ಭಗವದ್ಗೀತಾ ಆರತಿ
ನಮ್ಮ ಧರ್ಮದ ಯಾವುದಾದರೂ ಕೃತಿ ಅತಿ ಪ್ರಸಿದ್ಧವಾಗಿದೆ ಎಂದರೆ ಅದು ಭಗವದ್ಗೀತೆ. ಬಹಳ ಕ್ಲಿಷ್ಟವಲ್ಲದ ಭಾಷೆಯಲ್ಲಿ ಜನ-ಸಾಮಾನ್ಯರೂ ಅರಿಯಬಲ್ಲಾದ ತತ್ವಜ್ಞಾನವನ್ನು ತಿಳಿಸಿಹೇಳಿ ಮನುಜರ ಮನಸ್ಸನ್ನು ಪ್ರಶಾಂತಗೊಳಿಸುವ ಕೃತಿ ಇದು. ಆದರೆ ಒಂದು ಸಮಸ್ಯೆಯೆಂದರೆ ಭಗವದ್ಗೀತೆ ಇರುವದು ಸಂಸ್ಖೃತದಲ್ಲಿ - ಅದೂ ಪದ್ಯ ರೂಪದಲ್ಲಿ - ಸ್ವಲ್ಪ ಕಷ್ಟ. ನಮ್ಮ ತಾಯಿ ಅವರ ಸೋದರತ್ತೆಯಿಂದ ಕಲಿತ ಗೀತೆಯ ಕನ್ನಡಾನುವಾದ - ಸಂಕ್ಷಿಪ್ತ ಅನುವಾದ - ಅದೂ ಆರತಿಯ ಪದ್ಯ ರೂಪದಲ್ಲಿರುವ ಅನುವಾದ ಮೊನ್ನೆ ಕೇಳಿದೆ. ಬಹಳ ಇಷ್ಟವಾಯಿತು. ನಿಮಗೆ ಹೇಗೆನಿಸುತ್ತದೆ ನೋಡಿ. --------------------------------------------------------------------- ಧನ್ಯನಾದೆನು ಕೇಳಿ ನಿನ್ನಿಂದ | ಮನದೊಳಗೆ ನಿಂದ| ಮೋಹವಡಗಿತು ಹರಿಯೆ ಭರದಿಂದ|| ಜ್ಞಾನದಿಂ ಭೂತಗಳ ಸೃಷ್ಟಿ | ಪ್ರಳಯ ನಿನ್ನಿಂದೆಂಬುದರಿತೆನು| ವಿಶ್ವರೂಪವ ನಿನ್ನದನು| ತೋರೆಂದ ಪಾರ್ಥಗೆ ತೋರಿದಾತನಿ|| ಗಾರತಿಯ ನಾನೆತ್ತಿ ಬೇಡುವೆನು| ಶ್ರೀ ಹರಿಯೆ ವರವನು| ನೀಡು ನೀ ನಿನಗಿಷ್ಟವಾದುದನು||೧|| ನೋಡಲಾಗದು ನರನೆ ನಿನ್ನಿಂದ| ಈ ಕಣ್ಣಿನಿಂದ| ನನ್ನ ರೂಪವ ನಿನ್ನ ಮುನ್ನಿಂದ|| ದಿವ್ಯ ನೇತ್ರವ ಕೊಡುವೆ ನೀ| ನೋಡೆನ್ನನೆಂದವಗಿತ್ತು ತೋರುವ| ವಿಶ್ವರೂಪವ ಧರಿಸಿ ನಾನಾ ರೂಪದಿಂ ಮುನ್ನಿಂದ ಮಾಧವ|| ಗಾರತಿಯ ನಾನೆತ್ತಿ ಬೇಡುವೆನು||೨|| ನೋಡು ನೀನೆಂದೆನುತ ಗೋವಿಂದ | ಬಹುರೂಪದಿಂದ...