂ
ನ ಹಿ ಮಾತಾ ಸಮುಪೇಕ್ಷತೇ ಸುತಂ .. 11..
ಜಗದಂಬೆಯೇ- ಏನು ವಿಚಿತ್ರವಿದು. ಯಾವಾಗಲು ತಾಯಿಯು ಕರುಣೆಯಿಂದ ಪರಿಪೂರ್ಣವಾಗಿರುತ್ತಾಳೆ. ಅಪರಾಧದ ಮೇಲೆ ಅಪರಾಧ ಮಗನು ಮಾಡುತ್ತಿದ್ದರೂ, ತಾಯಿಯು ಮಗನನ್ನು ಕಡೆಗಣಿಸುವದಿಲ್ಲ.
ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ .
ಏವಂ ಜ್ಞಾತ್ವಾ ಮಹಾದೇವಿ ಯಥಾಯೋಗ್ಯಂ ತಥಾ ಕುರು .. 12.. ಓಂ ..
ಏವಂ ಜ್ಞಾತ್ವಾ ಮಹಾದೇವಿ ಯಥಾಯೋಗ್ಯಂ ತಥಾ ಕುರು .. 12.. ಓಂ ..
ನನ್ನಷ್ಟು ಪಾಪಿ ಇನ್ಯಾರೂ ಇಲ್ಲ, ನಿನ್ನಷ್ಟು ಪಾಪನಾಶಿನಿಯೂ ಇನ್ಯಾರೂ ಇಲ್ಲ. ಇದನ್ನು ತಿಳಿದಿರುವ ನೀನು, ಯಥಾ ಯೋಗ್ಯವೋ ಅದನ್ನು ಮಾಡು.
Comments
Post a Comment